ಲಖನೌ: ಅಯೋಧ್ಯಾ (Ayodhya) ಜಿಲ್ಲೆಯಲ್ಲಿರುವ ವಿಮಾನ ನಿಲ್ದಾಣದ ಹೆಸರನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣವನ್ನಾಗಿ ಬದಲಾಯಿಸುವ ಪ್ರಸ್ತಾವನೆಗೆ ಮಂಗಳವಾರ ಯೋಗಿ ಸರ್ಕಾರ ಒಪ್ಪಿಗೆ ನೀಡಿದೆ. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ ಅಧಿಕೃತ ಮಾರುಕಟ್ಟೆ ಸ್ಥಳಗಳಲ್ಲಿ ಮಂಡಿ ಶುಲ್ಕವನ್ನು ಪ್ರಸ್ತುತ ಇರುವ ಶೇ.2 ರಿಂದ ಶೇ.1ಕ್ಕೆ ಇಳಿಕೆ ಮಾಡಿದ್ದು, ವಿಕಾಸ್ ಸುಂಕದಲ್ಲಿ ಯಥಾಸ್ಥಿತಿ ಕಾಯಲು ಮಂತ್ರಿ ಮಂಡಲ ತೀರ್ಮಾನಿಸಿದೆ.
ಇದನ್ನು ಓದಿ-ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿಎಚ್‌ಪಿಯ ವಿಶೇಷ ಪ್ಲಾನ್!
ಕೃಷಿ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ -2020 ರ ಅಡಿಯಲ್ಲಿ ಸುಂಕ ದರವನ್ನು ತಿದ್ದುಪಡಿ ಮಾಡುವ ಮೂಲಕ ಮತ್ತು ದರಗಳನ್ನು ಕಡಿಮೆ ಮಾಡುವ ಮೂಲಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಮಂತ್ರಿ ಮಂಡಲ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಉತ್ತರಪ್ರದೇಶ ರಾಜ್ಯ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ ನಿಯಮಗಳು, 2020 ರ ಪ್ರಣಾಳಿಕೆಯ ಪ್ರಸ್ತಾಪಪಕ್ಕೆ ಕ್ಯಾಬಿನೆಟ್ ಅಂಗೀಕಾರ ನೀಡಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಇದನ್ನು ಓದಿ-ರಾಮಮಂದಿರ ನಿರ್ಮಾಣಕ್ಕಾಗಿ ಜನತೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಕೇಳಿದ್ದೇನು?
ಸರಯು ಕಾಲುವೆ ಯೋಜನೆಯ ಹಂತ -3 ಮತ್ತು ಅರ್ಜುನ್ ಸಹಾಯಕ್ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳ ಕ್ರಿಯಾ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಗೋರಖ್‌ಪುರ ಮತ್ತು ವಾರಣಾಸಿ ವಿಭಾಗಗಳಲ್ಲಿ ವಿಭಾಗೀಯ ಮಟ್ಟದಲ್ಲಿ ಸಮಗ್ರ ಕಚೇರಿ ಸಂಕೀರ್ಣ ನಿರ್ಮಾಣದ ಪ್ರಸ್ತಾಪಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಅಲ್ಲದೆ, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ತಿದ್ದುಪಡಿ ಅಗತ್ಯವಿದ್ದರೆ, ಇದಕ್ಕಾಗಿ ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ.
ಇದನ್ನು ಓದಿ- ರಾಮಮಂದಿರಕ್ಕೆ ಕೊಡುಗೆ ನೀಡಿ 'ನಾನು ಕೂಡ ಹಿಂದೂ' ಎಂದ ಮುಸ್ಲಿಂ ಮುಖಂಡ
ಸಮಗ್ರ ವಿಭಾಗೀಯ ಕಚೇರಿಯ ರಚನೆಯೊಂದಿಗೆ, ಮಂಡಲ್ ಮಟ್ಟದಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳು ಒಂದೇ ಆವರಣದಲ್ಲಿ ತರಲು ಮತ್ತು ಕೆಲಸ ಮಾಡಲು ಇದರಿಂದ ಸಾಧ್ಯವಾಗಲಿದೆ. ತಾಂತ್ರಿಕ ಸೌಲಭ್ಯಗಳಿಂದಾಗಿ, ಕಚೇರಿ ವಾತಾವರಣವು ಕೆಲಸದ ಸುಗಮ ಕಾರ್ಯಾಚರಣೆಗೆ ಸಹ ಸೂಕ್ತವಾಗಿದೆ. ಸಂಚಾರ ಸುರಕ್ಷತೆಗಾಗಿ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಐದು ನಿರ್ಮಾಣ ಹಂತದಲ್ಲಿರುವ ಪೋಲೀಸ್ ಚೌಕಿಗಳು ಮತ್ತು 10 ನೂತನ ಪೋಲೀಸ್ ಚೌಕಿಗಳನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.