BIG NEWS: ಈ ಬ್ಯಾಂಕ್‌ನಲ್ಲಿ ನಿಮ್ಮ ಹಣ ಠೇವಣಿ ಮಾಡಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ

YES BANK Crisis: ನಗದು ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ (YES BANK) ಅನ್ನು ನಿಷೇಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗುರುವಾರ ತನ್ನ ನಿರ್ದೇಶಕರ ಮಂಡಳಿಯನ್ನು ವಿಸರ್ಜಿಸಿದೆ.  

Last Updated : Mar 6, 2020, 11:41 AM IST
BIG NEWS: ಈ ಬ್ಯಾಂಕ್‌ನಲ್ಲಿ ನಿಮ್ಮ ಹಣ ಠೇವಣಿ ಮಾಡಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ title=
Photo: zeebiz

ನವದೆಹಲಿ: YES BANK Crisis: ನಗದು ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ (YES BANK) ಅನ್ನು ನಿಷೇಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗುರುವಾರ ತನ್ನ ನಿರ್ದೇಶಕರ ಮಂಡಳಿಯನ್ನು ವಿಸರ್ಜಿಸಿದೆ. ಇದಲ್ಲದೆ, ಬ್ಯಾಂಕ್ ಠೇವಣಿದಾರರಿಗೆ 50,000 ರೂ. ವಿತ್ ಡ್ರಾ ಮಿತಿಯನ್ನು ನಿಗದಿಪಡಿಸಲಾಗಿದೆ. ಬ್ಯಾಂಕಿಗೆ ನಿರ್ವಾಹಕರನ್ನು ಸಹ ನೇಮಿಸಲಾಗಿದೆ. ಪಿಟಿಐ ಸುದ್ದಿಯ ಪ್ರಕಾರ, ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ ಠೇವಣಿದಾರರ ಹಿತಾಸಕ್ತಿಗಳನ್ನು ಕಾಪಾಡಲು ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. YES ಬ್ಯಾಂಕಿನ ಷೇರುಗಳು ಮಾರ್ಚ್ 6 ರಂದು ಬೆಳಿಗ್ಗೆ 10 ರ ಸುಮಾರಿಗೆ 27.65 ರೂ. ಆಗ ಶೇ. 25 ರಷ್ಟು ದುರ್ಬಲವಾಗಿತ್ತು.

ರಿಸರ್ವ್ ಬ್ಯಾಂಕ್ YES ಬ್ಯಾಂಕಿನ ನಿರ್ದೇಶಕರ ಮಂಡಳಿಯನ್ನು ವಿಸರ್ಜಿಸಿದೆ. ಕಳೆದ ಆರು ತಿಂಗಳಿನಿಂದ ಬ್ಯಾಂಕಿಗೆ ಅಗತ್ಯವಾದ ಬಂಡವಾಳವನ್ನು ಸಂಗ್ರಹಿಸುವಲ್ಲಿ ನಿರ್ದೇಶಕರ ಮಂಡಳಿ ವಿಫಲವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಪ್ರಶಾಂತ್ ಕುಮಾರ್ ಅವರನ್ನು YES ಬ್ಯಾಂಕ್‌ನ ನಿರ್ವಾಹಕರಾಗಿ ನೇಮಿಸಲಾಗಿದೆ.

ಸಂಜೆ ತಡವಾಗಿ ಹೊರಡಿಸಿದ ಹೇಳಿಕೆಯಲ್ಲಿ, 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 45 ರ ಪ್ರಕಾರ, ವಿಶ್ವಾಸಾರ್ಹ ಪುನರುಜ್ಜೀವನ ಯೋಜನೆಯ  (Reliable revival plan)  ಅನುಪಸ್ಥಿತಿಯಲ್ಲಿ, ಬ್ಯಾಂಕಿನ ಠೇವಣಿದಾರರ ಸಾರ್ವಜನಿಕ ಹಿತಾಸಕ್ತಿ ಮತ್ತು ಹಿತದೃಷ್ಟಿಯಿಂದ ಬೇರೆ ದಾರಿಯಿಲ್ಲದೆ ಕೇಂದ್ರ ಬ್ಯಾಂಕ್ಈ ತೀರ್ಮಾನಕ್ಕೆ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಬ್ಯಾಂಕಿನ ಆಡಳಿತವು ವಿವಿಧ ಹೂಡಿಕೆದಾರರೊಂದಿಗೆ ಮಾತನಾಡುತ್ತಿರುವುದನ್ನು ಸೂಚಿಸಿದೆ ಮತ್ತು ಅದರಲ್ಲಿ ಯಶಸ್ಸನ್ನು ಪಡೆಯುವ ಭರವಸೆ ಇದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಂಡವಾಳ ಹೂಡಿಕೆಗಾಗಿ ಬ್ಯಾಂಕ್ ಹಲವಾರು ಖಾಸಗಿ ಷೇರು ಕಂಪನಿಗಳೊಂದಿಗೆ ಮಾತುಕತೆ ನಡೆಸಿತು. ಈ ಹೂಡಿಕೆದಾರರು ರಿಸರ್ವ್ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ, ಆದರೆ ವಿವಿಧ ಕಾರಣಗಳಿಂದಾಗಿ ಅವರು ಯಾವುದೇ ಬಂಡವಾಳವನ್ನು ಬ್ಯಾಂಕಿಗೆ ಸೇರಿಸಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಿಯಂತ್ರಕ ಪುನರ್ರಚನೆಯ ಬದಲು, ಬ್ಯಾಂಕ್ ಅಥವಾ ಮಾರುಕಟ್ಟೆ ಆಧಾರಿತ ಪುನರುಜ್ಜೀವನವು ಉತ್ತಮ ಆಯ್ಕೆಯಾಗಿರಬಹುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ, ಆದ್ದರಿಂದ ಅಂತಹ ಪ್ರಕ್ರಿಯೆಗೆ ರಿಸರ್ವ್ ಬ್ಯಾಂಕ್ ಎಲ್ಲಾ ಪ್ರಯತ್ನಗಳನ್ನು ಮಾಡಿತು. ವಿಶ್ವಾಸಾರ್ಹ ಪುನರುಜ್ಜೀವನ ಯೋಜನೆಯನ್ನು ರೂಪಿಸಲು ಬ್ಯಾಂಕಿನ ನಿರ್ವಹಣೆಗೆ ಸಂಪೂರ್ಣ ಅವಕಾಶವನ್ನು ನೀಡಲಾಯಿತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಕೇಂದ್ರ ಬ್ಯಾಂಕ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ಇದಕ್ಕೂ ಮೊದಲು, ಎಸ್‌ಬಿಐ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಯೆಸ್ ಬ್ಯಾಂಕ್‌ಗೆ ಜಾಮೀನು ನೀಡಲು ಸರ್ಕಾರ ಅವಕಾಶ ನೀಡಿತು. ಈ ಯೋಜನೆಯನ್ನು ಜಾರಿಗೊಳಿಸಿದರೆ, ಖಾಸಗಿ ವಲಯದ ಬ್ಯಾಂಕ್ ಅನ್ನು ಸಾರ್ವಜನಿಕ ನಿಧಿಯ ಮೂಲಕ ಬಿಕ್ಕಟ್ಟಿನಿಂದ ರಕ್ಷಿಸಿದ್ದೇ ಆದಲ್ಲಿ ಅನೇಕ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಂತಹ ಒಂದು ಮಹತ್ವದ ಘಟನೆಗೆ ಇದು ಸಾಕ್ಷಿಯಾಗಲಿದೆ.

ಈ ಮೊದಲು 2004 ರಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಅನ್ನು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಲ್ಲಿ ವಿಲೀನಗೊಳಿಸಲಾಯಿತು. 2006 ರಲ್ಲಿ, ಐಡಿಬಿಐ ಬ್ಯಾಂಕ್ ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಂಡಿತು. ಸುಮಾರು ಆರು ತಿಂಗಳ ಹಿಂದೆ ರಿಸರ್ವ್ ಬ್ಯಾಂಕ್ ದೊಡ್ಡ ಹಗರಣ ಬೆಳಕಿಗೆ ಬಂದ ನಂತರ ನಗರದ ಸಹಕಾರಿ ಬ್ಯಾಂಕ್ ಪಿಎಮ್‌ಸಿ ಬ್ಯಾಂಕ್‌ನಲ್ಲೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದೆ.

Trending News