BS Yediyurappa: 'ಬಿಎಸ್ ವೈ, ರಾಘವೇಂದ್ರ, ಈಶ್ವರಪ್ಪರ ಎಲ್ಲಾ ಹಗರಣ ಬಯಲು ಮಾಡ್ತೇನೆ'

ಸಿಎಂ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ, ಸಚಿವ ಕೆ ಎಸ್ ಈಶ್ವರಪ್ಪನವರ ಎಲ್ಲಾ ಹಗರಣಗಳ ಬಗ್ಗೆ ನನಗೆ ಗೊತ್ತಿದೆ.

Last Updated : Mar 6, 2021, 05:45 PM IST
  • ಸಿಎಂ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ, ಸಚಿವ ಕೆ ಎಸ್ ಈಶ್ವರಪ್ಪನವರ ಎಲ್ಲಾ ಹಗರಣಗಳ ಬಗ್ಗೆ ನನಗೆ ಗೊತ್ತಿದೆ.
  • ನನಗೆ ಗೊತ್ತಿದೆ. ಮುಂದಿನ ಎಲ್ಲಾ ಹಗರಣ ಬಯಲು ಮಾಡುತ್ತೇನೆ ಎಂದು ಭದ್ರಾವತಿ ಶಾಸಕ ಸಂಗಮೇಶ್ ಎಚ್ಚರಿಸಿದರು.
  • ಒಂದು ತಿಂಗಳಲ್ಲೇ ಅವರ ಹಗರಣ ಬಯಲು ಮಾಡುತ್ತೇನೆ.
 BS Yediyurappa: 'ಬಿಎಸ್ ವೈ, ರಾಘವೇಂದ್ರ, ಈಶ್ವರಪ್ಪರ ಎಲ್ಲಾ ಹಗರಣ ಬಯಲು ಮಾಡ್ತೇನೆ' title=

ಬೆಂಗಳೂರು: ಸಿಎಂ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ, ಸಚಿವ ಕೆ ಎಸ್ ಈಶ್ವರಪ್ಪನವರ ಎಲ್ಲಾ ಹಗರಣಗಳ ಬಗ್ಗೆ ನನಗೆ ಗೊತ್ತಿದೆ. ಮುಂದಿನ ಎಲ್ಲಾ ಹಗರಣ ಬಯಲು ಮಾಡುತ್ತೇನೆ ಎಂದು ಭದ್ರಾವತಿ ಶಾಸಕ ಸಂಗಮೇಶ್ ಎಚ್ಚರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಂಗಮೇಶ್(Sangamesh), ಒಂದು ತಿಂಗಳಲ್ಲೇ ಅವರ ಹಗರಣ ಬಯಲು ಮಾಡುತ್ತೇನೆ. ಹಿಂದೆ ಎಷ್ಟು ಆಸ್ತಿಯಿತ್ತು, ಈಗ ಎಷ್ಟು ಆಸ್ತಿಯಿದೆ ಎನ್ನುವುದರ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.

CP Yogeshwar: CD ಪ್ರಕರಣ ಕುರಿತಂತೆ 'ಹೊಸ ಬಾಂಬ್' ಸಿಡಿಸಿದ ಸಚಿವ ಯೋಗೇಶ್ವರ್!

ಇನ್ನು ಈ ಸರ್ಕಾರ ಇರುವುದು ಮೂರು ತಿಂಗಳಷ್ಟೇ. ನಮ್ಮ ಶಾಸಕರಿಗೆ ಬೆಲೆಯಿಲ್ಲದಂತಾಗಿದೆ. ಹೆಣ್ಣುಮಕ್ಕಳು ಅನುಮಾನದಿಂದ ನೋಡುವಂತಾಗಿದೆ. ವಿಧಾನಸೌಧ(Vidhanasoudha)ದ ಪಾವಿತ್ರ್ಯ ಹಾಳಾಗಿದೆ ಎಂದು ಆರೋಪಿಸಿದರು.

Shivaram Hebbar: 'ನಮ್ಮ ಸೇಫ್ಟಿಗೋಸ್ಕರ, ನಿಮ್ಮ ಭಯಕ್ಕಾಗಿ ಕೋರ್ಟ್ ಗೆ ಹೋಗುವಂತಾಯ್ತು'

ಕೆಲವೇ ದಿನಗಳಲ್ಲಿಇವರ ಹಗರಣ ಹೊರಬರುತ್ತದೆ. ಇವರ ಸರ್ಕಾರ ಬಿದ್ದು‌ಹೋಗುತ್ತದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್(DK Shivakumar) ಮುಖ್ಯಮಂತ್ರಿಯಾಗ್ತಾರೆ ಎಂದ ಸಂಗಮೇಶ್, ಮುಂಗಳವಾರ ನಾವು ಎಸ್ ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಎಸ್ಪಿ ಕಚೇರಿಗೆ ಮುತ್ತಿಗೆ ಹಾಕ್ತೇವೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆಯವರು ಧರಣಿ ಮಾಡುತ್ತಾರೆ ಎಂದರು.

ಹಿರಿಯ ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಇನ್ನಿಲ್ಲ

ನನ್ನ ಮೇಲೆ ಕೇಸ್ ಹಾಕಿದ್ದಾರೆ. ವಿಧಾನಸಭೆಯಲ್ಲಿ ಅಮಾನತು ಮಾಡಿದ್ದಾರೆ. ಭದ್ರಾವತಿಯಲ್ಲಿ‌ಚುನಾವಣೆ ಗೆದ್ದ ಇತಿಹಾಸ ಬಿಜೆಪಿ(BJP)ಗಿಲ್ಲ. ಈ ರೀತಿ ಷಡ್ಯಂತ್ರ ಮಾಡಿ ಬಿಜೆಪಿ ಬೀಜ ಬಿತ್ತಲು ಹೊರಟಿದ್ದಾರೆ. ನಮ್ಮ‌ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರಿದ್ದಾರೆ. ನಮ್ಮ ಎಲ್ಲರಲ್ಲೂ ಸೌಹಾರ್ದತೆಯಿದೆ ಎಂದರು.

ಕೃಷಿ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News