ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯ ಮೆಗಾ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್(U-15 National Wrestling Championship)ನಲ್ಲಿ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ(Wrestling Federation of India) ಬ್ರಿಜ್ ಭೂಷಣ್ ಶರಣ್ ಸಿಂಗ್ ಉತ್ತರ ಪ್ರದೇಶದ ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದ್ದು ರಾಂಚಿಯ ಜನತೆಗೆ ಅಚ್ಚರಿ ಮೂಡಿಸಿದೆ. ವೇದಿಕೆಯ ಮೇಲೆ ಈ ರೀತಿ ಘಟನೆ ನಡೆದಿರುವುದು ಸ್ಪರ್ಧೆಯ ವೇಳೆ ಕೆಲಕಾಲ ಗದ್ದಲ ಉಂಟಾಯಿತು.
ವೇದಿಕೆಯ ಮೇಲೆ ಕುಸ್ತಿಪಟುವಿಗೆ ಕಪಾಳಮೋಕ್ಷ!
ಉತ್ತರಪ್ರದೇಶ ಸೇರಿದಂತೆ ಇತರ ರಾಜ್ಯಗಳ ಆಟಗಾರರು ಕುಸ್ತಿಪಟು(Wrestler)ವಿಗೆ ಕಪಾಳಮೋಕ್ಷ ಮಾಡಿದ್ದನ್ನು ತೀವ್ರವಾಗಿ ಪ್ರತಿಭಟಿಸಿದ್ದಾರೆ. ನಂತರ ಜಾರ್ಖಂಡ್ ಕುಸ್ತಿ ಸಂಸ್ಥೆಯ ಅಧ್ಯಕ್ಷ ಭೋಲಾನಾಥ್ ಸಿಂಗ್ ಮತ್ತು ಇತರರು ಮಧ್ಯಪ್ರವೇಶಿಸಿ ವಿಷಯವನ್ನು ಸಮಾಧಾನಪಡಿಸಿದರು. ಇದರೊಂದಿಗೆ ಶುಕ್ರವಾರ ಸ್ಪರ್ಧೆ ಕೊನೆಗೊಂಡಿತು. ಈ 3 ದಿನಗಳ ಸ್ಪರ್ಧೆಯು ಡಿಸೆಂಬರ್ 15 ರಂದು ಪ್ರಾರಂಭವಾಯಿತು. ದೇಶದ ವಿವಿಧ ರಾಜ್ಯಗಳಿಂದ 800ಕ್ಕೂ ಹೆಚ್ಚು ಕುಸ್ತಿಪಟುಗಳು ಇದರಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: IPL 2022: ಲಕ್ನೋ ತಂಡದ ಮುಖ್ಯ ಕೋಚ್ ಆಗಲಿರುವ ಆಂಡಿ ಫ್ಲವರ್ ..!
ಕುಸ್ತಿಪಟು ಅನರ್ಹ ಎಂದು ಕಂಡುಬಂದಿತ್ತು
ಕುಸ್ತಿ ಸ್ಪರ್ಧೆಗೆ ವಯಸ್ಸಿನ ಪರಿಶೀಲನೆ ಸಮಯದಲ್ಲಿ ಉತ್ತರಪ್ರದೇಶದ ಕುಸ್ತಿಪಟು 15 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಕಂಡುಬಂದಿತ್ತು. ತಾಂತ್ರಿಕ ಆಧಾರದ ಮೇಲೆ ಅವರನ್ನು ಅನರ್ಹಗೊಳಿಸಲಾಗಿತ್ತು. ಆ ಕುಸ್ತಿಪಟು ಮೊದಲು ಸ್ಪರ್ಧೆಯ ತಾಂತ್ರಿಕ ತಂಡದ ಮುಂದೆ ಆಕ್ಷೇಪಣೆ ಸಲ್ಲಿಸಿದ್ದ. ಅವರ ಆಕ್ಷೇಪಣೆಯನ್ನು ತಿರಸ್ಕರಿಸಿದಾಗ ಅವರು ವೇದಿಕೆ ಏರಿ ವಾಗ್ವಾದ ನಡೆಸಲು ಶುರು ಮಾಡಿದರು. ಈ ಬಗ್ಗೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದರು. ತನಗೆ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದರು.
‘ನಮ್ಮ ಒಕ್ಕೂಟದಲ್ಲಿ ಅಶಿಸ್ತಿಗೆ ಜಾಗವಿಲ್ಲ’
ತಾಂತ್ರಿಕ ತಂಡದಿಂದ ಅನರ್ಹಗೊಂಡಾಗ ಅವರು ಸ್ಪರ್ಧೆ(Wrestling Championship)ಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ. ವಯಸ್ಸು ಹೆಚ್ಚಾಗಿದ್ದರು ಸ್ಪರ್ಧೆಗೆ ಅನುಮತಿ ಕೇಳಿದ ಸ್ಪರ್ಧೆಗೆ ಪ್ರಾರಂಭದಲ್ಲಿ ಬ್ರಿಜ್ ಭೂಷಣ್ ಶರಣ್ ಬುದ್ದಿವಾದ ಹೇಳಿದ್ದರು. ಆದರೂ ಕೇಳದ ಕುಸ್ತಿಪಟು ತನಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲೇಬೇಕೆಂದು ಒತ್ತಾಯಿಸಿದ್ದರು. ಇದರಿಂದ ಕೋಪಗೊಂಡ ಸಿಂಗ್, ಯುವ ಕುಸ್ತಿಪಟುವಿಗೆ ವೇದಿಕೆಯ ಮೇಲೆಯೇ ಕಪಾಳಮೋಕ್ಷ ಮಾಡಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಗದ್ದಲದ ವಾತಾವರಣ ಉಂಟಾಗಿತ್ತು. ಕುಸ್ತಿಪಟು ಅನರ್ಹಗೊಂಡರೂ ಅನುಚಿತ ವರ್ತನೆಗೆ ಇಳಿದಿದ್ದು ಸರಿಯಲ್ಲವೆಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ. ಆತನ ವರ್ತನೆಯಿಂದ ನನಗೆ ಸಿಟ್ಟು ಬಂತು. ಹೀಗಾಗಿ ಆತನ ಮೇಲೆ ನಾನು ಕೈ ಮಾಡಿದ್ದೇನೆ. ನಮ್ಮ ಸಂಘದಲ್ಲಿ ಅಶಿಸ್ತಿಗೆ ಜಾಗವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Asian Champions Trophy hockey: ಪಾಕಿಸ್ತಾನದ ವಿರುದ್ಧ ಭಾರತ ತಂಡಕ್ಕೆ ಗೆಲುವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.