ತನ್ನ ಭಾರತೀಯ ಬಳಕೆದಾರರಿಗೆ UPI PAYMENT ವೈಶಿಷ್ಟ್ಯ ಒದಗಿಸಿದ YouTube

ಈ ಕುರಿತು ಘೋಷಣೆ ಮಾಡಿರುವ ಯುಟ್ಯೂಬ್, ಇದೀಗ ಬಳಕೆದಾರರು ಯುಟ್ಯೂಬ್ ಪ್ರಿಮಿಯಂ ಹಾಗೂ ಯುಟ್ಯೂಬ್ ಮ್ಯೂಸಿಕ್ ಗಳ ಚಂದಾದಾರಿಕೆಗೂ ಕೂಡ ಈ ವೈಶಿಷ್ಟ್ಯದ ಬಳಕೆ ಮಾಡಬಹುದು ಎಂದಿದೆ. ಸದ್ಯ ಈ ಪ್ಲಾಟ್ಫಾರ್ಮ್ ಗಳ ಮೇಲೆ ಕೆಲ ಕಂಟೆಂಟ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.

Last Updated : Apr 21, 2020, 02:37 PM IST
ತನ್ನ ಭಾರತೀಯ ಬಳಕೆದಾರರಿಗೆ UPI PAYMENT ವೈಶಿಷ್ಟ್ಯ ಒದಗಿಸಿದ YouTube title=

ನವದೆಹಲಿ: ಯುಟ್ಯೂಬ್ ತನ್ನ ಭಾರತೀಯ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡಿದೆ. ಈ ಹೊಸ ವೈಶಿಷ್ಟ್ಯವನ್ನು ಬಳಸಿ ಇದೀಗ ಬಳಕೆದಾರರು ಸೂಪರ್ ಚ್ಯಾಟ್, ಮೂವಿ ರೆಂಟಲ್ ಹಾಗೂ ಇತರೆ ಟ್ರಾನ್ಸಾಕ್ಷನ್ ಗಳನ್ನು ಸುಲಭವಾಗಿ ಮಾಡಬಹುದಾಗಿದೆ. ಇದಕ್ಕೂ ಮೊದಲು ಕೇವಲ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳನ್ನು ಬಳಸಿ ಇವುಗಳಿಗೆ ಹಣ ಪಾವತಿ ಮಾಡಬೇಕಾಗುತ್ತಿತ್ತು. ಆದರೆ, ಇದೀಗ ತಮ್ಮ ಬ್ಯಾಂಕ್ ಅಕೌಂಟ್ ಸಹಾಯದಿಂದ UPI ಬಳಸಿ ಗ್ರಾಹಕರು ಹಣ ಪಾವತಿಸಬಹುದಾಗಿದೆ.

ಈ ಕುರಿತು ಘೋಷಣೆ ಮಾಡಿರುವ ಯುಟ್ಯೂಬ್ ಇದೆಗ ಎಲ್ಲ UPI ಆಪ್ ಗಳು ಹೊಸ UPI ಪೇಮೆಂಟ್ ಆಪ್ಶನ್ ಅನ್ನು ಬಳಸಬಹುದಾಗಿದೆ ಎಂದಿದೆ.. ಇದನ್ನು ಒಂದು ತಿಂಗಳು, 3 ತಿಂಗಳು ಪ್ರಿಪೈಡ್ ಚಂದಾದಾರಿಕೆ ಮೇಲೆ ಪಡೆಯಬಹುದಾಗಿದೆ. ಆದರೆ ಯು ಟ್ಯೂಬ್ ಪ್ರಿಮಿಯಂ ಸೇವೆ ಬಳಸುವ ಗ್ರಾಹಕರಿಗೆ ಮಾತ್ರ ಯುಟ್ಯೂಬ್ ಈ ಸೌಕರ್ಯವನ್ನು ಸದ್ಯ ಒದಗಿಸಿದೆ. ಹೀಗಾಗಿ ಯುಟ್ಯೂಬ್ ಒರಿಗಿನಲ್ಸ್ ಬಳಸಲು ಇಚ್ಚಿಸುವ ಗ್ರಾಹಕರು ಮೊದಲು ಅದರ ಚಂದಾದಾರಿಕೆ ಪಡೆಯುವುದು ಅನಿವಾರ್ಯವಾಗಿದೆ. ಇತ್ತೀಚೆಗಷ್ಟೇ ಯುಟ್ಯೂಬ್ ತನ್ನ ಅಳವು ಒರಿಜಿನಲ್ ಷೋಗಳನ್ನು ತನ್ನ ಬಳಕೆದಾರರಿಗೆ ಉಚಿತವಾಗಿ ವಿಕ್ಷೀಸಲು ಅನುಮತಿ ನೀಡಿದೆ.  ಇದಕ್ಕೂ ಮೊದಲು ಕೇವಲ ಪ್ರಿಮಿಯಂ ಬಳಕೆದಾರರಿಗೆ ಮಾತ್ರ ಈ ಷೋಗಳನ್ನು ನೋಡುವ ಅವಕಾಶ ನೀಡಲಾಗಿತ್ತು.

ಇದಲ್ಲದೆ ಸದ್ಯ ಯುಟ್ಯೂಬ್ 'ಟಿಕ್ ಟಾಕ್' ನಂತಹ ಶಾರ್ಟ್ ವಿಡಿಯೋ ಆಪ್ ಜಾರಿಗೊಳಿಸಲು ಕಾರ್ಯತತ್ಪರವಾಗಿದ್ದು, ಈ ಆಪ್ ಬಳಸಿ ಬಳಕೆದಾರರು ಶಾರ್ಟ್ ವಿಡಿಯೋ ತಯಾರಿಸಿ ಅಪ್ಲೋಡ್ ಮಾಡಬಹುದಾಗಿದೆ. ಗೂಗಲ್ ಬಳಿ ಈಗಾಗಲೇ ಭಾರಿ ಪ್ರಮಾಣದಲ್ಲಿ ಲೈಸನ್ಸ್ ಪಡೆದ ಮ್ಯೂಜಿಕ್ ಕಂಟೆಂಟ್ ಇದ್ದು, ಬಳಕೆದಾರರು ತಮ್ಮ ಸೃಜನಾತ್ಮಕತೆಗೆ ಅನುಗುಣವಾಗಿ  ಇವುಗಳನ್ನು ಬಳಸಬಹುದಾಗಿದೆ.

Trending News