Bull Fight Video: ಗದಗದಲ್ಲಿ ಸಿದ್ದರಾಮಯ್ಯ vs ಬೊಮ್ಮಾಯಿ ಗೂಳಿ ಕಾಳಗ!

Karnataka Assembly Election 2023: ಸುಮಾರು 15 ನಿಮಿಷಗಳ ಕಾಲ ಗದಗನ ನಡುಬೀದಿಯಲ್ಲಿ ಗೂಳಿಗಳ ಕಾದಾಟ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗುತ್ತಿದೆ. ​

Written by - Zee Kannada News Desk | Last Updated : May 9, 2023, 03:15 PM IST
  • ಮುದ್ರಣ ಕಾಶಿ ಗದಗದಲ್ಲಿ ಗಮನ ಸೆಳೆದ ಭರ್ಜರಿ ಗೂಳಿಗಳ ಕಾಳಗ
  • ಗೂಳಿಗಳ‌ ಕಾದಾಟವನ್ನು ರಾಜಕೀಯ ನಾಯಕರ ಗುದ್ದಾಟವೆಂದು ಬಿಂಬಿಸಿದ ಸ್ಥಳೀಯರು
  • ಸಿದ್ದರಾಮಯ್ಯ vs ಬಸವರಾಜ್ ಬೊಮ್ಮಾಯಿ ಕಾಳಗವೆಂದು ಬಣ್ಣಿಸಿದ ಜನರು
Bull Fight Video: ಗದಗದಲ್ಲಿ ಸಿದ್ದರಾಮಯ್ಯ vs ಬೊಮ್ಮಾಯಿ ಗೂಳಿ ಕಾಳಗ! title=
ಗದಗದಲ್ಲಿ ಗೂಳಿಗಳ ಕಾಳಗ!

ಗದಗ: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಒಂದೇ ದಿನ ಬಾಕಿ ಇದೆ. ಹೀಗಿರುವಾಗಲೇ ಮುದ್ರಣ ಕಾಶಿ ಗದಗದಲ್ಲಿ ಗೂಳಿಗಳ ಕಾಳಗ ಗಮನ ಸೆಳೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ದಿಗ್ಗಜರ ವಾಕ್ಸಮರ ನಡುವೆ ಗದಗದಲ್ಲಿ ನಡೆದ ಗೂಳಿಗಳ ಕಾದಾಟ ಗಮನ ಸೆಳೆದಿದೆ.

ಗದಗದಲ್ಲಿ ನಡೆದಿರುವ ಈ ಗೂಳಿಗಳ‌ ಕಾದಾಟವನ್ನು ರಾಜಕೀಯ ನಾಯಕರ ಗುದ್ದಾಟವೆಂದು ಸ್ಥಳೀಯರು ಬಿಂಬಿಸಿದ್ದಾರೆ. ಇದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ಕಾಳಗವೆಂದು ಬಣ್ಣಿಸಲಾಗಿದೆ.   

ಇದನ್ನೂ ಓದಿ: ಮುಸ್ಲಿಂರ ಸಹಕಾರ ಬೇಕು; ವಿಶ್ವಾಸ ಬಂದಾಗ ಅವಕಾಶ ಮಾಡಿಕೊಡುತ್ತೇವೆ: ಬಿಎಸ್ ಯಡಿಯೂರಪ್ಪ

ಸುಮಾರು 15 ನಿಮಿಷಗಳ ಕಾಲ ಗದಗನ ನಡುಬೀದಿಯಲ್ಲಿ ಗೂಳಿಗಳ ಕಾದಾಟ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗುತ್ತಿದೆ. ಈ ಗೂಳಿಗಳ ಕಾದಾಟದಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪಾದಚಾರಿಗಳು, ಬೈಕ್ ಹಾಗೂ ವಾಹನ ಸವಾರರು ಮತ್ತು ಅಕ್ಕಪಕ್ಕದ ಅಂಗಡಿಕಾರರು ಕೆಲಕಾಲ ಭಯಭೀತರಾಗಿದ್ದರು.

ಗೂಳಿಗಳ ಕಾಳಗವನ್ನು ರಾಜಕೀಯ ಪಕ್ಷಗಳ ನಾಯಕರು ಗುದ್ದಾಟದಂತೆ ಇಲ್ಲಿನ ಜನರು ಬಿಂಬಿಸಿದ್ದಾರೆ. ಈ ಗೂಳಿಗಳ‌ ಕಾದಾಟ ಕೆಲವರಿಗೆ ಆತಂಕ ಉಂಟು ಮಾಡಿದ್ರೆ, ಇನ್ನೂ ಕೆಲವರಿಗೆ ಸಖತ್ ಮನರಂಜನೆ ನೀಡಿದೆ.

ಇದನ್ನೂ ಓದಿ: ಕಾಂಗ್ರೆಸ್ ವೀರಶೈವ ಸಮಾಜವನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುತ್ತಿದೆ : ಬಿ‌ಎಸ್‌ವೈ ಆರೋಪ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News