ಮಧ್ಯಪ್ರದೇಶದಲ್ಲಿ ಖಾತೆ ತೆರೆದ ಆಮ್ ಆದ್ಮಿ ಪಕ್ಷ...!

 ಸಿಂಗ್ರೌಲಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಆಪ್ ಅಭ್ಯರ್ಥಿ ರಾಣಿ ಅಗರವಾಲ್ 9,300 ಮತಗಳಿಂದ ಜಯಗಳಿಸುವುದರೊಂದಿಗೆ, ಆಮ್ ಆದ್ಮಿ ಪಕ್ಷವು ಇಂದು ಮಧ್ಯಪ್ರದೇಶದಲ್ಲಿ ಅಧಿಕೃತವಾಗಿ ಖಾತೆಯನ್ನು ತೆರೆದಿದೆ.

Written by - Manjunath Naragund | Last Updated : Jul 17, 2022, 07:34 PM IST
  • ಮಧ್ಯಪ್ರದೇಶದಲ್ಲಿ ಮೊದಲ ಹಂತದ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯ ಎಣಿಕೆ ಇಂದು ಬೆಳಗ್ಗೆ ಆರಂಭವಾಗಿದೆ.
  • ಮೊದಲ ಹಂತದಲ್ಲಿ ಜುಲೈ 6 ರಂದು 11 ಮುನ್ಸಿಪಲ್ ಕಾರ್ಪೊರೇಷನ್, 36 ನಗರ ಪಾಲಿಕೆ ಮತ್ತು 86 ನಗರ ಪರಿಷತ್‌ಗಳಲ್ಲಿ ಮತದಾನ ನಡೆದಿತ್ತು.
ಮಧ್ಯಪ್ರದೇಶದಲ್ಲಿ ಖಾತೆ ತೆರೆದ ಆಮ್ ಆದ್ಮಿ ಪಕ್ಷ...! title=
Photo Courtsey: Twitter

ಭೂಪಾಲ್: ಸಿಂಗ್ರೌಲಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಆಪ್ ಅಭ್ಯರ್ಥಿ ರಾಣಿ ಅಗರವಾಲ್ 9,300 ಮತಗಳಿಂದ ಜಯಗಳಿಸುವುದರೊಂದಿಗೆ, ಆಮ್ ಆದ್ಮಿ ಪಕ್ಷವು ಇಂದು ಮಧ್ಯಪ್ರದೇಶದಲ್ಲಿ ಅಧಿಕೃತವಾಗಿ ಖಾತೆಯನ್ನು ತೆರೆದಿದೆ.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ರಾಣಿ ಅಗರವಾಲ್ ಅವರು ನಿರ್ಗಮಿತ ಸಿಂಗ್ರೌಲಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಆಗಿದ್ದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಚಂದ್ರ ಪ್ರತಾಪ್ ವಿಶ್ವಕರ್ಮ ವಿರುದ್ಧ ಗೆಲುವನ್ನು ಸಾಧಿಸಿದ್ದಾರೆ.

ಈಗ ಈ ಗೆಲುವಿನ ಹಿನ್ನೆಲೆಯಲ್ಲಿ ಟ್ವೀಟ್ ಮೂಲಕ ಆಪ್ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶ್ರೀಮತಿ ಅಗರವಾಲ್ ಅವರನ್ನು ಅಭಿನಂದಿಸುತ್ತಾ ದೇಶದಾದ್ಯಂತ ಜನರು ತಮ್ಮ ಪಕ್ಷದ ಪ್ರಾಮಾಣಿಕ ರಾಜಕೀಯವನ್ನು ಮೆಚ್ಚುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಿಂಗ್ರೌಲಿ ಮುನ್ಸಿಪಲ್ ಕಾರ್ಪೊರೇಶನ್ ಆದಾಯದ ದೃಷ್ಟಿಯಿಂದ ಇಂದೋರ್ ನಂತರ ರಾಜ್ಯದ ಎರಡನೇ ಶ್ರೀಮಂತ ಮುನ್ಸಿಪಲ್ ಕಾರ್ಪೊರೇಶನ್ ಆಗಿದೆ. ಸಿಂಗ್ರೌಲಿ ಜಿಲ್ಲೆಯನ್ನು ರಾಜ್ಯದ ವಿದ್ಯುತ್ ಉತ್ಪಾದಕ ಮತ್ತು ಕಲ್ಲಿದ್ದಲು ಮತ್ತು ಖನಿಜ ಗಣಿಗಾರಿಕೆ ಕೇಂದ್ರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಗುರಾಯಿಸಿದ್ದಕ್ಕೆ‌ ರೌಡಿಗಳ‌‌ ನಡುವೆ ಮಾರಾಮಾರಿ: ಎಣ್ಣೆ ಬಾಟಲ್‌ನಲ್ಲಿ ಬಡಿದಾಟ

ಇತ್ತೀಚೆಗೆ ಮೇಯರ್ ಚುನಾವಣೆಗಳು ನಡೆದ ಮಧ್ಯಪ್ರದೇಶದ 11 ನಾಗರಿಕ ಸಂಸ್ಥೆಗಳಲ್ಲಿ, ಬಿಜೆಪಿ ಇದುವರೆಗೆ ಬುರ್ಹಾನ್‌ಪುರ, ಸತ್ನಾ, ಖಾಂಡ್ವಾ ಮತ್ತು ಸಾಗರ್‌ನಲ್ಲಿ ವಿಜಯಶಾಲಿಯಾಗಿದೆ, ಆದರೆ ಎಎಪಿ ಸಿಂಗ್ರೌಲಿಯಲ್ಲಿ ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆದಿದೆ. ಕಾಂಗ್ರೆಸ್ ಇದುವರೆಗೆ ಒಂದು ಸ್ಥಾನವನ್ನು ಗೆದ್ದಿದೆ.

ಬಿಜೆಪಿ ಅಭ್ಯರ್ಥಿಗಳಾದ ಮಾಧುರಿ ಪಟೇಲ್, ಯೋಗೇಶ್ ತಾಮಾರ್ಕರ್, ಅಮೃತಾ ಅಮರ್ ಯಾದವ್ ಮತ್ತು ಸಂಗೀತಾ ತಿವಾರಿ ಅವರು ಕ್ರಮವಾಗಿ ಬುರ್ಹಾನ್‌ಪುರ, ಸತ್ನಾ, ಖಾಂಡ್ವಾ ಮತ್ತು ಸಾಗರ್‌ಗೆ ನಡೆದ ಮೇಯರ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮೊಸಳೆಯನ್ನು ಕೊಂದು ಹಾಕಿದ ದೈತ್ಯ ಹಾವು.. ಭಯಾನಕ ಕಾದಾಟ ಕ್ಯಾಮೆರಾ ಕಣ್ಣಲ್ಲಿ ಸೆರೆ

ಮಧ್ಯಪ್ರದೇಶದಲ್ಲಿ ಮೊದಲ ಹಂತದ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯ ಎಣಿಕೆ ಇಂದು ಬೆಳಗ್ಗೆ ಆರಂಭವಾಗಿದೆ.ಮೊದಲ ಹಂತದಲ್ಲಿ ಜುಲೈ 6 ರಂದು 11 ಮುನ್ಸಿಪಲ್ ಕಾರ್ಪೊರೇಷನ್, 36 ನಗರ ಪಾಲಿಕೆ ಮತ್ತು 86 ನಗರ ಪರಿಷತ್‌ಗಳಲ್ಲಿ ಮತದಾನ ನಡೆದಿತ್ತು. 

16 ನಗರ ಪಾಲಿಕೆ ನಿಗಮ, 99 ನಗರ ಪಾಲಿಕೆ ಪರಿಷತ್ ಮತ್ತು 298 ನಗರ ಪರಿಷತ್ ಸೇರಿದಂತೆ ರಾಜ್ಯದ 413 ಪುರಸಭೆಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಜುಲೈ 6 ಮತ್ತು ಜುಲೈ 13 ರಂದು ಎರಡು ಹಂತಗಳಲ್ಲಿ ನಡೆದಿದ್ದು, ಎರಡನೇ ಹಂತದ ಚುನಾವಣೆಯ ಮತ ಎಣಿಕೆ ಜುಲೈ 20 ರಂದು ನಡೆಯಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News