Special Gift To Modi : ಮೋದಿಗೆ ವಿಶೇಷ ಉಡುಗೊರೆ ನೀಡಲು ಸಜ್ಜಾದ ಹಾವೇರಿ ಬಿಜೆಪಿ ನಾಯಕರು

MOdi Road Show: ಈಗಾಗಲೇ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ನಿಟ್ಟಿನಲ್ಲಿ ಹಾವೇರಿಯಲ್ಲಿ ವಿಶೇಷ ಉಡುಗೊರೆ ನೀಡಲು ಬಿಜೆಪಿ ನಾಯಕರು ಸಿದ್ದರಾಗಿದ್ದಾರೆ. 

Written by - Zee Kannada News Desk | Last Updated : May 6, 2023, 04:21 PM IST
  • ನಮೋಗೆ ವಿಶೇಷ ಉಡುಗೊರೆ ನೀಡಲು ಬಿಜೆಪಿ ನಿರ್ಧಾರ
  • ಈಗಾಗಲೇ ಭರ್ಜರಿ ರೋಡ್‌ ಶೋ ಮೂಲಕ ಪ್ರಚಾರ ಮಾಡುತ್ತಿರುವ ಪಿಎಂ ಮೋದಿ
  • ಸಮಾವೇಶದಲ್ಲಿ ನಮೋಗೆ ಹಾವೇರಿ ಜಿಲ್ಲಾ ಬಿಜೆಪಿ ಘಟಕದಿಂದ ವಿಶೇಷ ಗಿಫ್ಟ್
Special Gift To Modi : ಮೋದಿಗೆ ವಿಶೇಷ ಉಡುಗೊರೆ ನೀಡಲು ಸಜ್ಜಾದ ಹಾವೇರಿ ಬಿಜೆಪಿ ನಾಯಕರು title=

ಹಾವೇರಿ:ಈಗಾಗಲೇ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ನಿಟ್ಟಿನಲ್ಲಿ ಹಾವೇರಿಯಲ್ಲಿ ವಿಶೇಷ ಉಡುಗೊರೆ ನೀಡಲು ಬಿಜೆಪಿ ನಾಯಕರು ಸಿದ್ದರಾಗಿದ್ದಾರೆ. 

ಸದ್ಯದಲ್ಲೆ ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆ ಇರುವುದರಿಂದ ರಾಜ್ಯಾದಾದ್ಯಂತ ಪ್ರಚಾರದ ಅಬ್ಬರ ಜೋರಾಗಿದೆ. ಈ ಹಿನ್ನಲೆ ರಾಜ್ಯಕ್ಕೆ ಪ್ರಧಾನ ಮಂತ್ರಿ ಸೇರಿದಂತೆ, ರಾಷ್ಟ್ರೀಯ ಹಲವಾರು ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆ ಬಿಜೆಪಿ ನಾಯಕ ನರೇಂದ್ರ ಮೋದಿಗೆ ಹಾವೇರಿಯಲ್ಲಿ ನಮೋಗೆ ವಿಶೇಷ ಉಡುಗೊರೆ ನೀಡಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.

ಇದನ್ನೂ ಓದಿ: Mallikarjuna Kharge: ಮಲ್ಲಿಕಾರ್ಜುನ ಖರ್ಗೆ ಹತ್ಯೆ ಕುರಿತು ಆಡಿಯೋ: ಸತ್ಯಾಸತ್ಯತೆಯ ಬಗ್ಗೆ ತನಿಖೆ - ಬೊಮ್ಮಾಯಿ

ಹಾವೇರಿ ಸಮಾವೇಶದಲ್ಲಿ ನಮೋಗೆ ವಿಶೇಷ ಉಡುಗೊರೆ ತಯಾರಾಗಿದೆ. ಹಾವೇರಿಯ ಸಾಂಪ್ರದಾಯಿಕ & ಸುಪ್ರಸಿದ್ಧ ಯಾಲಕ್ಕಿ ಪೇಟ, ಯಾಲಕ್ಕಿ ಹಾರ ತೊಡಿಸುವುದರ ಜೊತೆಗೆ ಹನುಮಾನ್ ಚಾಲೀಸ ನೀಡಿ ಗೌರವಿಸಲು ನಿರ್ಧರಿಸಿದ್ದಾರೆ. 

ಸದ್ಯ ನರೇಂದ್ರ ಮೋದಿ ಬಿಜೆಪಿ ನಾಯಕರ ಪರವಾಗಿ ಬೆಂಗಳೂರು ಹಲವೆಡೆ ರೋಡ್‌ ಶೋ ಮಾಡುವ ಮೂಲಕ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಮೋದಿ ಮಾತ್ರವಲ್ಲದೇ ರಾಷ್ಟ್ರೀಯ ನಾಯಕರು ವಿಧನಾ ಸಭೆ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.  

ಇದನ್ನೂ ಓದಿ: ಪ್ರಧಾನಿ ಮೋದಿ ರೋಡ್ ಶೋ ಬಗ್ಗೆ ಜನಸಾಮಾನ್ಯರು ಹೇಳಿದ್ದೇನು?

ರಾಜ್ಯದಲ್ಲಿ ಪ್ರಬಲ ಮೂರು ಪಕ್ಷಗಳು ಭರ್ಜರಿ ಮತಬೇಟೆಯಾಡುತ್ತಿದ್ದಾರೆ. ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಮೂರು ಪಕ್ಷಗಳು ಪಣತಟ್ಟಿವೆ. ಶತಾಗತಾಯ ಸರ್ಕಾರ ರಚಿಸಲು ಕಾಂಗ್ರೆಸ್‌ ರಣತಂತ್ರಗಳನ್ನು ಹೆಣೆದು, ಸರ್ಕಾರದ ವಿರುದ್ಧ ಅನೇಕ ಬ್ರಹ್ಮಾಸ್ತ್ರಗಳನ್ನು ಬಿಡುತ್ತದೆ. ಇತ್ತ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ತನ್ನ ಕೆಲಸದ ಜೊತೆ ಮೋದಿ ಫೇಮ್‌ ಇಟ್ಟುಕೊಂಡು ಮತದಾರರ ಮುಂದೆ ಬರುತ್ತಿದೆ. ಉಭಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡಿವೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News