BPL Cards Holders : ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ರಾಜ್ಯದಲ್ಲಿ 1.99 ಲಕ್ಷ ಅನರ್ಹ 'BPL ಕಾರ್ಡ್ ಗಳು ಪತ್ತೆ!

ರಾಜ್ಯದಲ್ಲಿ 18,848 ಅನರ್ಹ ಅಂತ್ಯೋದಯ, 1,99,277 ಅನರ್ಹ ಬಿಪಿಎಲ್ ಕಾರ್ಡ್ ಗಳು ಪತ್ತೆ

Last Updated : Jun 23, 2021, 01:47 PM IST
  • ಅನರ್ಹ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು
  • ರಾಜ್ಯದಲ್ಲಿ 18,848 ಅನರ್ಹ ಅಂತ್ಯೋದಯ, 1,99,277 ಅನರ್ಹ ಬಿಪಿಎಲ್ ಕಾರ್ಡ್ ಗಳು ಪತ್ತೆ
  • ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಭೂಮಿ ದಾಖಲೆಗಳನ್ನು ಪರಿಶೀಲಿಸಿದಾಗ
BPL Cards Holders : ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ರಾಜ್ಯದಲ್ಲಿ 1.99 ಲಕ್ಷ ಅನರ್ಹ 'BPL ಕಾರ್ಡ್ ಗಳು ಪತ್ತೆ! title=

ಬೆಂಗಳೂರು : ಅನರ್ಹ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ರಾಜ್ಯದಲ್ಲಿ 18,848 ಅನರ್ಹ ಅಂತ್ಯೋದಯ, 1,99,277 ಅನರ್ಹ ಬಿಪಿಎಲ್ ಕಾರ್ಡ್ ಗಳು ಪತ್ತೆಯಾಗಿವೆ ಎಂದು ತಿಳಿಸಿದೆ.

ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಭೂಮಿ ದಾಖಲೆಗಳನ್ನು ಪರಿಶೀಲಿಸಿದಾಗ ಆಹಾರ ಇಲಾಖೆಗೆ ಈ ಮಾಹಿತಿ ಸಿಕ್ಕಿದ್ದು, 7.5 ಎಕೆರೆಗೂ ಮೇಲ್ಪಟ್ಟು ಜಮೀನು ಹೊಂದಿದವರೂ ಅನ್ನಭಾಗ್ಯಕ್ಕಾಗಿ ಕಡು ಬಡವರ ಪಟ್ಟಿಗೆ ಸೇರಿಕೊಂಡಿರುವುದು ಪತ್ತೆಯಾಗಿದ್ದು, 18,848 ಅನರ್ಹ ಅಂತ್ಯೋದಯ(APL Card), 1,99,277 ಅನರ್ಹ ಬಿಪಿಎಲ್ ಕಾರ್ಡ್ ಗಳು ಪತ್ತೆಯಾಗಿವೆ.

ಇದನ್ನೂ ಓದಿ : K Sudhakar : 'ಮೈಸೂರಿನಲ್ಲಿ ರಾಜ್ಯದ ಮೊದಲ 'ಡೆಲ್ಟಾ ಪ್ಲಸ್' ವೈರಸ್ ಪತ್ತೆ'

ಇ-ಆಡಳಿತ ಇಲಾಖೆಯಿಂದ ಪಡೆದಿರುವ ದಾಖಲೆಗಳನ್ನು ಆಧರಿಸಿ ತಹಶೀಲ್ದಾರ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲು ಸೂಚಿಸಲಾಗಿದ್ದು, ಸರ್ಕಾರದ ಆದೇಶದ ಪ್ರಕಾರ, ಗ್ರಾಮೀಣಾ ಪ್ರದೇಶದಲ್ಲಿ 3 ಹೆಕ್ಟರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಹೊಂದಿರುವ ಕುಟುಂಬಗಳು ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡ್(BPL Card) ಪಡೆದುಕೊಳ್ಳುವಂತಿಲ್ಲ . ಹೀಗಾಗಿ ಪತ್ತೆಯಾಗಿರುವ ಅನರ್ಹ ಕಾರ್ಡ್ ಗಳನ್ನು ರದ್ದು ಮಾಡಿ ಆಹಾರ ಧಾನ್ಯ ವಿತರಣೆ ಸ್ಥಗಿತಗೊಳಿಸಲು ಆಹಾರ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ : Rainfall in Karnataka : ರಾಜ್ಯದಲ್ಲಿ ತಗ್ಗಿದ ಮಳೆಯ ಅಬ್ಬರ: ಕೆಲವೆಡೆ ಇಂದು ಸಾಧಾರಣ ಮಳೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News