ಲಾಕ್‌ಡೌನ್‌ ಪರಿಸ್ಥಿತಿ ನಿಭಾಯಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಂದ 14 ಸೂಚನೆಗಳು

ಈಗಾಗಲೇ ಸೀಜ್ ಮಾಡಿರುವವರ ವೆಹಿಕಲ್ ಓನರ್ ಗಳುಗೆ ಸೂಚಿಸಬೇಕು ಇನ್ನೊಮ್ಮೆ ಹೀಗೆ ಮಾಡದಂತೆ ತಿಳಿ ಹೇಳಿ ಬಿಡಬೇಕು. ಮತ್ತೆ ಆ ರೀತಿ ಆದರೆ ಟು ವ್ಹೀಲರ್ ಜೊತೆ 4ವ್ಹೀಲರ್ ಕೂಡ ಸೀಜ್ ಮಾಡ್ತೀವಿ ಅಂತ ವಾರ್ನಿಂಗ್ ನೀಡಬೇಕು.

Written by - Yashaswini V | Last Updated : Mar 30, 2020, 12:42 PM IST
ಲಾಕ್‌ಡೌನ್‌ ಪರಿಸ್ಥಿತಿ ನಿಭಾಯಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಂದ 14 ಸೂಚನೆಗಳು title=
File Image

ಬೆಂಗಳೂರು: ಲಾಕ್ ಡೌನ್ (Lockdown) ಕಾರಣದಿಂದ ಬಹಳಷ್ಟು ಜನಕ್ಕೆ ತೊಂದರೆ ಆಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ (Bangalore Police Commissioner) ಭಾಸ್ಕರ್ ರಾವ್ (Bhaskar Rao) ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು ಏನೇನೂ ಕ್ರಮ ತೆಗೆದುಕೊಳ್ಳಬೇಕೆಂಬುದಾಗಿ14 ಸೂಚನೆಗಳನ್ನು ನೀಡಿದ್ದಾರೆ.

ಭಾಸ್ಕರ್ ರಾವ್ (Bhaskar Rao) ನೀಡಿರುವ 14 ಸೂಚನೆಗಳು ಈ ರೀತಿ ಇವೆ.

1. ಹಾಲು ಪೇಪರ್ ತರಕಾರಿ ತೆಗೆದುಕೊಳ್ಳುವವರಿಗೆ ಹಿಂಸೆ ಕೊಡಬಾರದು. ಎಟಿಎಂ ಕ್ಯಾಶ್ ತುಂಬುವವರಿಗೆ ಅವಕಾಶ ಕೊಡಬೇಕು ಪಾಸ್ ಇಲ್ಲದವರಿಗೆ ಅವಕಾಶ ಮಾಡಿಕೊಡಬೇಕು.

2. ದಿನಸಿ ಅಂಗಡಿಗಳು, ಮಾರ್ಟ್ ಗಳಲ್ಲಿ ಸೋಷಿಯಲ್ ಡಿಸ್ಟೆನ್ಸ್ ಮೇಂಟೈನ್ ಮಾಡಿರಬೇಕು ಅದಕ್ಕಾಗೆ ಪೇಂಟ್ ಮಾಡಿಸಬೇಕು ಚಾಪೀಸ್ ನಲ್ಲಿ ಬರೆಯಬಾರದು.

3. ಪ್ರತಿ ಪೊಲೀಸ್ ಠಾಣೆಯಲ್ಲಿ ಪಿಆರ್ ಓ ಆಫೀಸ್ ಕ್ರಿಯೇಟ್ ಮಾಡಿ ಜನಕ್ಕೆ ಸರಿಯಾಗಿ ಸ್ಪಂದಿಸಬೇಕು ಸಮಸ್ಯೆ ಸರಿ ಹೋಗಿಲ್ಲ ಅಂದಲ್ಲಿ ಡಿಸಿಪಿ ಎಸಿಪಿಗಳ ಹತ್ತಿರ ಕಳುಹಿಸಬೇಕು ಜನರಿಗೆ ಅವಮಾನ ಮಾಡದೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು.

4. ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಗಳನ್ನ ಹಾಕಿ ವಾಹನಗಳನ್ನ ನಿಲ್ಲಿಸಬೇಕು ಎಮರ್ಜನ್ಸಿ ಇದ್ದರೆ ಮಾತ್ರ ಬಿಡಬೇಕು ಆಯಾ ಜಾಗದಲ್ಲಿ ಪೊಲೀಸರೂ ಇರಬೇಕು.

5. ಈಗಾಗಲೇ ಸೀಜ್ ಮಾಡಿರುವವರ ವೆಹಿಕಲ್ ಓನರ್ ಗಳುಗೆ ಸೂಚಿಸಬೇಕು ಇನ್ನೊಮ್ಮೆ ಹೀಗೆ ಮಾಡದಂತೆ ತಿಳಿ ಹೇಳಿ ಬಿಡಬೇಕು. ಮತ್ತೆ ಆ ರೀತಿ ಆದರೆ ಟು ವ್ಹೀಲರ್ ಜೊತೆ 4ವ್ಹೀಲರ್ ಕೂಡ ಸೀಜ್ ಮಾಡ್ತೀವಿ ಅಂತ ವಾರ್ನಿಂಗ್ ನೀಡಬೇಕು.

6. ಎಲ್ಲಾ ಕಡೆ ಪಾಸ್ ಗಳು ಇಶ್ಯೂ ಆಗಿದೆ ತುಂಬಾ ಸಂಖ್ಯೆಯಲ್ಲಿ ಪಾಸ್ ಇಶ್ಯೂ ಆಗಿದೆ ಇದನ್ನ ಎಸಿಪಿಗಳು ಚೆಕ್ ಮಾಡ್ಬೇಕು.ಊಟ ಪೂರೈಕೆ ಹಾಗೂ ಅಗತ್ಯ ಇರುವವರಿಗೆ ಮಾತ್ರ ಪಾಸ್ ನೀಡಬೇಕು ಅದನ್ನ ಇಟೇಕೊಂಡು ಓಡಾಡೋರನ್ನ ಕೂಡ ಚೆಕ್ ಮಾಡಬೇಕು.

7.ಪೊಲೀಸರು ಎಲ್ಲಾಭಾಗದ ವಿಡಿಯೋ ಚಿತ್ರಣ ಮಾಡಬೇಕು.

8. ನೋ ಲಾಠಿ ಬಂದೋಬಸ್ತ್ ಲಾಠಿ ಉಪಯೋಗಿಸಬೇಡಿ.ಹಾಗೆ ವೆಹಿಕಲೇ ಸೀಜ್ ಮಾಡಿದ್ರೆ ವಿಡಿಯೋ ಗ್ರಾಫ್ ಮಾಡಿಕೊಳ್ಳಬೇಕು.

9. ಪಿಜಿಗಳ ಓನರ ತೊಂದರೆ ಕೊಡ್ತಿದ್ದಾರೆ ಅವರಿಗೆ ವಾರ್ನ್ ಮಾಡಿ ಓನರ್ ಗಳಿಗೆ ಬುದ್ಧಿ ಹೇಳಿ ರೆಂಟ್ ತೆಗೆದುಕೊಳ್ಶಬಾರದು ಪಿಜಿಯಲ್ಲೇ ಊಟದ ವ್ಯವಸ್ಥೆ ಮಾಡಬೇಕು.

10. (ಮೋಸ್ಟ್ ಇಂಪಾರ್ಟೆಂಟ್) ಪೊಲೀಸ್ ಸಿಬ್ಬಂದಿಗಳು ಮೂರು ಪಾಳಿ ಕೆಲಸ ಮಾಡಬೇಕಪ ಅವರಿಗೂ ರೆಸ್ಟ್ ಅಗತ್ಯವಿರುವ ಕಾರಣ ಮೂರು ಪಾಳಿ ಕೆಲಸ ಮಾಡಬೇಕು ಹಾಗೆ ಸಿಬ್ಬಂದಿಗಳು ಹ್ಯಾಂಡ್ ಸ್ಯಾನಿಟೈಸರ್ ಮಾಸ್ಕ್ ಧರಿಸಬೇಕು.

11. ಡೈಯಾಲಿಸಿಸ್ ಹಾಗೆ ಕೆಲ ಮೆಡಿಕಲ್ ಹೆಲ್ಪ್ ಬೇಕು ಅಂದವರಿಗೆ ಹೊಯ್ಸಳ ವಾಹನ ಪಿಕಪ್ ಅಂಡ್ ಡ್ರಾಪ್ ಮಾಡಬೇಕು.ಜನರ ಆರೋಗ್ಯಕ್ಕೆ ಸ್ಪಂದಿಸಬೇಕು.

12. ಮಾರ್ನಿಂಗ್ ವಾಕ್ ಹೋಗುವವರಿಗೆ ಸರ್ಕಾರ ಕಡಿವಾಣ ಹಾಕಿದೆ.ಗುಂಪಲ್ಲಿ ವಾಕ್ ಹೋಗುವವರಿಗೆ ಮೈಕ್ ನಲ್ಲಿ ಅನಾನ್ಸ್ ಮಾಡಿ ವಾಪಾಸ್ ಮನೆಗೆ ಕಳುಹಿಸಬೇಕು.

13. ಬೇರೆ ರಾಜ್ಯಗಳಿಂದ ಬಂದವರಿಗೆ ಸಮಸ್ಯೆಯಾದ್ರೆ ಆಯಾ ಠಾಣೆ ವ್ಯಾಪ್ತಿಗಳ ಪೊಲೀಸರು ಸ್ಪಂದಿಸಬೇಕು ಇಲ್ಲ ಅಂದರೆ ಡಿಸಿಪಿಗಳ ಗಮನಕ್ಕೆ ತರಬೇಕು.

14. ಯಾರು ಆಹಾರ ಪೂರೈಕೆ,ಸಹಾಯ ಮಾಡುತ್ತಾರೋ ಅವರೆಲ್ಲಾ ಮಾಡಿವಾಪಾಸ್ ಹೋಗಬೇಕು ಅದನ್ನ ಪಬ್ಲಿಸಿಟಿ ಕೊಡಬಾರದು.ಫೋಟೋಸ್ ತೆಗೆದುಕೊಳ್ಳಬಾರದು.

ಕೊನೆಯದಾಗಿ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಿದ ಕಮಿಷನರ್ ಭಾಸ್ಕರ್ ರಾವ್ ಎಲ್ಲರೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
 

Trending News