ಪ್ರೀತಿಸಿದವಳ ದೇಹವನ್ನು ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿ ಬೀದಿ ನಾಯಿಗಳಿಗೆ ತಿನ್ನಿಸಿದ ! ಮುಂಬಯಿಯಲ್ಲಿ ಘನ ಘೋರ ಘಟನೆ

 32 ವರ್ಷದ ಮಹಿಳೆಯ ವಿರೂಪಗೊಂಡ  ಮೃತದೇಹ  ಪತ್ತೆಯಾಗಿದೆ. ಮಹಿಳೆಯನ್ನು ಆಕೆಯ ಲಿವ್ ಇನ್-ಪಾರ್ಟ್‌ನರ್‌ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

Written by - Ranjitha R K | Last Updated : Jun 8, 2023, 02:12 PM IST
  • ಮುಂಬೈನಲ್ಲಿ ಶೃದ್ಧಾ ವಾಕರ್ ಹತ್ಯೆ ಪ್ರಕರಣ ಹೋಲುವ ಘಟನೆ
  • ಬೀದಿ ನಾಯಿಗಳಿಗೆ ಆಹಾರವಾಗಿಸಿದ
  • ಬಿಲ್ಡಿಂಗ್ ನಿವಾಸಿಗಳಿಂದ ದೂರು
ಪ್ರೀತಿಸಿದವಳ ದೇಹವನ್ನು ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿ ಬೀದಿ ನಾಯಿಗಳಿಗೆ ತಿನ್ನಿಸಿದ ! ಮುಂಬಯಿಯಲ್ಲಿ ಘನ ಘೋರ ಘಟನೆ  title=

ಮುಂಬೈ : ಶೃದ್ಧಾ ವಾಕರ್ ಹತ್ಯೆ ಪ್ರಕರಣ ಹೋಲುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಮುಂಬೈನ ಮೀರಾ ರೋಡ್‌ನಲ್ಲಿರುವ ಫ್ಲ್ಯಾಟ್‌ನಿಂದ 32 ವರ್ಷದ ಮಹಿಳೆಯ ವಿರೂಪಗೊಂಡ  ಮೃತದೇಹ  ಪತ್ತೆಯಾಗಿದೆ. ಮಹಿಳೆಯನ್ನು ಆಕೆಯ ಲಿವ್ ಇನ್-ಪಾರ್ಟ್‌ನರ್‌ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ನಂತರ ಮೇಲೆ ಆಕೆಯ ದೇಹವನ್ನು ಹಲವಾರು ಭಾಗಗಳಾಗಿ ಕತ್ತರಿಸಿ ಹಾಕಿದ್ದಾನೆ. 

ಶಂಕಿತ ಆರೋಪಿಯನ್ನು ಮನೋಜ್ ಸಹಾನಿ (56) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಮೀರಾ ರೋಡ್ ಪ್ರದೇಶದ ಗೀತಾ ನಗರ 7 ನೇ ಹಂತದ ಗೀತಾ ಆಕಾಶ್ ದೀಪ್ ಬಿಲ್ಡಿಂಗ್‌ನ ಜೆ ವಿಂಗ್‌ನಲ್ಲಿ ಫ್ಲಾಟ್ 704 ರಲ್ಲಿ ಸರಸ್ವತಿ ವೈದ್ಯ ಅವರೊಂದಿಗೆ ಆರೋಪಿ ವಾಸವಾಗಿದ್ದ. 

ಇದನ್ನೂ ಓದಿ : World Food Safety Day 2023 : ವಿಶ್ವ ಆಹಾರ ಸುರಕ್ಷತಾ ದಿನ ಆಚರಣೆಯ ಉದ್ದೇಶ, ಇತಿಹಾಸ ತಿಳಿಯಿರಿ

 ಬಿಲ್ಡಿಂಗ್ ನಿವಾಸಿಗಳಿಂದ ದೂರು : 
ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ಬುಧವಾರ ನಯಾನಗರ ಪೊಲೀಸ್ ಠಾಣೆಗೆ ಬಿಲ್ಡಿಂಗ್ ನಿವಾಸಿಗಳು ಕರೆ ಮಾಡಿ ದೂರು ನೀಡಿದ್ದಾರೆ. ಕೂಡಲೇ ನಯಾನಗರ ಠಾಣೆಯ ತಂಡ ಸ್ಥಳಕ್ಕೆ ಧಾವಿಸಿ  ಪರಿಶೀಲನೆ ನಡೆಸಿದೆ. ಈ ವೇಳೆ ಮಹಿಳೆಯ ಮೃತದೇಹ ಪೊಲೀಸರ್ ಕಣ್ಣಿಗೆ ಬಿದ್ದಿದೆ. ಮೃತದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಗಿದ್ದು, ಅದರಲ್ಲಿ ಕೆಲ ತುಂಡುಗಳು ಕಾಣೆಯಾಗಿವೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. 

 

ಆರೋಪಿ ಮನೋಜ್ ಸಹಾನಿ ತನ್ನ ಫ್ಲಾಟ್‌ನಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ. ಬಂಧನದ ವೇಳೆ ಕೂಡಾ ಸಹಾನಿಯ ಮುಖದಲ್ಲಿ ಪಶ್ಚಾತ್ತಾಪದ ಭಾವವೇ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ ಅಪಾಯಕಾರಿ ರೂಪ ಪಡೆಯಲಿರುವ 'ಬಿಪರ್ಜೋಯ್ ಚಂಡಮಾರುತ" ಎರಡು ದಿನ ಬಿಡದೇ ಸುರಿಯುವುದು ಮಳೆ

ದೇಹದ ಭಾಗಗಳನ್ನು ಕುಕ್ಕರ್‌ನಲ್ಲಿ ಬೇಯಿಸಿ, ಬೀದಿ ನಾಯಿಗಳಿಗೆ ತಿನ್ನಿಸಿದ ಆರೋಪ : 
ಕೆಲ ಮಾಧ್ಯಮ ವರದಿಗಳ ಪ್ರಕಾರ, ವ್ಯಕ್ತಿ ತನ್ನ ಸಂಗಾತಿಯ ದೇಹವನ್ನು ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿ ಆಕೆಯ ದೇಹದ ಭಾಗಗಳನ್ನು ಕುಕ್ಕರ್‌ನಲ್ಲಿ  ಬೇಯಿಸಿದ್ದಾನೆ. ಸಹಾನಿ ಕಳೆದ ಎರಡು ಮೂರು ದಿನಗಳಿಂದ ಈ ಪ್ರದೇಶದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವುದನ್ನು ಕೂಡಾ ಸ್ಥಳೀಯರು ಗಮನಿಸಿದ್ದಾರೆ. ಸಹಾನಿ  ಹಿಂದೆಂದೂ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರಲಿಲ್ಲ ಎನ್ನಲಾಗಿದೆ. ಮಾಡಿರಲಿಲ್ಲ.

ಮಹಿಳೆಯ ದೇಹದ ಭಾಗಗಳನ್ನೇ ನಾಯಿಗಳಿಗೆ ಆಹಾರವಾಗಿ ನೀಡುತ್ತಿದ್ದ ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಇನ್ನು ದೇಹದ ಭಾಗಗಳನ್ನು ಚರಂಡಿಗೆ ಎಸೆದಿದ್ದಾನೆಯೇ ಎನ್ನುವುದನ್ನು ಕೂಡಾ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. 

ಇದನ್ನೂ ಓದಿ Balasore Train Accident: 40 ಜನರ ಶರೀರದ ಮೇಲೆ ಒಂದೂ ಗಾಯದ ಗುರುತಿಲ್ಲ... ಆದರೂ ಅವರು ಮೃತಪಟ್ಟಿದ್ದಾರೆ... ಅದ್ಹೇಗೆ ಸಾಧ್ಯ?

ಆರೋಪಿ ಮತ್ತು ಆತನ ಪ್ರೇಯಸಿ ತಮ್ಮೊಂದಿಗೆ ಬೆರೆಯುತ್ತಿರಲಿಲ್ಲ ಎಂದು ಕಟ್ಟಡದ ನಿವಾಸಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಅವರ ಫ್ಲಾಟ್‌ ಸೋನಮ್ ಬಿಲ್ಡರ್‌ಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ. 

ನವೆಂಬರ್ 2022 ರಲ್ಲಿ ದೆಹಲಿಯಲ್ಲಿ ನೆರೆಯ ಪಾಲ್ಘರ್ ಜಿಲ್ಲೆಯವರಾದ ಶ್ರದ್ಧಾ ವಾಕರ್ ಅವರ ಹತ್ಯೆಯಾದ ನಂತರ ಬೆಳಕಿಗೆ ಬಂದ ಭೀಕರ ಕೊಲೆ ಪ್ರಕರಣ ಇದಾಗಿದೆ. 

ಇದನ್ನೂ ಓದಿ Balasore Train Mishap: ಓಡಿಷಾ ರೈಲು ದುರಂತ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ ಸಿಬಿಐ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News