Karnataka Election Videos : ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯ ಬಹಳ ಜೋರಾಗಿ ನಡೆಯುತ್ತಿದೆ. ಪರಸ್ಪರ ಅಭ್ಯರ್ಥಿಗಳು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಮತದಾರರು ಸಹ ತಮ್ಮ ನೆಚ್ಚಿನ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹೌದು.. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿಗಳ ಪರ ರೋಡ್‌ಶೋ ನಡೆಸಿ ಪ್ರಚಾರ ಮಾಡುತ್ತಿದ್ದಾರೆ. ಹಳ್ಳಿಗಳಿಂದ ಹಿಡಿದು ನಗರದ ರಸ್ತೆಗಳಲ್ಲಿ ಮೋದಿ ಸೇರಿದಂತೆ ಅನೇಕ ಬಿಜೆಪಿ ನಾಯಕರ ಕಟೌಟ್‌ಗಳು ರಾರಾಜಿಸುತ್ತಿವೆ. ಮೊನ್ನೆ ಏಕಾಎಕಿ ಸುರಿದ ಮಳೆಯಿಂದಾಗಿ ನೆನೆದಿದ್ದ, ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್‌ನ್ನು ವ್ಯಕ್ತಿಯೊಬ್ಬ ಒರೆಸಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಶುಕ್ರವಾರದಂದು, ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ.
ಪ್ರಧಾನಿ ಶ್ರೀ @narendramodi ಅವರನ್ನು ದೇಶದ ಜನತೆ ತಮ್ಮ ಮನೆಯವರಲ್ಲಿ ಒಬ್ಬನೆಂದು ಭಾವಿಸಿದ್ದಾರೆ.
ದೇಶದ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಪ್ರೀತಿ, ಗೌರವಕ್ಕೆ ಪಾತ್ರರಾದ ವ್ಯಕ್ತಿತ್ವ ಮತ್ತೊಂದಿಲ್ಲ.
ಇಂದು ದೇವನಹಳ್ಳಿಯಲ್ಲಿ ಜರುಗಲಿದ್ದ ಪಕ್ಷದ ರೋಡ್ ಶೋಗೂ ಮುನ್ನ, ಮಳೆ ಬಂದಾಗ ಕಂಡ ಅಪೂರ್ವ ದೃಶ್ಯ.#NaMo #BJPYeBharavase pic.twitter.com/S3WlvtlWqr
— BJP Karnataka (@BJP4Karnataka) April 21, 2023
ಇದನ್ನೂ ಓದಿ: Karnataka election 2023: 10 ಡಿಕೆಶಿ ಬಂದ್ರೂ ಲಿಂಗಾಯತರ ಡ್ಯಾಂ ಒಡೆಯಲ್ಲ- ಸಿಸಿ ಪಾಟೀಲ್
ಸದ್ಯ ಈ ವಿಡಿಯೋವನ್ನು ಬಿಜೆಪಿ ಕರ್ನಾಟಕ ಘಟಕ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ, ಅಲ್ಲದೆ, ʼದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಕುಟುಂಬ ಎಂದು ಪರಿಗಣಿಸುತ್ತಾರೆ, ದೇಶದ ರಾಜಕೀಯ ಇತಿಹಾಸದಲ್ಲಿ ಪ್ರೀತಿ ಮತ್ತು ಗೌರವಕ್ಕೆ ಅರ್ಹವಾದ ವ್ಯಕ್ತಿ ಮೋದಿ ಬಿಟ್ಟು ಬೇರೆ ಯಾರೂ ಇಲ್ಲ ಎಂದು ಬರೆದುಕೊಂಡಿದ್ದಾರೆ.
The unwavering trust in PM @narendramodi Ji and the selfless affection for him is what the BJP has earned and it is its source of strength.
Have a look at this beautiful video from Devanahalli, Karnataka. https://t.co/1OFAlZ1ibL
— Amit Shah (@AmitShah) April 21, 2023
ಇನ್ನು ಇದೇ ವಿಡಿಯೋವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಾಗಿದೆ. ಅಲ್ಲದೆ, ʼಪ್ರಧಾನಿ ನರೇಂದ್ರ ಮೋದಿ ಜಿ ಅವರ ಮೇಲಿನ ಅಚಲವಾದ ನಂಬಿಕೆ ಮತ್ತು ಅವರ ಮೇಲಿನ ನಿಸ್ವಾರ್ಥ ಪ್ರೀತಿಯೇ ಬಿಜೆಪಿ ಗಳಿಸಿದ್ದು ಮತ್ತು ಅದರ ಶಕ್ತಿಯ ಮೂಲವಾಗಿದೆ. ಕರ್ನಾಟಕದ ದೇವನಹಳ್ಳಿಯ ಕಂಡು ಬಂದ ಈ ವೀಡಿಯೊವನ್ನು ನೋಡಿʼ ಎಂದು ಶೀರ್ಷಿಕೆ ಬರೆಯಲಾಗಿದೆ.
ಇದನ್ನೂ ಓದಿ: MP Kumaraswamy: 51 ಮಾಧ್ಯಮಗಳ ವಿರುದ್ದ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೋರೆ ಹೋದ ಎಂಪಿ ಕುಮಾರಸ್ವಾಮಿ
ವೈರಲ್ ವಿಡಿಯೋದಲ್ಲಿ, ಸಂಜೆ ಹೊತ್ತಿನ ವೇಳೆ, ಬಿಳಿ ಅಂಗಿ ಮತ್ತು ಧೋತಿಯ ಉಟ್ಟು ಬರುವ ಹಿರಿಯ ವ್ಯಕ್ತಿಯೊಬ್ಬರು ಮಳೆಯಲ್ಲಿ ನೆನೆದಿದ್ದ, ಪ್ರಧಾನಿ ಕಟೌಟ್ ಅನ್ನು ಒರೆಸುತ್ತಿರುವುದನ್ನು ಸ್ಥಳೀಯರೊಬ್ಬರು ವೀಡಿಯೊ ಮಾಡಿದ್ದಾರೆ. ಅಲ್ಲದೆ, ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಹಣಕ್ಕಾಗಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ, ʼನನಗೆ ಹಣದ ಅಗತ್ಯವಿಲ್ಲ, ನಾನು ಯಾರಿಂದಲೂ ಹಣವನ್ನು ಸ್ವೀಕರಿಸುವುದಿಲ್ಲ. ಅವರ ಮೇಲಿನ ಪ್ರೀತಿ ಮತ್ತು ವಿಶ್ವಾಸದಿಂದ ಮಾಡುತ್ತಿದ್ದೇನೆ.ʼ ಎಂದು ಭಾವುಕರಾಗಿ "ನಮಗೆ ಮೋದಿ ದೇವರು" ಎಂದು ಹೇಳಿದ್ದ ದೃಶ್ಯ ವಿಡಿಯೋದಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.