'ನೀವು ಅರಾವಳಿಯನ್ನು ನಾಶ ಮಾಡುತ್ತಿದ್ದೀರಿ, ಅದಾಗಕೂಡದು'- ಹರ್ಯಾಣ ಸರ್ಕಾರಕ್ಕೆ ಸುಪ್ರೀಂ ಚಾಟಿ

ಅರಾವಳಿ ಕಾಡಿನಲ್ಲಿ ಸಾವಿರಾರು ಎಕರೆ ಅರಣ್ಯ ಭೂಪ್ರದೇಶದಲ್ಲಿ ರಿಯಲ್ ಎಸ್ಟೇಟ್ ನಿರ್ಮಾಣಕ್ಕೆ ಅವಕಾಶ ನೀಡಕೂಡದು ಎಂದು ಸುಪ್ರೀಂಕೋರ್ಟ್ ಶುಕ್ರವಾರದಂದು ಆದೇಶ ನೀಡಿದೆ.ಅರಾವಳಿ ಅರಣ್ಯದಲ್ಲಿ ರಿಯಲ್ ಎಸ್ಟೇಟ್ ನಿಂದಾಗಿ ನಾಶವಾಗುತ್ತಿರುವ ಬಗ್ಗೆ  ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್  "ಇದು ನಿಜವಾಗಿಯೂ ಆಘಾತಕಾರಿ. ನೀವು ಅರಣ್ಯವನ್ನು ನಾಶ ಮಾಡುತ್ತಿದ್ದೀರಿ. ಇದಕ್ಕೆ ಅನುಮತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. 

Last Updated : Mar 1, 2019, 06:13 PM IST
'ನೀವು ಅರಾವಳಿಯನ್ನು ನಾಶ ಮಾಡುತ್ತಿದ್ದೀರಿ, ಅದಾಗಕೂಡದು'- ಹರ್ಯಾಣ ಸರ್ಕಾರಕ್ಕೆ ಸುಪ್ರೀಂ ಚಾಟಿ  title=
file photo

ನವದೆಹಲಿ: ಅರಾವಳಿ ಕಾಡಿನಲ್ಲಿ ಸಾವಿರಾರು ಎಕರೆ ಅರಣ್ಯ ಭೂಪ್ರದೇಶದಲ್ಲಿ ರಿಯಲ್ ಎಸ್ಟೇಟ್ ನಿರ್ಮಾಣಕ್ಕೆ ಅವಕಾಶ ನೀಡಕೂಡದು ಎಂದು ಸುಪ್ರೀಂಕೋರ್ಟ್ ಶುಕ್ರವಾರದಂದು ಆದೇಶ ನೀಡಿದೆ.ಅರಾವಳಿ ಅರಣ್ಯದಲ್ಲಿ ರಿಯಲ್ ಎಸ್ಟೇಟ್ ನಿಂದಾಗಿ ನಾಶವಾಗುತ್ತಿರುವ ಬಗ್ಗೆ  ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್  "ಇದು ನಿಜವಾಗಿಯೂ ಆಘಾತಕಾರಿ. ನೀವು ಅರಣ್ಯವನ್ನು ನಾಶ ಮಾಡುತ್ತಿದ್ದೀರಿ. ಇದಕ್ಕೆ ಅನುಮತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. 

ಹರ್ಯಾಣವು ಪಂಜಾಬ್ ಜಮೀನು ಸಂರಕ್ಷಣಾ ಕಾಯಿದೆಯಲ್ಲಿನ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಮುಂದಾಗಿರುವ ಕ್ರಮಕ್ಕೆ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.ಹರ್ಯಾಣ ಸರ್ಕಾರವು 119 ವರ್ಷಗಳಷ್ಟು ಹಳೆಯದಾಗಿರುವ ಕಾನೂನನ್ನು ತಿದ್ದುಪಡಿ ಮಾಡಲು ಮುಂದಾಗಿದ್ದಲ್ಲಿ ಅದು ಎನ್ಸಿಆರ್ ಪ್ರದೇಶದಲ್ಲಿರುವ ಅರಾವಳಿ ಅರಣ್ಯ ಪ್ರದೇಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇನ್ನೊಂದೆಡೆ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿರುವ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಇದು ಹಳೆಯ ಕಾನೂನಾಗಿದ್ದು ಈ ಮಧ್ಯ ಹಲವಾರು ಬದಲಾವಣೆಗಳಾಗಿವೆ. ಈ ಹಿನ್ನಲೆಯಲ್ಲಿ ಇದನ್ನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

1900 ರಲ್ಲಿ ಆಗಿನ ಪಂಜಾಬ್ ಸರಕಾರವು ವಿಭಜನೆಯಾಗುವ ಮೊದಲು ಈ ಕಾಯಿದೆಯನ್ನು ಪರಿಚಯಿಸಿತ್ತು. ಸವೆತಕ್ಕೆ ಒಳಗಾಗುವ ಅಥವಾ ಸವೆತಕ್ಕೆ ಹೊಣೆಗಾರರಾಗಿರುವ ಪ್ರದೇಶಗಳಲ್ಲಿ ಸವೆತದ ನೀರು ಮತ್ತು / ಅಥವಾ ಸವೆತದ ತಡೆಗಟ್ಟುವಿಕೆಗಾಗಿ ಕಾನೂನನ್ನು ರೂಪಿಸಲಾಗಿತ್ತು .ಇನ್ನೊಂದೆಡೆ ಸರ್ಕಾರದ ನಡೆಗೆ ಪ್ರತಿಪಕ್ಷಗಳು ಕೂಡ ವಿರೋಧ ಮಾಡಿದ್ದು ಇದು ಹರ್ಯಾಣ ಹಾಗೂ ದೆಹಲಿಯ ಸುತ್ತಮುತ್ತಲಿನ ಪರಿಸರವನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿವೆ.

Trending News