ನೂತನ ಕ್ಯಾಲೆಂಡರ್ ನಲ್ಲಿ ಮದರಸಾ ರಜೆಗಳನ್ನು ಕಡಿತಗೊಳಿಸಿದ ಯೋಗಿ ಅದಿತ್ಯನಾಥ ಸರ್ಕಾರ

    

Last Updated : Jan 3, 2018, 06:07 PM IST
ನೂತನ ಕ್ಯಾಲೆಂಡರ್ ನಲ್ಲಿ ಮದರಸಾ ರಜೆಗಳನ್ನು ಕಡಿತಗೊಳಿಸಿದ ಯೋಗಿ ಅದಿತ್ಯನಾಥ ಸರ್ಕಾರ title=
ಫೋಟೋ ಕೃಪೆ(ಸಾಂದರ್ಭಿಕ ಚಿತ್ರ) :pixbay

ನವದೆಹಲಿ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರವು  2018 ರ ಕ್ಯಾಲೆಂಡರ್ ನಲ್ಲಿ ಸರ್ಕಾರವು ಗುರುತಿಸಲ್ಪಟ್ಟ ಮದ್ರಸಾಗಳಿಗೆ ನೀಡಿದ ರಜಾದಿನಗಳನ್ನು ಕಡಿತಗೊಳಿಸಿದೆ. ಈ ನಡೆಯನ್ನು  ಇಸ್ಲಾಮಿಕ್ ಸಂಸ್ಥೆಗಳು ತೀವ್ರವಾಗಿ ಖಂಡಿಸಿವೆ.

ಉತ್ತರ ಪ್ರದೇಶದ  ಮದ್ರಸಾ ಮಂಡಳಿಯ ರಿಜಿಸ್ಟ್ರಾರ್ ರಾಹುಲ್ ಗುಪ್ತಾ ಹೊರಡಿಸಿದ ರಜಾದಿನಗಳ ಪಟ್ಟಿಯಲ್ಲಿ  ದೀಪಾವಳಿ, ಕ್ರಿಸ್ಮಸ್, ದಸರಾ, ಮಹಾವೀರ ಜಯಂತಿ, ಬುದ್ಧ ಪೂರ್ಣಿಮ ಮತ್ತು ರಕ್ಷಾ ಬಂಧನ್ ಮುಂತಾದ ಮುಸ್ಲಿಂಮೇತರ ಸಮುದಾಯಗಳ ಹಬ್ಬದ ದಿನಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಆದರೆ ರಮಜಾನ್ಗೆ  ನೀಡಲಾದ ರಜಾದಿನಗಳ ಸಂಖ್ಯೆ 46 ರಿಂದ 42 ಕ್ಕೆ ಇಳಿಸಿರುವ ಸರ್ಕಾರದ ನಡೆಗೆ ಇಸ್ಲಾಮಿಕ್ ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಹೊಸ ಕ್ಯಾಲೆಂಡರ್ ಪ್ರಕಾರ ರಂಜಾನ್ ಆರಂಭದ ಎರಡು ದಿನಗಳ ಮುಂಚೆ ರಜಾದಿನಗಳನ್ನು ನೀಡಲಾಗುವುದು.ಆದರೆ ಇದಕ್ಕೂ ಮೊದಲು 10 ದಿನಗಳ ಮುಂಚೆ ರಮಜಾನ್ಗೆ ರಜೆ ನೀಡಲಾಗುತ್ತಿತ್ತು. ಈ ಸರ್ಕಾರದ ನಡೆಯ ಬಗ್ಗೆ ಪ್ರತಿಕ್ರಯಿಸಿರುವ ಸಹಾಬ್ ಜಮಾನ್ ಮದ್ರಾಸ್ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರರಿಗೆ ಹಬ್ಬದ ಸಮಯದಲ್ಲಿ ತಮ್ಮ ಮನೆಗಳನ್ನು ತಲುಪಲು ತೊಂದರೆ ಉಂಟಾಗುತ್ತದೆ ಹೇಳಿದರು.

Trending News