Amul Vs Nandini Milk Row: ನಂದಿನಿ ಬೇಕು ಅಮುಲ್ ಬೇಡವೇ ಬೇಡ!

Save Nandini: ಕರವೇ ನಾರಾಯಣಗೌಡ ಬಣದಿಂದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗಿದೆ. ‘ನಂದಿನಿ ಉಳಿಸಿ, ಕರ್ನಾಟಕ ರೈತರನ್ನು ಬೆಳೆಸಿ’ ಎಂಬ ಘೋಷಣೆ ಕೂಗಲಾಗಿದೆ. ​

Written by - Zee Kannada News Desk | Last Updated : Apr 10, 2023, 10:14 PM IST
  • ರಾಜ್ಯದಲ್ಲಿ ಅಮುಲ್ ಉತ್ಪನ್ನಗಳ ಮಾರಾಟದ ವಿರುದ್ಧ ಆಕ್ರೋಶ
  • ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ
  • ಅಮುಲ್ ಉತ್ಪನ್ನಗಳನ್ನು ನೆಲಕ್ಕೆ ಎಸೆದು ನಂದಿನಿ ಉಳಿಸಿ ಅಭಿಯಾನ
Amul Vs Nandini Milk Row: ನಂದಿನಿ ಬೇಕು ಅಮುಲ್ ಬೇಡವೇ ಬೇಡ! title=
ಅಮುಲ್ ವಿರುದ್ಧ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಉಳಿಸಿ ಅಭಿಯಾನ ಜೋರಾಗುತ್ತಿದೆ. ಆನ್‍ಲೈನ್‍ನಲ್ಲಿ ಅಮುಲ್ ವಿಸ್ತರಣೆಗೊಳ್ಳುತ್ತಿದ್ದಂತೆಯೇ ಅಮುಲ್ Vs ನಂದಿನಿ ರಾಜಕೀಯ ಜಟಾಪಟಿ ಶುರುವಾಗಿದೆ. ಬೆಂಗಳೂರಿನಲ್ಲಿ ಅಮುಲ್ ವಿರುದ್ಧ ಧಿಕ್ಕಾರದ ಘೋಷಣೆಗಳು ಮೊಳಗಿವೆ. ಅಮುಲ್ ಉತ್ಪನ್ನಗಳನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಸೋಮವಾರ ರಸ್ತೆಗಿಳಿದು ಪ್ರತಿಭಟನೆ ನಡೆಸಿವೆ.

ರಾಜ್ಯದಲ್ಲಿ ಅಮುಲ್ ಉತ್ಪನ್ನಗಳ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಅಮುಲ್ ಚೀಸ್, ಬೆಣ್ಣೆ, ತುಪ್ಪ ಹೀಗೆ ಅಮುಲ್ ಉತ್ಪನ್ನಗಳನ್ನು ನೆಲಕ್ಕೆಸೆದು ಆಕ್ರೋಶ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಗೋಹತ್ಯೆ ನಿಷೇಧದ ಬಗ್ಗೆ ಜಾಣಮೌನ ವಹಿಸುವ JDSನಿಂದ ನಂದಿನಿ ಹಾಲಿಗೆ ಹುಳಿ ಹಿಂಡುವ ಕೆಲಸ: ಬಿಜೆಪಿ

ಅಮುಲ್‍ನೊಂದಿಗೆ ನಂದಿನಿ ವಿಲೀನ ವಿಚಾರವಾಗಿ ಪ್ರತಿಭಟನೆ ನಡೆಸಿರುವ ಕನ್ನಡಪರ ಸಂಘಟನೆಗಳು, ‘ನಮಗೆ ನಂದಿನಿ ಬೇಕು ಅಮುಲ್ ಬೇಡವೇ ಬೇಡ’ ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿವೆ. ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಕೆಂಡಾಮಂಡಲವಾಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಗೋ ಬ್ಯಾಕ್ ಅಮುಲ್ ಅಭಿಯಾನ ನಡೆಸಲಾಗಿದೆ. ಕರವೇ ನಾರಾಯಣಗೌಡ ಬಣದಿಂದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗಿದೆ. ‘ನಂದಿನಿ ಉಳಿಸಿ, ಕರ್ನಾಟಕ ರೈತರನ್ನು ಬೆಳೆಸಿ’ ಎಂಬ ಘೋಷಣೆ ಕೂಗಲಾಗಿದೆ. ನಂದಿನಿ ಕನ್ನಡಿಗರ ಹೆಮ್ಮೆ, ಅಮುಲ್ ತ್ಯಜಿಸೋಣ, ನಂದಿನಿ ಬಳಸೋಣ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಗಿದೆ. ಅಮುಲ್ ಉತ್ಪನ್ನಗಳನ್ನು ಹೊಡೆದು ಹಾಕಿ ಪ್ರತಿಭಟನೆ ನಡೆಸಿದ್ದು, ಅಮುಲ್ ಪೋಸ್ಟರ್‍ಗಳನ್ನು ಹರಿದು ಹಾಕಲಾಗಿದೆ.  

ಇದನ್ನೂ ಓದಿ: Karnataka Assembly Election: ಶೀಘ್ರವೇ ಜೆಡಿಎಸ್ ಜನತಾ ಪ್ರಣಾಳಿಕೆ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News