Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!

ವರ್ಗಾವಣೆ ಮಾಡಿ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ. ಇದ್ರಲ್ಲಿ 1749 ಕಾನ್ಸ್ ಟೇಬಲ್, 1292 ಹೆಡ್ ಕಾನ್ಸ್ಟೇಬಲ್, 43 ಎಎಸ್ಐ ಹಾಗೂ  163 ಪಿಎಸ್ಐಗಳಿದ್ದಾರೆ.

Written by - VISHWANATH HARIHARA | Last Updated : Jul 2, 2022, 12:56 PM IST
  • ದಾಖಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ವರ್ಗಾವಣೆ
  • ಐದು ವರ್ಷ ಒಂದೇ ಠಾಣೆಯಲ್ಲಿದ್ದವರಿಗೆ ವರ್ಗಾವಣೆ
  • ಒಂದೇ ದಿನ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನ ವರ್ಗಾವಣೆ
Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ! title=

ಬೆಂಗಳೂರು : ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ದಾಖಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ  ವರ್ಗಾವಣೆಯಾಗಿದೆ.

ಐದು ವರ್ಷ ಒಂದೇ ಠಾಣೆಯಲ್ಲಿದ್ದವರಿಗೆ ವರ್ಗಾವಣೆ ಮಾಡಿ ಇಲಾಖೆ ಆದೇಶ ಹೊರಡಿಸಿದ್ದು ಒಂದೇ ದಿನ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನ ವರ್ಗಾವಣೆ ಮಾಡಿ ಅದೇಶಿಸಿದೆ. ಪಿಎಸ್ಐ ನಿಂದ ಹಿಡಿದು ಕಾನ್ಸ್ ಟೇಬಲ್ ವರೆಗೂ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ : ಫಲಾನುಭವಿಗಳ 70 ಲಕ್ಷ ರೂ. ದುರ್ಬಳಕೆ ಪ್ರಕರಣ: ಭೋವಿ ಅಭಿವೃದ್ಧಿ ನಿಗಮದ GM ನಾಗರಾಜಪ್ಪ ಬಂಧನ

ವರ್ಗಾವಣೆ ಮಾಡಿ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ. ಇದ್ರಲ್ಲಿ 1749 ಕಾನ್ಸ್ ಟೇಬಲ್, 1292 ಹೆಡ್ ಕಾನ್ಸ್ಟೇಬಲ್, 43 ಎಎಸ್ಐ ಹಾಗೂ  163 ಪಿಎಸ್ಐಗಳಿದ್ದಾರೆ.

ಇನ್ನೂ ಈ ಮಟ್ಟದ ವರ್ಗಾವಣೆ ಇಲಾಖೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಆಗಿದೆ.

ಇದನ್ನೂ ಓದಿ : Bengaluru Crime : ಮಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News