ಮಹಿಳೆಯರು ತಮ್ಮ ಕುಟುಂಬ ರಕ್ಷಿಸಲು ಖಡ್ಗ ಹಿಡಿಯಬೇಕು -ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ

   

Last Updated : May 10, 2018, 03:02 PM IST
ಮಹಿಳೆಯರು ತಮ್ಮ ಕುಟುಂಬ ರಕ್ಷಿಸಲು ಖಡ್ಗ ಹಿಡಿಯಬೇಕು -ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ title=

ಬುರ್ದ್ವಾನ್: ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹಿಳೆಯರ ತಮ್ಮ ಕುಟುಂಬವನ್ನು ಸಮಾಜ ಘಾತುಕ ಶಕ್ತಿಗಳಿಂದ ರಕ್ಷಿಸಲು ಖಡ್ಗವನ್ನು ಹಿಡಿಯಬೇಕು ಎಂದರು. ಕಾಳಿ ಮಾತೆಯು ಕೂಡ ಖಡ್ಗವನ್ನು ಹಿಡಿದಿರುತ್ತಾಳೆ. ಆದ್ದರಿಂದ ಸಮಾಜ ಘಾತುಕ ಶಕ್ತಿಗಳನ್ನು ಎದುರಿಸಲು ನೀವು ಕೂಡ ಖಡ್ಗವನ್ನು ಹಿಡಿಯಿರಿ ಅಷ್ಟು ಸಾಕು ಎಂದು ಅವರು ವಿನಂತಿಸಿಕೊಂಡರು. 

ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಕಂಕಸಾ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಬಾಬುಲ್ ಖಡ್ಗ ಹಿಡಿಯುವುದರ ಮೂಲಕ ರಕ್ಷಣೆ ಮಾಡಿಕೊಳ್ಳಬೇಕು ಎಂದು ಮಹಿಳೆಯರಿಗೆ ಸಲಹೆ ನೀಡಿದರು. ಬುರ್ದ್ವಾನ್ ಪ್ರದೇಶದ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು ಮತ್ತು ಮತವನ್ನು ಚಲಾಯಿಸಬೇಕು ಇದಕ್ಕೆ ಯಾವುದೇ ರೀತಿಯ ಸಮಾಜ ಘಾತುಕ ಶಕ್ತಿಗಳು ಭಯ ಬಿಳಿಸಿದರೂ ಕೂಡ  ಎದುರಾಗಿ ನಿಲ್ಲಬೇಕು ಎಂದು ತಿಳಿಸಿದರು. ಇದೇ ತಾವು ಪ್ರಚೋದಿಸುತ್ತಿಲ್ಲ ಬದಲಾಗಿ ನಾರಿ ಶಕ್ತಿ ಬಗ್ಗೆ ಹೇಳುತ್ತಿದ್ದೇನೆ ಎಂದರು. 

Trending News