ಸಿದ್ದು ಕ್ಯಾಬಿನೆಟ್ ನಲ್ಲಿ ಯಾರಿಗೆ ಮಂತ್ರಿ ಭಾಗ್ಯ? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

Karnataka New Chief Minister: ಕಾಂಗ್ರೆಸ್‌ ಕುರ್ಚಿ ಕಿತ್ತಾಟಕ್ಕೆ ಕೊನೆಗೂ ಹೈಕಮಾಂಡ್‌ ತೆರೆ ಎಳೆದಿದೆ. ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಹಾಗೂ ಡಿ. ಕೆ. ಶಿವಕುಮಾರ್ ಅವರನ್ನು ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಘೋಷಿಸಿದೆ.  

Written by - Yashaswini V | Last Updated : May 18, 2023, 03:33 PM IST
  • ಮೇ 20ಕ್ಕೆ ವರುಣ ಹುಲಿಯಾಗೆ ಪಟ್ಟಾಭಿಷೇಕ
  • ಸಿದ್ದು ಜೊತೆ ಡಿಸಿಎಂ ಆಗಿ ಟ್ರಬಲ್‌ ಶೂಟರ್‌ಗೂ ಪಟ್ಟ
  • ಇತ್ತ ಕಂಠೀರಣ ಕ್ರೀಡಾಂಗಣದಲ್ಲಿ ಭರ್ಜರಿ ಸಿದ್ಧತೆ
ಸಿದ್ದು ಕ್ಯಾಬಿನೆಟ್ ನಲ್ಲಿ ಯಾರಿಗೆ ಮಂತ್ರಿ ಭಾಗ್ಯ? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ  title=
Karnataka Cabinet Ministers

Who Will Get Chance in Siddaramaiah Cabinet: 13 ಮೇ 2023ರಂದು ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಾಗಿನಿಂದ ಆರಂಭವಾಗಿದ್ದ ಕಾಂಗ್ರೆಸ್ ಕುರ್ಚಿ ಕಿತ್ತಾಟ ಕೊನೆಗೂ ಅಂತ್ಯ ಕಂಡಿದೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸಿಎಂ ಪಟ್ಟ ನೀಡಿದ್ದರೆ, ಡಿಸಿಎಂ ಆಗಿ ಟ್ರಬಲ್‌ ಶೂಟರ್‌ಗೂ ಪಟ್ಟ ಕತ್ತಿದೆ. 

ಮೇ 20ಕ್ಕೆ ವರುಣ ಹುಲಿಯಾ ಸಿದ್ದರಾಮಯ್ಯ ಜೊತೆಗೆ ಕನಕಪುರದ ಬಂದೆ ಡಿ.ಕೆ. ಶಿವಕುಮಾರ್ ಅವರಿಗೂ ಪಟ್ಟಾಭಿಷೇಕ ನಡೆಯಲಿದೆ. ಇದಕ್ಕಾಗಿ ಬೆಂಗಳೂರಿನ ಕಂಠೀರಣ ಕ್ರೀಡಾಂಗಣದಲ್ಲಿ ಭರ್ಜರಿ ಸಿದ್ಧತೆ ಆರಂಭವಾಗಿದೆ. ಈ ಮಧ್ಯೆ, ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ಎಂಬ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಇದನ್ನೂ ಓದಿ- ಸಿಎಂ ಆಯ್ಕೆ ಜೊತೆಗೆ ಕ್ಯಾಬಿನೆಟ್‌ಗೆ ದಶಸೂತ್ರ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯಾರಿಗೆ ಮಂತ್ರಿಗಿರಿ? ಇಲ್ಲಿದೆ ಜಾತಿವಾರು ಸಂಭಾವ್ಯ ಸಚಿವರ ಪಟ್ಟಿ:- 
*ಸಿದ್ದರಾಮಯ್ಯ( ಕುರುಬ) (ಮುಖ್ಯಮಂತ್ರಿ) 

* ಡಿಕೆ ಶಿವಕುಮಾರ್ ( ಒಕ್ಕಲಿಗ) (ಉಪಮುಖ್ಯಮಂತ್ರಿ) 

* ಬಿ.ಕೆ ಹರಿಪ್ರಸಾದ್ ( ಬಿಲ್ಲವ)

* ಜಮೀರ್ ಅಹ್ಮದ್ ಖಾನ್ ( ಮುಸ್ಲಿಂ)

* ಯು.ಟಿ ಖಾದರ್ ( ಮುಸ್ಲಿಂ) 

* ದಿನೇಶ್ ಗುಂಡೂರಾವ್ ( ಬ್ರಾಹ್ಮಣ)

*ಕೆಜೆ ಜಾರ್ಜ್ ( ಕ್ರೈಸ್ತ) 

* ಜಗದೀಶ್ ಶೆಟ್ಟರ್ ( ಲಿಂಗಾಯತ)

*ರಾಮಲಿಂಗಾ ರೆಡ್ಡಿ ( ಒಕ್ಕಲಿಗ ರೆಡ್ಡಿ) 

*ಎಂ.ಬಿ ಪಾಟೀಲ್ ( ಲಿಂಗಾಯತ)

* ಡಾ. ಜಿ ಪರಮೇಶ್ವರ ( ಎಸ್ ಸಿ) 

*ಕೃಷ್ಣ ಬೈರೇಗೌಡ ( ಒಕ್ಕಲಿಗ)

*ಪ್ರಿಯಾಂಕ್ ಖರ್ಗೆ ( ಎಸ್ ಸಿ) 

*ಲಕ್ಷ್ಮೀ ಹೆಬ್ಬಾಳ್ಕರ್ ( ಲಿಂಗಾಯತ)

* ತುಕರಾಮ್ ( ಎಸ್ ಟಿ) 

* ನಾಗೇಂದ್ರ ( ಎಸ್ ಟಿ)

* ಲಕ್ಷಣ ಸವದಿ ( ಲಿಂಗಾಯತ)

* ರಾಘವೇಂದ್ರ ಹಿಟ್ನಾಳ್ ( ಕುರುಬ)

* ಪುಟ್ಟರಂಗ ಶೆಟ್ಟಿ ( ಉಪ್ಪಾರ )

* ಸಂತೋಷ್ ಲಾಡ್( ಮರಾಠಿ)

* ಎಚ್ ಕೆ ಪಾಟೀಲ್ ( ರೆಡ್ಡಿ ಲಿಂಗಾಯತ)

* ಶಿವಲಿಂಗೇಗೌಡ ( ಒಕ್ಕಲಿಗ)

* ಮಧು ಬಂಗಾರಪ್ಪ ( ಈಡಿಗ) 

* ಟಿ.ಬಿ ಜಯಚಂದ್ರ ( ಒಕ್ಕಲಿಗ)

* ರಾಮಲಿಂಗಾ ರೆಡ್ಡಿ ( ರೆಡ್ಡಿ) 

*ಕೆ. ಎಚ್ ಮುನಿಯಪ್ಪ/ ರೂಪಾ ಶಶಿಧರ್ ( ಎಸ್ ಸಿ) 

* ಶಿವಾನಂದ ಪಾಟೀಲ್ ( ಲಿಂಗಾಯತ) 

*ಈಶ್ವರ್ ಖಂಡ್ರೆ ( ಲಿಂಗಾಯತ)

* ಟಿಡಿ ರಾಜೇಗೌಡ ( ಒಕ್ಕಲಿಗ)

* ವಿನಯ್ ಕುಲಕರ್ಣಿ( ಲಿಂಗಾಯತ) 

* ಎಂ ಕೃಷ್ಣಪ್ಪ ( ಒಕ್ಕಲಿಗ)

* ಶಿವರಾಜ್ ತಂಗಡಗಿ ( ಭೋವಿ) 

* ಅಜಯ್ ಧರ್ಮಸಿಂಗ್ ( ರಜಪೂತ)

* ಸತೀಶ್ ಜಾರಕಿಹೊಳಿ ( ಎಸ್ ಟಿ)

ಇದನ್ನೂ ಓದಿ- ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಆಯ್ಕೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News