ಮಡಿಕೇರಿಯಲ್ಲಿ‌ 8.280 ಲೀಟರ್ ಅಕ್ರಮ ಮದ್ಯ ವಶ

ಸರ್ಕಾರ ಲಾಕ್‍ಡೌನ್‍ನ್ನು ಮೇ 3ರವರೆಗೆ ವಿಸ್ತರಿಸಿರುವುದರಿಂದ ಮದ್ಯ ನಿಷೇಧ ಸಂದರ್ಭದಲ್ಲಿ ಅಕ್ರಮ ನಡೆಯದಂತೆ ನಿಗಾವಹಿಸಲು ಈಗಾಗಲೇ ಅಬಕಾರಿ ತಂಡಗಳನ್ನು ರಚಿಸಲಾಗಿದೆ. 

Last Updated : Apr 16, 2020, 07:35 AM IST
ಮಡಿಕೇರಿಯಲ್ಲಿ‌ 8.280 ಲೀಟರ್ ಅಕ್ರಮ ಮದ್ಯ ವಶ title=

ಬೆಂಗಳೂರು: ಮಡಿಕೇರಿ ಜಿಲ್ಲೆಯಾದ್ಯಂತ ಕೊರೋನಾವೈರಸ್  (Coronavirus) ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಮಾರ್ಚ್ 23 ರಿಂದ  ಲಾಕ್‍ಡೌನ್ (Lockdown)  ಜಾರಿಗೆ ತರಲಾಗಿದ್ದು ಈ ಹಿನ್ನಲೆಯಲ್ಲಿ ಮದ್ಯ ಮಾರಾಟ ವಹಿವಾಟನ್ನು ನಿಷೇದಿಸಲಾಗಿದೆ. 

ಪರಿಸ್ಥಿತಿಯ ದುರ್ಲಾಭ ಪಡೆದು ಕೆಲ ಕಿಡಿಗೇಡಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ವಿಪರೀತವಾಗಿ ಕಳ್ಳಭಟ್ಟಿ, ಗೇರುಹಣ್ಣಿನ ಸಾರಾಯಿಯಂತಹ ಮಾದಕ ದ್ರವ್ಯಗಳ ಅಕ್ರಮ ತಯಾರಿಕೆ ಮತ್ತು ಮಾರಾಟ ನಡೆಸುತ್ತಿರುವುದು ಅಬಕಾರಿ ಇಲಾಖೆಯ ಗಮನಕ್ಕೆ ಬಂದಿದೆ. 

ಸರ್ಕಾರ ಲಾಕ್‍ಡೌನ್‍ನ್ನು ಮೇ 3ರವರೆಗೆ ವಿಸ್ತರಿಸಿರುವುದರಿಂದ ಮದ್ಯ (Liquor) ನಿಷೇಧ ಸಂದರ್ಭದಲ್ಲಿ ಅಕ್ರಮ ನಡೆಯದಂತೆ ನಿಗಾವಹಿಸಲು ಈಗಾಗಲೇ ಅಬಕಾರಿ ತಂಡಗಳನ್ನು ರಚಿಸಲಾಗಿದೆ. ಅಕ್ರಮಗಳು ನಡೆಯದಂತೆ ಪ್ರತಿ ದಿನ ದಾಳಿ ಹಾಗೂ ಗಸ್ತು ನಡೆಸಲಾಗುತ್ತಿದೆ. 

ಇಲ್ಲಿಯವರಗೆ 308 ದಾಳಿಗಳಲ್ಲಿ 10 ಪ್ರಕರಣಗಳನ್ನು ದಾಖಲಿಸಿ, 745 ಲೀ. ಬೆಲ್ಲದ ಹುಳಿರಸ, 13.750 ಲೀ. ಕಳ್ಳಭಟ್ಟಿ ಸಾರಾಯಿ, 8.280 ಲೀ. ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರಾದ ಪಿ. ಬಿಂದುಶ್ರೀ ಅವರು ಮಾಹಿತಿ ನೀಡಿದ್ದಾರೆ.

Trending News