DK Shivakumar: ಪ್ರಜಾಧ್ವನಿ ರೋಡ್ ಶೋ ವೇಳೆ ಕಂತೆ ಕಂತೆ ಹಣ ಎಸೆದ ಡಿಕೆಶಿ, ವಿಡಿಯೋ ವೈರಲ್!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ರಥಯಾತ್ರೆಯ ಮೆರವಣಿಗೆ ವೇಳೆ 500 ರೂ. ಮುಖಬೆಲೆಯ ನೋಟುಗಳನ್ನು ಡಿಕೆಶಿ ಎಸೆದಿದ್ದಾರೆ.

Written by - Puttaraj K Alur | Last Updated : Mar 28, 2023, 07:55 PM IST
  • ಪ್ರಜಾಧ್ವನಿ ರೋಡ್​ ಶೋ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಂತೆ ಕಂತೆ ಹಣ ಎಸೆದಿದ್ದಾರೆ
  • ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕ್ಷೇತ್ರದ ಪ್ರಜಾಧ್ವನಿ ರಥಯಾತ್ರೆ ವೇಳೆ ಈ ಘಟನೆ ನಡೆದಿದೆ
  • ಜಾನಪದ ಕಲಾವಿದರ ಮೇಲೆ ಡಿಕೆಶಿ ನೋಟು ಎಸೆದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
DK Shivakumar: ಪ್ರಜಾಧ್ವನಿ ರೋಡ್ ಶೋ ವೇಳೆ ಕಂತೆ ಕಂತೆ ಹಣ ಎಸೆದ ಡಿಕೆಶಿ, ವಿಡಿಯೋ ವೈರಲ್! title=
ಜಾನಪದ ಕಲಾವಿದರ ಮೇಲೆ ಹಣ ಎಸೆದ ಡಿಕೆಶಿ!

ಮಂಡ್ಯ: ಪ್ರಜಾಧ್ವನಿ ರೋಡ್​ ಶೋ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಂತೆ ಕಂತೆ ಹಣ ಎಸೆದಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಪ್ರಪ್ರಜಾಧ್ವನಿ ರಥಯಾತ್ರೆ ವೇಳೆ ಈ ಘಟನೆ ನಡೆದಿದೆ.

ಜಾನಪದ ಕಲಾವಿದರ ಮೇಲೆ ಪ್ರಜಾಧ್ವನಿ ಬಸ್ ಮೇಲಿಂದ ಡಿಕೆಶಿ ನೋಟು ಎಸೆದಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಬಿಜೆಪಿಗೆ ಬಿಸಿ ತುಪ್ಪವಾದ ಒಳಮೀಸಲಾತಿ ಅಸ್ತ್ರ

ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ರಥಯಾತ್ರೆಯ ಮೆರವಣಿಗೆ ವೇಳೆ 500 ರೂ. ಮುಖಬೆಲೆಯ ನೋಟುಗಳನ್ನು ಡಿಕೆಶಿ ಎಸೆದಿದ್ದಾರೆ. ಬಸ್ ಮೇಲಿಂದಲೇ ಜಾನಪದ ಕಲಾವಿದರ ಮೇಲೆ ನೋಟುಗಳನ್ನು ಎರಚಿ ಡಿಕೆಶಿ ಮುಂದೆ ಸಾಗಿದ್ದಾರೆ.  

ಪ್ರಜಾಧ್ವನಿ ಯಾತ್ರೆ ಪ್ರಯುಕ್ತ ಡಿಕೆಶಿಗೆ ಸ್ವಾಗತ ಕೋರಲು ಜಾನಪದ ಕಲಾವಿದರು ಬಂದಿದ್ದರು. ಈ ವೇಳೆ ಅವರ ಮೇಲೆ ಡಿಕೆಶಿ ಎರಚಿದ ನೋಟುಗಳಿಗೆ ಜನರು ಮತ್ತು ಕಲಾವಿದರು ಮುಗಿಬಿದ್ದ ಘಟನೆ ನಡೆದಿದೆ.

ಇದನ್ನೂ ಓದಿ: BSY ಮನೆ ಮೇಲಿನ ದಾಳಿಯ ಹಿಂದೆ ಬಿಜೆಪಿಯ "ಸಂತೋಷ ಕೂಟ"ದ ಕೈವಾಡ: ಕಾಂಗ್ರೆಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News