Karnataka Election 2023: ಯತ್ನಾಳರ ‘ವಿಷಕನ್ಯೆ’ ಹೇಳಿಕೆಗೆ ಪ್ರಧಾನಿ ಮೋದಿ ಒಪ್ಪಿಗೆ ಇರಬಹುದೇನೋ? ಕಾಂಗ್ರೆಸ್

Karnataka Assembly Election 2023: ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಯತ್ನಾಳ್, ‘‍ಪ್ರಧಾನಿ ಮೋದಿ ನಾಗರಹಾವು ಆದರೆ, ಸೋನಿಯಾ ಗಾಂಧಿ ವಿಷಕನ್ಯೆನಾ? ಎಂದು ಪ್ರಶ್ನಿಸಿದ್ದರು. ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಹುಚ್ಚ' ಎಂದು ಟೀಕಿಸಿದ್ದರು.

Written by - Puttaraj K Alur | Last Updated : Apr 28, 2023, 04:28 PM IST
  • ಸೋನಿಯಾ ಗಾಂಧಿ ವಿಷಕನ್ಯೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು
  • ಯತ್ನಾಳರ "ವಿಷಕನ್ಯೆ" ಹೇಳಿಕೆಗೆ ಪ್ರಧಾನಿ ಮೋದಿಯವರ ಅನುಮೋದನೆ ಇರಬಹುದೇನೋ?
  • ಸೋನಿಯಾ ಗಾಂಧಿಯವರ ಮೇಲೆ ಬಿಜೆಪಿ ಪ್ರಯೋಗಿಸುವ ಅತ್ಯಂತ ಕೀಳು ಪದಗಳು ಇನ್ನೆಷ್ಟಿವೆ?
Karnataka Election 2023: ಯತ್ನಾಳರ ‘ವಿಷಕನ್ಯೆ’ ಹೇಳಿಕೆಗೆ ಪ್ರಧಾನಿ ಮೋದಿ ಒಪ್ಪಿಗೆ ಇರಬಹುದೇನೋ? ಕಾಂಗ್ರೆಸ್ title=
ಯತ್ನಾಳ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಷಕನ್ಯ ಎಂಬ ಬಿಜೆಪಿ ಶಾಕಸ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧವೂ ಗುಡುಗಿದೆ.

ಯತ್ನಾಳರ "ವಿಷಕನ್ಯೆ" ಹೇಳಿಕೆಗೆ ಪ್ರಧಾನಿ ಮೋದಿಯವರ ಅನುಮೋದನೆ ಇರಬಹುದೇನೋ, ಅವರದ್ದೂ ಇದೇ ಮನಸ್ಥಿತಿಯಲ್ಲವೇ! ಕಾಂಗ್ರೆಸ್ಸಿನ ವಿಧವೆ, ಜರ್ಸಿ ಹಸು, ವಿಷಕನ್ಯೆ, ಹೀಗೆ ಸೋನಿಯಾ ಗಾಂಧಿಯವರ ಮೇಲೆ ಬಿಜೆಪಿ ಪ್ರಯೋಗಿಸುವ ಅತ್ಯಂತ ಕೀಳು ಪದಗಳು ಇನ್ನೆಷ್ಟಿವೆ? ಸಿಎಂ ಬಸವರಾಜ ಬೊಮ್ಮಾಯಿಯವರ ನಿರ್ದೇಶನದಂತೆ ಯತ್ನಾಳ್ ಈ ಹೇಳಿಕೆ ನೀಡಿದರೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ದಲಿತರು, ಹಿಂದುಳಿದವರು ಭಿಕ್ಷುಕರೇ?: ಡಿಕೆಶಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

ಸೋನಿಯಾ ವಿಷಕನ್ಯೆ ಎಂದ ಯತ್ನಾಳ್!

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಷಕನ್ಯೆ ಮತ್ತು ಅವರು ಚೀನಾ-ಪಾಕಿಸ್ತಾನದ ಏಜೆಂಟ್ ಎಂದು ಹೇಳುವ ಮೂಲಕ ಕೊಪ್ಪಳದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದರು.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಯತ್ನಾಳ್, ‘‍ಪ್ರಧಾನಿ ಮೋದಿ ನಾಗರಹಾವು ಆದರೆ, ಸೋನಿಯಾ ಗಾಂಧಿ ವಿಷಕನ್ಯೆನಾ? ಎಂದು ಪ್ರಶ್ನಿಸಿದ್ದರು. ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಹುಚ್ಚ ಎಂದು ಟೀಕಿಸಿದ್ದರು.

ಇದನ್ನೂ ಓದಿ: ಮೇ.10 ರಂದು ಮತದಾನ ಮಾಡಲು ಕಾರ್ಮಿಕರಿಗೆ ವೇತನ ಸಹಿತ ರಜೆ

ಯತ್ನಾಳ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದು, ‘ಸೋನಿಯಾ ಗಾಂಧಿ ವಿಷಕನ್ಯೆ ಎಂಬ ಹೇಳಿಕೆ ಮೂಲಕ ಇಡೀ ಸ್ತ್ರೀ ಕುಲವನ್ನೇ ಅವಮಾನಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ರನ್ನು ಬಿಜೆಪಿಯಿಂದ ತಕ್ಷಣವೇ ಉಚ್ಛಾಟಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News