ಎಟಿಎಂ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ, 6 ಗಂಟೆಗಳ ನಂತರವಷ್ಟೇ ಹಣ ಹಿಂಪಡೆಯಲು ಸಾಧ್ಯ!

ಲಕ್ಷಾಂತರ ಗ್ರಾಹಕರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದರೂ, ಬ್ಯಾಂಕುಗಳಿಂದ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಎಟಿಎಂಗಳಿಂದ ವಂಚನೆ ಪ್ರಕರಣದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇತ್ತೀಚೆಗೆ, ಎಟಿಎಂ ವಂಚನೆ ಹೆಚ್ಚಾಗಿರುವುದಕ್ಕೆ ನ್ಯಾಯಾಲಯವು ಬ್ಯಾಂಕುಗಳನ್ನು ಖಂಡಿಸಿದೆ.

Last Updated : Aug 28, 2019, 01:25 PM IST
ಎಟಿಎಂ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ,  6 ಗಂಟೆಗಳ ನಂತರವಷ್ಟೇ ಹಣ ಹಿಂಪಡೆಯಲು ಸಾಧ್ಯ! title=

ನವದೆಹಲಿ: ಲಕ್ಷಾಂತರ ಗ್ರಾಹಕರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದರೂ, ಬ್ಯಾಂಕುಗಳಿಂದ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಎಟಿಎಂಗಳಿಂದ ವಂಚನೆ ಪ್ರಕರಣದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇತ್ತೀಚೆಗೆ, ಎಟಿಎಂ ವಂಚನೆ ಹೆಚ್ಚಾಗಿರುವುದಕ್ಕೆ ನ್ಯಾಯಾಲಯವು ಬ್ಯಾಂಕುಗಳನ್ನು ಖಂಡಿಸಿತು. ಎಟಿಎಂ ವಂಚನೆಯನ್ನು ತಡೆಯಲು ದೆಹಲಿ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಕೆಲವು ಕ್ರಮಗಳನ್ನು ಸೂಚಿಸಿದೆ. ಎಸ್‌ಎಸ್‌ಬಿಸಿ ನೀಡಿದ ಸಲಹೆಗಳನ್ನು ಅಂಗೀಕರಿಸಿದರೆ, ಎಟಿಎಂ ವಂಚನೆ ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತದೆ ಎಂದು ಸಮಿತಿ ಆಶಿಸಿದೆ. ಎರಡು ಎಟಿಎಂ ವಹಿವಾಟುಗಳ ನಡುವೆ 6 ರಿಂದ 12 ಗಂಟೆಗಳ ಕಾಲ ಅಂತರ ಇಡಬೇಕು ಎಂದು ಸಮಿತಿ ಸೂಚಿಸಿತು.

ರಾತ್ರಿಯಲ್ಲಿ ವಂಚನೆ ಪ್ರಕರಣಗಳು ಹೆಚ್ಚು:
ಈ ಸಲಹೆಯನ್ನು ಅಂಗೀಕರಿಸಿದರೆ, ಬೆಳಿಗ್ಗೆ 10 ಗಂಟೆಗೆ ನಿಮ್ಮ ಖಾತೆಯಿಂದ 20 ಸಾವಿರ ರೂಪಾಯಿಗಳನ್ನು ವಿತ್ ಡ್ರಾ ಮಾಡಿದರೆ, ನಂತರ ಕನಿಷ್ಠ 6 ಗಂಟೆಗಳ ನಂತರ, ಅಂದರೆ ಮಧ್ಯಾಹ್ನ ಎರಡು ಗಂಟೆಗೆ ಮುಂದಿನ ವಿತ್ ಡ್ರಾ  ಮಾಡಲು ನಿಮಗೆ ಸಾಧ್ಯವಾಗುತ್ತದೆ. ಎಟಿಎಂಗಳಲ್ಲಿ ಹೆಚ್ಚಿನ ವಂಚನೆಗಳು ರಾತ್ರಿಯಲ್ಲಿ ನಡೆಯುತ್ತವೆ ಎಂದು ಸಮಿತಿ ಒಪ್ಪಿಕೊಂಡಿತು. ಈ ಪ್ರಕರಣಗಳಲ್ಲಿ ಹೆಚ್ಚಿನವು ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ ನಡೆದಿರುವ ಬಗ್ಗೆ ವರದಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ವಂಚನೆಯನ್ನು ತಡೆಗಟ್ಟಲು, ಕಳೆದ ವಾರ 18 ಬ್ಯಾಂಕುಗಳ ಪ್ರತಿನಿಧಿಗಳ ಸಭೆಯಲ್ಲಿ ಚರ್ಚೆ ನಡೆದಿದೆ.

ದೇಶದಲ್ಲಿ ಒಟ್ಟು 980 ಎಟಿಎಂ ವಂಚನೆ ಪ್ರಕರಣಗಳು ದಾಖಲು:
ಸಭೆಯಲ್ಲಿ ಪ್ರಸ್ತುತಪಡಿಸಿದ ದತ್ತಾಂಶದಿಂದ, ಎಟಿಎಂ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. 2018-19ನೇ ಸಾಲಿನಲ್ಲಿ ದೆಹಲಿಯಲ್ಲಿ 179 ಎಟಿಎಂ ವಂಚನೆ ಪ್ರಕರಣಗಳು ನಡೆದಿವೆ. ದೇಶಾದ್ಯಂತ ಒಟ್ಟು 980 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ಎಟಿಎಂ ವಂಚನೆ ಮತ್ತು ಎಟಿಎಂ ಕಾರ್ಡ್‌ಗಳ ಕ್ಲೋನಿಂಗ್ ಗೆ ಸಂಬಂಧಿಸಿವೆ. ಇದಕ್ಕೂ ಮೊದಲು 2017-18ನೇ ಸಾಲಿನಲ್ಲಿ ಒಟ್ಟು 911 ಎಟಿಎಂ ವಂಚನೆ ಪ್ರಕರಣಗಳು ವರದಿಯಾಗಿವೆ.

ಒಟಿಪಿಯನ್ನು ಕಡ್ಡಾಯಗೊಳಿಸಿದ ಕೆನರಾ ಬ್ಯಾಂಕ್:
ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು, ಕೆನರಾ ಬ್ಯಾಂಕ್ ಎಟಿಎಂನಿಂದ 10 ಸಾವಿರ ಅಥವಾ ಹೆಚ್ಚಿನ ಮೊತ್ತವನ್ನು ಹಿಂಪಡೆಯಲು ಒಟಿಪಿಯನ್ನು ಕಡ್ಡಾಯಗೊಳಿಸಿದೆ.

Trending News