Kolar District Assembly Election Result 2023 : ಕೋಲಾರದ 6 ವಿಧಾಸಭಾ ಕ್ಷೇತ್ರಗಳಲ್ಲಿ 4 ಕಾಂಗ್ರೆಸ್‌, 2 ಜೆಡಿಎಸ್‌ ವಶಕ್ಕೆ..! ಬಿಜೆಪಿ ನಾಪತ್ತೆ..

Kolar Karnataka Assembly Election Result 2023 : 2023 ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕೋಲಾರ ಜಿಲ್ಲೆಯಲ್ಲಿರುವ 6 ವಿಧಾನಸಭಾ ಮತ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಈ ಬಾರಿಯೂ ಸಹ ಬಿಜೆಪಿ ಒಂದು ಖಾತೆ ತೆಗೆದಿಲ್ಲ.

Written by - Krishna N K | Last Updated : May 13, 2023, 06:07 PM IST
  • ಗಡಿ ಜಿಲ್ಲೆ ಕೋಲಾರದ 6 ಮತ ಕ್ಷೇತ್ರಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ.
  • ಒಟ್ಟು ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 4 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ.
  • ಜೆಡಿಎಸ್‌ ಸಹ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
Kolar District Assembly Election Result 2023 : ಕೋಲಾರದ 6 ವಿಧಾಸಭಾ ಕ್ಷೇತ್ರಗಳಲ್ಲಿ 4 ಕಾಂಗ್ರೆಸ್‌, 2 ಜೆಡಿಎಸ್‌ ವಶಕ್ಕೆ..! ಬಿಜೆಪಿ ನಾಪತ್ತೆ.. title=

Kolar Vidhan sabha Chunavana Result 2023 : ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಒಟ್ಟು ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 4 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಜೆಡಿಎಸ್‌ ಸಹ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುನಾಥ್ 83026 ಪಡೆಯುವ ಮೂಲಕ ಜೆಡಿಸ್‌ನ ಸಿಎಂಆರ್‌ ಶ್ರೀನಾಥ್‌ ವಿರುದ್ಧ ಗೆಲುವಿನ ನಗೆ ಬಿರಿದ್ದಾರೆ.

ಮತಗಳನ್ನು ನೋಡುವುದಾದರೆ, ಕಾಂಗ್ರೆಸ್‌ ಕೊತ್ತೂರು ಮಂಜುನಾಥ್ 83026, ಬಂಗಾರಪೇಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 76544, ಕೆಜಿಎಫ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರೂಪಕಲಾ 80924, ಮುಳಬಾಗಿಲು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಜೆಡಿಎಸ್ 83055, ಶ್ರೀನಿವಾಸಪುರದಲ್ಲಿ ಜೆಡಿಎಸ್‌ ಅಭ್ಯರ್ಥಿ ವೆಂಕಟಶಿವಾರೆಡ್ಡಿ 92223, ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಂಜೇಗೌಡ ಅವರು 50955 ಮತಗಳ ಮೂಲಕ ಗೆಲುವು ದಾಖಲಿಸಿದ್ದಾರೆ.

1) ಕೋಲಾರ ಜಿಲ್ಲಾ ಕೇಂದ್ರ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುನಾಥ್  ಅವರು 83026 ಮತಗಳನ್ನು ಪಡೆಯುವ ಮೂಲಕ 2023ರ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ. 32501 ಮತಗಳ ಅಂತದಲ್ಲಿ ಜಯ ಸಾಧಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ 50525, ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ 50288 ಮತಗಳನ್ನು ಪಡೆಯುವ ಮೂಲಕ ಸೋಲು ಅನುಭವಿಸಿದ್ದಾರೆ.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಿವಾಸಗೌಡ ಅವರು 82788 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬಿರಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸೈಯದ್ ಜಮೀರ್ ಪಾಶಾ  38537    ನಮ್ಮ ಕಾಂಗ್ರೆಸ್‌ ಪಕ್ಷ ಕಟ್ಟಿ ಸ್ಪರ್ಧೆ ಮಾಡಿದ್ದ ಆರ್‌. ವರ್ತೂರು ಪ್ರಕಾಶ್ 35544   ಹಾಗು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಆರ್‌. ವೆಂಕಟಚಲಪತಿ 12458 ಮತಗಳಿಸುವ ಮೂಲಕ ಸೋಲು ಅನುಭವಿಸಿದ್ದರು.    

2008ರ ವಿಧಾನಸಭಾ ಚುನಾವಣೆ ಮೂಲಕ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದ ವರ್ತೂರ್‌ ಪ್ರಕಾರ ಸತತ ಎರಡು ಬಾರಿ ಗೆದ್ದಿದ್ದರು. 2018 ರ ಚುನಾವಣೆರಲ್ಲಿ ವರ್ತೂರ್‌ ಹಿಂದಿಕ್ಕಿ ಹೆಚ್ಚು ಮಗಳನ್ನು ಪಡೆಯುವ ಮೂಲಕ ಕೆ. ಶ್ರೀನಿವಾಸ ಗೌಡರು ಶಾಸಕರಾದರು. ಒಟ್ಟು 225129 ಮತಗಳಿರುವ ಕ್ಷೇತ್ರದಲ್ಲಿ,  ಪುರುಷ 112681, 112417 ಮಹಿಳಾ ಮತದಾರರಿದ್ದಾರೆ.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಕಾಂಗ್ರೆಸ್‌ : ಕೊತ್ತೂರು ಜಿ. ಮಂಜುನಾಥ - ಗೆಲುವು
  • ಎಎಪಿ : ಜಮೀಲ್ ಅಹಮದ್ ಎನ್.
  • ಬಿಜೆಪಿ : ಆರ್. ವರ್ತೂರು ಪ್ರಕಾಶ್
  • ಜೆಡಿಎಸ್‌ : ಸಿ. ಎಂ. ಆರ್. ಶ್ರೀನಾಥ್
  • ಬಿಎಸ್‌ಪಿ : ಎಸ್. ಬಿ. ಸುರೇಶ್
  • ಎಸ್‌ಪಿ -: ಸಿ ತಿಮ್ಮಪ್ಪ

2) ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ

ಈ ಕ್ಷೇತ್ರವನ್ನು ಕೆ ಆರ್ ರಮೇಶ್‌ಕುಮಾರ್ ಮತ್ತು ಜಿ ಕೆ ವೆಂಕಟಶಿವಾರೆಡ್ಡಿ ನಡುವಿನ ಕದನ ಎಂದೇ ಅರ್ಥೈಸಲಾಗುತ್ತದೆ. 1978ರಿಂದಲೂ ಇದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಕ್ಷೇತ್ರದಲ್ಲಿ ಇವರಿಬ್ಬರನ್ನು ಬಿಟ್ಟರೆ ಮೂರನೇ ವ್ಯಕ್ತಿಗೆ ಪೈಪೋಟಿ ಕೊಡಲು ಇದುವರೆಗೂ ಸಾಧ್ಯವಾಗಿಲ್ಲ. ದಲಿತ ಮತದಾರರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ರಮೇಶಕುಮಾರ್‌ 6 ಬಾರಿ ಶಾಸಕರಾಗಿದ್ದರೆ, ಒಕ್ಕಲಿಗ ರೆಡ್ಡಿ ಸಮುದಾಯದ ವೆಂಕಟಶಿವಾರೆಡ್ಡಿ ಕೇವಲ ನಾಲ್ಕು ಬಾರಿ ಶಾಸಕರಾಗಿದ್ದಾರೆ.   

ಇನ್ನು ಈ ಬಾರಿಯ ಚುನಾವಣೆಯಲ್ಲಿ  92223 ಮತಗಳನ್ನು ಪಡೆದುಕೊಳ್ಳುವ ಮೂಲಕ ಜಯ ಗಳಿಸಿದ್ದಾರೆ.  ಕಾಂಗ್ರೆಸ್‌ ಅಭ್ಯರ್ಥಿ ರಮೇಶ್ ಕುಮಾರ್ 82295 ಮತ್ತು ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸರೆಡ್ಡಿ 5835 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. 2018ರ ಚುನಾವಣೆಯಲ್ಲಿ ಕೆ.ಆರ್.ರಮೇಶ್‌ ಕುಮಾರ್‌ ಅವರು 93571 ಮತಗಳನ್ನು ಪಡೆದು ಗೆಲುವಿನ ನಗೆ ಬಿರಿದ್ದರು. ಜಿಡಿಎಸ್‌ ಪಕ್ಷದ ಅಭ್ಯರ್ಥಿ ಜಿಕೆ ವೆಂಕಟ ಶಿವರೆಡ್ಡಿ 83019, ಡಾ. ವೇಣು ಗೋಪಾಲ್ ಕೆ.ಎನ್ 4208 ಮತಗಳನ್ನು ಪಡೆಯುವ ಮೂಲಕ ಸೋಲನ್ನು ಅನುಭವಿಸಿದ್ದರು.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಜಿಡಿಎಸ್‌ : ಜಿ.ಕೆ.ವೆಂಕಟಶಿವಾರೆಡ್ಡಿ -ಗೆಲುವು
  • ಬಿಜೆಪಿ : ಜಿ.ಆರ್.ಶ್ರೀನಿವಾಸರೆಡ್ಡಿ 
  • ಎಎಪಿ : ವೈ.ವಿ.ವೆಂಕಟಾಚಲ
  • ಕಾಂಗ್ರೆಸ್‌ : ಕೆ.ಆರ್‌.ರಮೇಶ್‌ ಕುಮಾರ್
  • ಕೆಆರ್‌ಎಸ್‌ : ಆನಂದ ಜಿ.ಕೆ

3)ಮುಳಬಾಗಲು ವಿಧಾನಸಭಾ ಕ್ಷೇತ್ರ

ಜೆಡಿಎಸ್‌ ಅಭ್ಯರ್ಥಿ ಸಮೃದ್ದಿ ಮಂಜುನಾಥ್  83055 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ, ಆದಿನಾರಾಯಣ  59975, ಬಿಜೆಪಿ ಅಭ್ಯರ್ಥಿ ಶೀಗೇಹಳ್ಳಿ ಸುಂದರ್  7803 ಪಡೆದು ಸೋಲನ್ನು ಅನುಭವಿಸಿದ್ದಾರೆ. 23080 ಮತಗಳ ಅಂತರದಲ್ಲಿ ಸಮೃದ್ಧಿ ಮಂಜುನಾಥ್‌ ಜಯಭೇರಿ ಬಾರಿಸಿದ್ದಾರೆ.

ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿರುವ ಮುಳಬಾಗಿಲು 2018 ರ ವಿಧಾನಸಭಾ ಚುನಾವಣೆಯಲ್ಲಿ 74213 ಮತಗಳನ್ನು ಪಡೆಯುವ ಮೂಲಕ ಸ್ವತಂತ್ರ ಅಭ್ಯರ್ಥಿ ಹೆಚ್‌. ನಾಗೇಶ್‌ ಅವರು ಬರ್ಜರಿ ಗೆಲುವು ಸಾಧಿಸಿದ್ದರು. ಜೆಡಿಎಸ್‌ನ ಸಮೃದ್ದಿ ಮಂಜುನಾಥ್ ಅವರು ಬರೋಬ್ಬರಿ 6715 ಮತಗಳ ಅಂತರದಿಂದ ಹೆಚ್‌ ನಾಗೇಶ್‌ ವಿರುದ್ಧ ಸೋಲು ಅನುಭವಿಸಿದ್ದರು. ಬಿಜೆಪಿ ಅಭ್ಯರ್ಥಿ ಅಮರೇಶ್ ಕೇವಲ 8411 ಮತಗಳನ್ನು ಪಡೆದಿದ್ದರು.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಜೆಡಿಎಸ್‌ : ಸಮೃದ್ಧಿ ವಿ. ಮಂಜುನಾಥ - ಗೆಲುವು
  • ಕಾಂಗ್ರೆಸ್‌ : ವಿ. ಆದಿನಾರಾಯಣ    
  • ಎಎಪಿ : ಡಾ. ಸಂಗಸಂದ್ರ ವಿಜಯಕುಮಾರ್
  • ಬಿಜೆಪಿ : ಕೆ. ಸಂದರ್ ರಾಜ್ [ಶೀಗೆಹಳ್ಳಿ ಸುಂದರ್]
  • ಕೆಆರ್‌ಎಸ್‌ : ಸಫಾರಿ ಆನಂದ್

4) ಮಾಲೂರು ವಿಧಾನಸಭಾ ಕ್ಷೇತ್ರ

2023ರ ಚುನಾವಣೆಯಲ್ಲಿ  ಕಾಂಗ್ರೆಸ್‌ ಅಭ್ಯರ್ಥಿ ನಂಜೇಗೌಡ ಅವರು 50955 ಮತಗಳನ್ನು ಪಡೆದುಕೊಳ್ಳುವ ಮೂಲಕ ಗೆಲುವಿನ ನಗೆ ಬಿರಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಜುನಾಥ ಗೌಡ 50707, ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ 49362 ಮತ ಗಳಿಸಿ ಸೋಲುಂಡರು. ನಂಜೇಗೌಡ ಅವರು ಒಟ್ಟು 248 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ ವೈ ಮಂಜೇಗೌಡ ಅವರು ಜೆಡಿಎಸ್‌ ಅಭ್ಯರ್ಥಿ ಮಂಜುನಾಥ್ ಗೌಡ ವಿರುದ್ಧ 17915 ಮತಗಳ ಅಂತರದಿಂದ ಗೆಲುವಿನ ಗದ್ದುಗೆ ಏರಿದ್ದರು. ಮಂಜುನಾಥ್‌ ಗೌಡ ಅವರು 57762 ಮತಗಳನ್ನು ಪಡೆದಿದ್ದರು, ಬಿಜೆಪಿ ಅಭ್ಯರ್ಥಿ ಕೃಷ್ಣಯ್ಯ ಶೆಟ್ಟಿ ಮಾಲೂರು 23889, ಸಮಾಜವಾದಿ ಪಾರ್ಟಿ ಸಿ ತಮ್ಮಪ್ಪ ಕೇವಲ 105 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಕಾಂಗ್ರೆಸ್‌ : ಕೆ. ವೈ. ನಂಜೇಗೌಡ - ಗೆಲುವು
  • ಬಿಜೆಪಿ : ಕೆ. ಎಸ್. ಮಂಜುನಾಥಗೌಡ
  • ಬಿಎಸ್‌ಪಿ : ವಡಗನಹಳ್ಳಿ ಎನ್. ರಮೇಶ
  • ಎಎಪಿ : ರವಿಶಂಕರ್ ಎಂ.
  • ಜೆಡಿಎಸ್‌ : ಜಿ. ಇ. ರಾಮೇಗೌಡ    
  • ಪಕ್ಷೇತರ  : ಹೂಡಿ ವಿಜಯಕುಮಾರ್

5) ಬಂಗಾರಪೇಟೆ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌ ಅಭ್ಯರ್ಥಿ ಎಸ್.ಎನ್.ನಾರಾಯಣಸ್ವಾಮಿ ಅವರು 76544 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬಿರಿದ್ದಾರೆ. ಒಟ್ಟು 7976 ಮತಗಳ ಅಂತರಿಂದ ಗೆದ್ದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್ ಬಾಬು 68568, ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ 8617 ಮತ ಗಳಿಸಿ ಸೋಲು ಅನುಭವಿಸಿದ್ದಾರೆ. 

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್. ಎನ್. ನಾರಾಯಣಸ್ವಾಮಿ ಕೆ.ಎಂ ಅವರು ಗೆಲುವು ಸಾಧಿಸಿದ್ದರು. ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್ 21571 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಂ ನಾರಾಯಣ ಸ್ವಾಮಿ ಅವರು 70,871 ಮತ, ಬಿಜೆಪಿ ಅಭ್ಯರ್ಥಿ ಪಿ. ವೆಂಕಟಮುನಿಯಪ್ಪ 33,555 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಅಲ್ಲದೆ, 1127ನಷ್ಟು ನೋಟಾ ಮತಗಳು ದಾಖಲಾಗಿವೆ. 

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಕಾಂಗ್ರೆಸ್‌ : ಎಸ್. ಎನ್. ನಾರಾಯಣಸ್ವಾಮಿ - ಗೆಲುವು
  • ಬಿಜೆಪಿ : ಎಂ. ನಾರಾಯಣಸ್ವಾಮಿ
  • ಬಿಎಸ್‌ಪಿ : ಕೆ. ಎನ್. ನಾರಾಯಣಸ್ವಾಮಿ
  • ಜೆಡಿಎಸ್‌ : ಎಂ. ಮಲ್ಲೇಶ್ ಬಾಬು
  • ಎಎಪಿ : ಹರಿಕೃಷ್ಣ ರಾಮಪ್ಪ

6) ಕೆಜಿಎಫ್ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌ ಅಭ್ಯರ್ಥಿ ರೂಪಕಲಾ ಅವರು ಮತ್ತೆ ಗೆಲುವಿನ ನಗು ಬಿರಿದ್ದಾರೆ. ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ ವಿರುದ್ಧ 50174 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ. ರೂಪಕಲಾ 80924, ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ 30750, ಜೆಡಿಎಸ್‌ನ ರಮೇಶ್ ಬಾಬು 1343 ಹಾಗೂ ಆರ್‌ಪಿಐ ಅಭ್ಯರ್ಥಿ ರಾಜೇಂದ್ರನ್ 29662 ಮತಗಳನ್ನು ಗಳಿಸಿ ಸೋಲು ಅನುಭವಿಸಿದ್ದಾರೆ.

ತಮಿಳು ಭಾಷೆಯ ಪ್ರಭಾವ ಇರುವ ಈ ಕ್ಷೇತ್ರದಲ್ಲಿ 1952 ರಿಂದ 2008 ರವರೆಗೂ ತಮಿಳರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008 ಮತ್ತು 2013 ರಲ್ಲಿ ಸತತವಾಗಿ ಎರಡು ಬಾರಿ ಕೆಜಿಎಫ್‌ನಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಪಕ್ಷ 2018ರಲ್ಲಿ ಸೋಲು ಕಂಡಿತ್ತು. ಕಾಂಗ್ರೆಸ್‌ ಅಭ್ಯರ್ಥಿ ರೂಪಕಲಾ ಶಶಿಧರ್‌ ಅವರು 71151 ಮತಗಳನ್ನು ಪಡೆದು ಗೆಲುವಿನ ಸಿಂಹಾಸನ ಏರಿದ್ದರು. ಬಿಜೆಪಿ ಅಭ್ಯರ್ಥಿ, ಅಶ್ವಿನಿ ಸಂಪಂಗಿ   30324 ಮತಗಳನ್ನು ಪಡೆದು 40827 ವೋಟುಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. 1750 ನೋಟಾ ವೋಟುಗಳು ದಾಖಲಾಗಿವೆ.

ಹಾಲಿ ಶಾಸಕಿ ರೂಪಕಲಾ ಶಶಿಧರ್ ಎಂ ಅವರು ಕಾಂಗ್ರೆಸ್‌ನಿಂದ ಮತ್ತೇ ಅದೃಷ್ಟ ಪರೀಕ್ಷೆಗಿಳಿಸಿದ್ದಾರೆ. ಬಿಜೆಪಿ ಮತ್ತೆ ಇವರ ವಿರುದ್ಧ ಅಶ್ವಿನಿ ಸಂಪಂಗಿಯವರನ್ನು ಚುನಾವಣಾ ಅಖಾಡಕ್ಕಿಳಿಸಿದೆ. ಬಿಜೆಪಿ ಕಾಂಗ್ರೆಸ್‌ ನೇರಾನೇರ ಹಣಾವಣಿ ನಡೆಯಲಿರುವ ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 190351 ಮತದಾರರು ಇದ್ದಾರೆ. 95677 ಪುರುಷ ಮತದಾರು ಇದ್ದರೆ 94643 ಮಹಿಳಾ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚಾಗಿ ತಮಿಳಿಗರಿದ್ದಾರೆ.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಕಾಂಗ್ರೆಸ್‌ : ರೂಪಾ ಕಲಾ ಎಂ - ಗೆಲುವು
  • ಬಿಜೆಪಿ - ಅಶ್ವಿನಿ ಸಂಪಂಗಿ
  • ಜೆಡಿಎಸ್‌ - ಡಾ. ರಮೇಶ್ ಬಾಬು ವಿ. ಎಂ.
  • ಬಿಎಸ್‌ಪಿ - ಕೋದಂಡ ಆರ್.
  • ಎಎಪಿ- ಆರ್. ಗಗನ ಸುಕನ್ಯಾ
  • ಸಿಪಿಐ - ತಂಗರಾಜ್ ಪಿ.     

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News