ನವದೆಹಲಿ: ಮಿಜೋರಾಂನ ನೂತನ ಮುಖ್ಯಮಂತ್ರಿಯಾಗಿ ಮಿಜೋ ನ್ಯಾಷನಲ್ ಫ್ರಂಟ್ (ಎಮ್ಎನ್ಎಫ್)ನ ಝೋರ್ಮಂತಂಗ ಆಯ್ಕೆಯಾಗಿದ್ದಾರೆ.
2018ರ ಮಿಜೋರಾಮ್ ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಮಿಜೋ ನ್ಯಾಷನಲ್ ಫ್ರಂಟ್ ಭರ್ಜರಿ ಜಯಗಳಿಸಿದ ಹಿನ್ನಲೆಯಲ್ಲಿ ಈಗ ಝೋರ್ಮಂತಂಗ ಐಜಾಲ್ನಲ್ಲಿ ನಡೆದ ಸಮಾರಂಭದಲ್ಲಿ ಗವರ್ನರ್ ಕೆ.ರಾಜಶೇಖರನ್ ಸಮ್ಮುಖದಲ್ಲಿ ಮಿಜೊ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಈ ವಿಧಾನಸಭಾ ಚುನಾವಣೆಯ ವಿಜಯದೊಂದಿಗೆ ಝೋರ್ಮಂತಂಗರವರು 10 ವರ್ಷಗಳ ನಂತರ ಅಧಿಕಾರಕ್ಕೆ ಮರಳಿದ್ದಾರೆ.40 ಸದಸ್ಯರ ಅಸೆಂಬ್ಲಿಯ ಚುನಾವಣೆಯಲ್ಲಿ ಎಂಎನ್ಎಫ್ 26 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದರೆ, ಕಾಂಗ್ರೆಸ್ ಪಕ್ಷ ಕೇವಲ ಐದು ಸ್ಥಾನಗಳನ್ನು ಪಡೆಯಲು ಮಾತ್ರ ಸಫಲವಾಯಿತು.
ಫಲಿತಾಂಶ ಘೋಷಣೆಯಾದ ನಂತರ ಝೋರ್ಮಂತಂಗ ರಾಜ್ಯಪಾಲರನ್ನು ಐಜಾಲ್ನಲ್ಲಿರುವ ರಾಜ್ ಭವನದಲ್ಲಿ ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಪಡೆದರು.1987 ರಿಂದಲೂ ಮಿಜೋರಾಮ್ ಪೂರ್ಣ ಪ್ರಮಾಣದ ರಾಜ್ಯವಾದಾಗಿನಿಂದ ಯಾವುದೇ ಪಕ್ಷವು ಸತತ ಮೂರು ಬಾರಿ ಸರಕಾರವನ್ನು ರಚಿಸಲು ಸಾಧ್ಯವಾಗಿಲ್ಲ.