/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Karnataka Assembly Election 2023: ಮೇ ೧೦ಕ್ಕೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಸರ್ವ ಪಕ್ಷಗಳೂ ಭರದಿಂದಲೇ ಅಖಾಡಕ್ಕೆ ಇಳಿದಿವೆ. ಈ ಮಧ್ಯೆ ಈ ಬಾರಿ ರಾಜ್ಯದ ಗದ್ದುಗೆ ಏರಲಿರುವ ಪಕ್ಷ ಯಾವುದು ಎನ್ನುವ ಕುತೂಹಲ ಮತದಾರ ಪ್ರಭುವಿನಲ್ಲೂ ಇದೆ. ಕೆಲವರು ಪಕ್ಷ ನೋಡಿ ಮನೆ ಹಾಕಿದರೆ, ಇನ್ನು ಕೆಲವರ ಒಲವು ಪಕ್ಷದ ನಾಯಕ, ನಾಯಕಿಯರ ಕಡೆಗೆ. ಇವರ  ಮಧ್ಯೆ, ಯಾರೇ ಅಧಿಕಾರಕ್ಕೆ ಏರಲಿ ಆದರೆ ರಾಜ್ಯದ ಅಭಿವೃದ್ದಿಯಾಗಲಿ ಎನ್ನುವ ಒಂದು ಬಳಗ ಕೂಡಾ ಇದೆ. 

ಈ ಬಾರಿ ಹೊಸ ಪದ್ಧತಿ ಜಾರಿಗೆ : 
ಮತದಾನ ಎಂದರೆ ಸಾಮಾನ್ಯವಾಗಿ ಯಾವ ಮತಗಟ್ಟೆಗೆ ತೆರಳಿ ನಾವು ಮತದಾನ ಮಾಡಬೇಕು ಎನ್ನುವುದನ್ನು ಮೊದಲೇ ಸೂಚಿಸಲಾಗುತ್ತದೆ. ಆ ಪ್ರಕಾರ ಮತದಾನ ನಡೆಯುತ್ತದೆ. ಹೀಗೆ ವಯಸ್ಕರಿಗೆ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡುವುದು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಹೊಸ ಪದ್ದತಿಯನ್ನು ಜಾರಿಗೆ ತರಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. 

ಇದನ್ನೂ ಓದಿ : "ನಾಯಕರನ್ನು ಪಕ್ಷದಲ್ಲಿ ಹಿಡಿದಿಟ್ಟುಕೊಳ್ಳಲು ಬಿಜೆಪಿಯಿಂದ ಪಟ್ಟಿ ಬಿಡುಗಡೆ ವಿಳಂಬ"

80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ: 
80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ನೀಡಿರುವುದರಿಂದ ಬಿಬಿಎಂಪಿ ಇದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದೆ.  ಹಾಗಿದ್ದರೆ ಈ ಮತದಾನ ಪ್ರಕ್ರಿಯೆ ಹೇಗೆ ನಡೆಯಲಿದೆ ನೋಡೋಣ. 

ನೋಂದಣಿ ಮಾಡಿಕೊಳ್ಳುವುದು ಹೇಗೆ? : 
ಈಗಾಗಲೇ ವೃದ್ಧ ಮತದಾರರ ಮನೆ ಮತದಾನಕ್ಕೆ ಸಿದ್ದತೆ ನಡೆಯುತ್ತಿದೆ. 
ಮೊದಲಿಗೆ 80 ವರ್ಷ ಮೇಲ್ಪಟ್ಟವರಿಗೆ 12ಡಿ ಫಾರಂ ವಿತರಣೆ ಮಾಡಲಾಗುತ್ತದೆ. ನಾಮಿನೇಷನ್ ಪ್ರಕ್ರಿಯೆಗೂ 5 ದಿನ ಮುಂಚಿತವಾಗಿ 12 ಡಿ ಫಾರಂ ವಿತರಣೆ ಮಾಡಲಾಗುತ್ತದೆ. ಈ ಫಾರಂ ಮೂಲಕ ಮತದಾರ ಫೋಸ್ಟಲ್ ವೋಟ್ ಗೆ ಮನವಿ ಮಾಡಬೇಕು. ಈ ಫಾರಂಅನ್ನು ಪ್ರತಿ 80 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುವುದು. 

ಇದನ್ನೂ ಓದಿ :  Amul vs Nandini: ಪ್ರಧಾನಿ ಮೋದಿಯವರೇ ನಿಮ್ಮ ಕರ್ನಾಟಕ ಭೇಟಿಯ ಉದ್ದೇಶವೇನು?- ಸಿದ್ದರಾಮಯ್ಯ

80 ವರ್ಷ ಮೇಲ್ಪಟ್ಟವರಿಗೆ 2 ಆಯ್ಕೆ : 
80 ವರ್ಷ ಮೇಲ್ಪಟ್ಟವರಿಗೆ ಮತ ಚಲಾಯಿಸಲು  ಎರಡು ಆಯ್ಕೆಗಳನ್ನು ನೀಡಲಾಗಿದೆ. ಒಂದು ಮತಗಟ್ಟೆಗೆ ಬಂದು ಮತ ಚಲಾಯಿಸುವುದು. ಇನ್ನೊಂದು ಮನೆಯಲ್ಲಿಯೇ ಹಕ್ಕು ಚಲಾಯಿಸುವುದು. ಮತಗಟ್ಟೆಗೆ ಬಂದು ಮತ ಹಾಕುವವರು 12 ಡಿ ಫಾರಂ ಕೊಡುವ ಅವಶ್ಯಕತೆ ಇಲ್ಲ. ಆದರೆ ಮನೆಯಲ್ಲೇ ಮತದಾನ ಬಯಸುವವರು ಮಾತ್ರ 12 ಡಿ ಫಾರಂ ಕೊಡಲೇಬೇಕು. 

ಫೋಸ್ಟಲ್ ಬ್ಯಾಲೆಟ್ ವ್ಯವಸ್ಥೆ :
ಬೆಂಗಳೂರಿನಲ್ಲಿ 2 ಲಕ್ಷದ 36 ಸಾವಿರ ಮಂದಿ 80 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ. ಈ ಪೈಕಿ ಯಾರೆಲ್ಲಾ ಮನೆಯಲ್ಲಿ ಮತದಾನಕ್ಕೆ ಬಯಸುತ್ತಾರೋ ಅವರಿಗೆ ಫೋಸ್ಟಲ್ ವೋಟ್ ಮಾಡುವ ಅವಕಾಶ ವಿರುತ್ತದೆ. ಈ ಸಂದರ್ಭದಲ್ಲಿ ಇಬ್ಬರು ಚುನಾವಣಾಧಿಕಾರಿಗಳು ಹಾಜರಿರುತ್ತಾರೆ. ಕಂಪ್ಲೀಟ್ ಚುನಾವಣಾ ಪ್ರಕ್ರೀಯೆ ಗೌಪ್ಯವಾಗಿ ನಡೆಯುತ್ತದೆ.  ಫೋಸ್ಟಲ್ ವೋಟಿಂಗ್  ಪ್ರಕ್ರಿಯೆಯನ್ನು ಸಂಪೂರ್ಣ ವೀಡಿಯೋ ಶೂಟ್ ಮಾಡಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
vote from home for voters above 80 years know the process of voting
News Source: 
Home Title: 

 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ! ಹೇಗಿರಲಿದೆ ವೋಟಿಂಗ್ ಪ್ರಕ್ರಿಯೆ ?  

 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ! ಹೇಗಿರಲಿದೆ ವೋಟಿಂಗ್ ಪ್ರಕ್ರಿಯೆ ?
Yes
Is Blog?: 
No
Tags: 
Facebook Instant Article: 
Yes
Highlights: 

ಮೇ ೧೦ಕ್ಕೆ ರಾಜ್ಯ ವಿಧಾನಸಭೆಗೆ ಚುನಾವಣೆ 

ಈ ಬಾರಿ ಹೊಸ ಪದ್ಧತಿ ಜಾರಿಗೆ

80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ ವ್ಯವಸ್ಥೆ 
 

Mobile Title: 
80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ! ಹೇಗಿರಲಿದೆ ವೋಟಿಂಗ್ ಪ್ರಕ್ರಿಯೆ ?
Ranjitha R K
Publish Later: 
No
Publish At: 
Monday, April 10, 2023 - 11:30
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No