ದಾಸರಹಳ್ಳಿ : ಒಕ್ಕಲಿಗ ಸಮುದಾಯಕ್ಕೆ ಡಿಕೆ ಬ್ರದರ್ಸ್ ಕಳಂಕ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಹಣ ಪಡೆದು ಟಿಕೆಟ್ ನೀಡಿದ್ದಾರೆಂದು ದಾಸರಹಳ್ಳಿ ಟಿಕೆಟ್ ವಂಚಿತ ಅಭ್ಯರ್ಥಿ ಪಿ.ಎನ್ ಕೃಷ್ಣಮೂರ್ತಿ ಆರೋಪಿಸಿದ್ದಾರೆ.
ಟಿ.ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೃಷ್ಣಮೂರ್ತಿ ಮಾತನಾಡಿ, ಕಳೆದ 5 ವರ್ಷದಲ್ಲಿ ಡಿ.ಕೆ ಸುರೇಶ್ ನಮ್ಮ ಕ್ಷೇತ್ರಕ್ಕೆ ಬಂದಿಲ್ಲ, ಕ್ಷೇತ್ರದ ಜನರ ಕಷ್ಟ ಸುಖ ಕೇಳೋಕೆ ಯಾರು ಬರಲಿಲ್ಲ. ಕೋವಿಡ್ ಸಂದರ್ಭದಲ್ಲಿ 35 ಸಾವಿರ ಜನರಿಗೆ ಕಿಟ್ಗಳನ್ನು ನೀಡಿದ್ದೇನೆ.
ನೀರಿಗೆ ಪಾಚಿ ವೈರಿ ಇದ್ದ ಹಾಗೆ ಡಿ.ಕೆ. ಶಿವಕುಮಾರ್ ಒಕ್ಕಲಿಗ ಜನಾಂಗಕ್ಕೆ ಕಳಂಕ ಎಂದಿದ್ದಾರೆ.
ಇದನ್ನೂ ಓದಿ: ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್
ಈ ಬಾರಿ ಟಿಕೆಟ್ ಪಡೆದ ಧನಂಜಯ್ಯಗೆ 2 ಲಕ್ಷಕ್ಕೆ ಅರ್ಚಿ ಹಾಕಿಸಿ ತಕ್ಷಣ ಹಣ ಪಡೆದು ಟಿಕೆಟ್ ಕೊಟ್ಟಿದ್ದಾರೆ. ದಾಸರಹಳ್ಳಿ ಜನ ಹೇಳುತ್ತಾರೆ ಟಿಕೆಟ್ ಮಾರಾಟವಾಗಿದೆ ಅಂತ. ಬ್ಲಾಕ್ ಅಧ್ಯಕ್ಷರಿಗೆ ಡಿಕೆ ಶಿವಕುಮಾರ್ ಧಮ್ಕಿ ಹಾಕುತ್ತಿದ್ದಾರೆ. ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುತ್ತೇನೆ ಎಂದು ಧಮ್ಕಿ ಹಾಕ್ತಾರೆ ಎಂದು ಕೃಷ್ಣಮೂರ್ತಿ ಅವರು ಆರೋಪಿಸಿದ್ದಾರೆ.
ಅಲ್ಲದೆ, ಕ್ಷೇತ್ರದಲ್ಲಿ 2018 ರಿಂದ 2023ರ ವರೆಗೂ ಕೆಲಸ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದಲ್ಲಿ ನೀವೇ ಚುನಾವಣಾ ಸರ್ವೇ ಮಾಡಿಸಿದ್ದೀರಾ, ಡೆಲ್ಲಿಯಿಂದ ಮಾಡಿದ್ದಾರೆ. ಆ ಸರ್ವೇಯಲ್ಲಿ ನನ್ನ ಹೆಸರೇ ಇರುವುದು. ಕಾಂಗ್ರೆಸ್ ಪಕ್ಷದ ಸರ್ವೇ ಬರೀ ಬೋಗಸ್, ಪಕ್ಷದ ಅಭ್ಯರ್ಥಿಗಳ ಹತ್ತಿರ ಅರ್ಜಿಗಾಗಿ 2 ಲಕ್ಷ ಇಸ್ಕೊಂಡಿದ್ದೀರಾ. 30 ಕೋಟಿ ಹಣವನ್ನು ಸಂಗ್ರಹ ಮಾಡಿದ್ದೀರಾ ಎಂದು ಡಿಕೆ ವಿರುದ್ಧ ಹರಿಹಾಯ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ