ಮಾಧ್ಯಮಗಳಲ್ಲಿ ಪ್ರಚಾರದ ಪ್ರಸಾರಕ್ಕೆ ಅನುಮತಿ ಕಡ್ಡಾಯ: ಉಲ್ಲಂಘನೆ ಆದ್ರೆ ಕಾನೂನು ಕ್ರಮ

ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣೆಯ ಮಾಹಿತಿ ಕುರಿತು ಇಂದು ಬಿಬಿಎಂಪಿ ಕೇಂದ್ರ ಕಛೇರಿಯ ಸಭಾಂಗಣ-01ರಲ್ಲಿ ಚುನಾವಣಾ ಮಾಹಿತಿ ಕಾರ್ಯಗಾರವು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಉಜ್ವಲ್ ಕುಮಾರ್ ಘೋಷ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

Written by - Manjunath Hosahalli | Edited by - Manjunath N | Last Updated : Apr 7, 2023, 05:57 PM IST
  • ನಿಗಾಹಿಸುವ ಸಲುವಾಗಿ ನಿಯಂತ್ರಣ ಕೋಠಡಿಯನ್ನು ಸ್ಥಾಪಿಸಲಾಗಿದೆ
  • 3 ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ದಿನದ 24 ಗಂಟೆಯೂ ನಿಗಾವಹಿಸಲಾಗುತ್ತದೆ
 ಮಾಧ್ಯಮಗಳಲ್ಲಿ ಪ್ರಚಾರದ ಪ್ರಸಾರಕ್ಕೆ ಅನುಮತಿ ಕಡ್ಡಾಯ: ಉಲ್ಲಂಘನೆ ಆದ್ರೆ ಕಾನೂನು ಕ್ರಮ title=

ಬೆಂಗಳೂರು: ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣೆಯ ಮಾಹಿತಿ ಕುರಿತು ಇಂದು ಬಿಬಿಎಂಪಿ ಕೇಂದ್ರ ಕಛೇರಿಯ ಸಭಾಂಗಣ-01ರಲ್ಲಿ ಚುನಾವಣಾ ಮಾಹಿತಿ ಕಾರ್ಯಗಾರವು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಉಜ್ವಲ್ ಕುಮಾರ್ ಘೋಷ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ರೇಡಿಯೋ, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಬೇಕಾದರೆ ಮಾಧ್ಯಮ ಪ್ರಮಾಣೀಕರಣ ಮತ್ತು ಪರಿಶೀಲನಾ ಸಮಿತಿ(MCMC)ಯಿಂದ ಪೂರ್ವಾನುಮತಿ ಪಡೆಯಬೇಕು. ಪೂರ್ವಾನುಮತಿ ಪಡೆಯದೆ ಜಾಹೀರಾತು ನೀಡಿದರೆ ಸಂಬಂಧಪಟ್ಟ ಅಭ್ಯರ್ಥಿಯ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Police: ತ್ಚರಿತವಾಗಿ ನ್ಯಾಯ ಕೊಡಿಸುವುದರಲ್ಲಿ ದೇಶದಲ್ಲಿ ರಾಜ್ಯದ ಪೊಲೀಸರು No.1

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ನಿಗಾಹಿಸುವ ಸಲುವಾಗಿ ನಿಯಂತ್ರಣ ಕೋಠಡಿಯನ್ನು ಸ್ಥಾಪಿಸಲಾಗಿದೆ. ಇನ್ನು ದೃಶ್ಯ ಮಾಧ್ಯಮ, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳ ಮೇಲೆ ನಿಗಾವಹಿಸುವ ಸಲುವಾಗಿ 3 ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ದಿನದ 24 ಗಂಟೆಯೂ ನಿಗಾವಹಿಸಲಾಗುತ್ತದೆ. ಪೂರ್ವಾನುಮತಿ ಪಡೆಯದ ಅಥವಾ ಪಾವತಿಸಿದ ಸುದ್ದಿಗಳು(Paid News) ಪ್ರಾಸಾರವಾದಲ್ಲಿ ಕೂಡಲೆ ಅದನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗೆ ರವಾನಿಸಿ ಅದನ್ನು ಪರಿಶೀಲಿಸಿ ಶೀಘ್ರ ವರದಿ ನೀಡಲು ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.

ಪೋಸ್ಟಲ್ ಬ್ಯಾಲೆಟ್ ನಲ್ಲಿ ಮತ ಚಲಾಯಿಸಬಹುದು:

ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 2.36 ಲಕ್ಷ ಮಂದಿ 80 ವರ್ಷ ಮೇಲ್ಪಟ್ಟವರಿದ್ದಾರೆ. ಈ ಸಂಬಂಧ 80 ವರ್ಷ ಮೇಲ್ಪಟ್ಟವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಲು ಅವಕಶವಿದ್ದು, ನಾಮನಿರ್ದೇಶನಕ್ಕೂ ಮುಂಚಿತವಾಗಿ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳು 80 ವರ್ಷ ಮೇಲ್ಪಟ್ಟವರ ಮನೆಗೆ ತೆರಳಿ ಪೋಸ್ಟಲ್ ಬ್ಯಾಲೆಟ್ ಹಾಕುವ ಬಗ್ಗೆ 12ಡಿ ಫಾರ್ಮ್ ಮೂಲಕ ಮಾಹಿತಿ ಪಡೆದುಕೊಳ್ಳುತ್ತಾರೆ. ಅದರಲ್ಲಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಇಚ್ಚಿಸುವವರು ಮತಗಟ್ಟೆಗಳಿಗೆ ಬಂದು ಮತಚಲಾಯಿಸಬಹುದಾಗಿದೆ. ಈ ಸಂಬಂಧ ನಗರದಲ್ಲಿ ಎಷ್ಟು ಮಂದಿ ಪೋಸ್ಟಲ್ ಬ್ಯಾಲೇಟ್ ಮೂಲಕ ಮತ ಚಲಾಯಿಸುತ್ತಾರೆ ಎಂಬುದರ ಮಾಹಿತಿಯನ್ನು ನೀಡಲಾಗುವುದು ಎಂದ ಅವರು, ಪೋಸ್ಟಲ್ ಬ್ಯಾಲೆಟ್ ವೇಳೆ ಮತಪೆಟ್ಟಿಗೆಯ ಜೊತೆಗೆ ಇಬ್ಬರು ಅಧಿಕಾರಿಗಳು ಹಾಗೂ ವೀಡಿಯೋ ಗ್ರಾಫರ್ ತೆರಳಿ ಮತ ಹಾಕಿಸಿಕೋಂಡು ಬರಲಿದ್ದಾರೆ ಎಂದು ಹೇಳಿದರು.

40 ಲಕ್ಷ ವ್ಯಯಿಸಲು ಅವಕಾಶ:

ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ವಿವಿಧ ಪಕ್ಷಗಳಿಂದ ಆಯ್ಕೆಯಾದಂತಹ ಅಭ್ಯರ್ಥಿಗಳು 40 ಲಕ್ಷ ರೂ. ವ್ಯಯಿಸಲು ಮಾತ್ರ ಅವಕಾಶವಿರುತ್ತದೆ. ಈ ಸಂಬಂಧ ಯಾವುದಕ್ಕೆ ಎಷ್ಟು ಹಣ ವ್ಯಯಿಸಲಾಗಿದೆ ಎಂಬುದರ ಬಗ್ಗೆ ಅಭ್ಯರ್ಥಿಗಳು ಅಧಿಕಾರಿಗಳಿಗೆ ನಿಖರ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ತ್ಚರಿತವಾಗಿ ನ್ಯಾಯ ಕೊಡಿಸುವುದರಲ್ಲಿ ದೇಶದಲ್ಲಿ ರಾಜ್ಯದ ಪೊಲೀಸರು No.1

ಆನ್ ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ:

ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಆಯ್ಕೆಯಾದ ಅಭ್ಯರ್ಥಿಗಳು https://encore.eci.gov.in  ಎನ್‌ಕೋರ್ ವೆಬ್‌ಸೈಟ್ ನಲ್ಲಿ ಆನ್ ಲೈನ್ ಮೂಲಕ ದಿನಂಕ, ಸಮಯವನ್ನು ನಿಗದಿಪಡಿಸಿಕೊಂಡು, ಆ ದಿನ ತೆರಳಿ ನಾಮಪತ್ರ ಸಲ್ಲಿಸಹುದಾಗಿರುತ್ತದೆ.

ಬ್ಯಾಂಕ್ ಖಾತೆಗಳ ಮೇಲೆ ನಿಗಾ:

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಂದೇ ಬ್ಯಾಂಕ್ ಖಾತೆಯಿಂದ ಹೆಚ್ಚು ಹಣ ವರ್ಗಾವಣೆಯಾಗುವುದು ಕಂಡುಬಂದರೆ ಅಂತವರ ಮೇಲೆ ನಿಗಾವಹಿಸಿ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಅಧಿಕಾರಿಗಳು ಬ್ಯಾಂಕ್ ಖಾತೆಗಳ ಮೇಲೆ ನಿಗಾವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ಟ್ರೈನಿಂಗ್ ನೋಡಲ್ ಅಧಿಕಾರಿಯಾದ ನಾಗರಾಜ್, ನಾಗೇಂದ್ರ ಹೊನ್ನವಳ್ಳಿ, ಮಾಸ್ಟರ್ ಟ್ರೈನರ್ ಮೋಹನ್ ಕುಮಾರ್, ರಾಜಕೀಯ ಪಕ್ಷದ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News