21 ದಿನಗಳ ನಂತರವೂ ಮುಂದುವರಿಯುವುದೇ Lockdown? ಸರ್ಕಾರದ ಪ್ರತಿಕ್ರಿಯೆ ಇದು

ದೇಶಾದ್ಯಂತ 21 ದಿನಗಳವರೆಗೆ ಲಾಕ್‌ಡೌನ್ ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24 ರಂದು ರಾತ್ರಿ 8 ಗಂಟೆಗೆ ಘೋಷಿಸಿದ್ದರು.

Last Updated : Mar 30, 2020, 11:15 AM IST
21 ದಿನಗಳ ನಂತರವೂ ಮುಂದುವರಿಯುವುದೇ Lockdown? ಸರ್ಕಾರದ ಪ್ರತಿಕ್ರಿಯೆ ಇದು title=

ನವದೆಹಲಿ: ಕರೋನವೈರಸ್ ನಿಯಂತ್ರಿಸಲು ಜಾರಿಗೆ ತಂದ 21 ದಿನಗಳ ಲಾಕ್ಡೌನ್ (Lockdown)  ಅನ್ನು ಮುಂದುವರೆಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೋಬಾ ಮಾತನಾಡಿ, ಲಾಕ್ ಡೌನ್ ಅನ್ನು 21 ದಿನಗಳ ನಂತರ ವಿಸ್ತರಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿ ( Narendra Modi) ಅವರು ಮಾರ್ಚ್ 24 ರಂದು (ಮಂಗಳವಾರ), ಇಂದು ರಾತ್ರಿ  12 ಗಂಟೆಯಿಂದ 21 ದಿನಗಳವರೆಗೆ ಇಡೀ ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗಲಿದೆ ಎಂದು ಘೋಷಿಸಿದರು. ಕರೋನಾ ವೈರಸ್ Covid-19 ಸೋಂಕನ್ನು ನಿಯಂತ್ರಿಸಲು ಈ 21 ದಿನಗಳು ಅಗತ್ಯ ಎಂದು ಪ್ರಧಾನಿ ಹೇಳಿದ್ದಾರೆ. ಈ 21 ದಿನಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಇದು ಇಡೀ ದೇಶಕ್ಕೆ ಕಂಟಕವಾಗಲಿದೆ ಎಂಬ ಸಂದೇಶವನ್ನು ಪ್ರಧಾನಿ ದೇಶವಾಸಿಗಳಿಗೆ ರವಾನಿಸಿದರು.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಲಾಕ್‌ಡೌನ್ (Lockdown) ಅನ್ನು ಒಂದರ್ಥದಲ್ಲಿ ಕರ್ಫ್ಯೂ ಎಂದು ಪರಿಗಣಿಸಬೇಕು. ಭಾರತವನ್ನು ಉಳಿಸಲು, ಪ್ರತಿಯೊಬ್ಬ ನಾಗರಿಕನನ್ನು ಉಳಿಸಲು, ನಿಮ್ಮ ಕುಟುಂಬವನ್ನು ಉಳಿಸಲು, ಮನೆಗಳಿಂದ ಹೊರಹೋಗುವುದನ್ನು ಸಂಪೂರ್ಣ ನಿಷೇಧಿಸಿ. ಪ್ರತಿ ಕೇಂದ್ರಾಡಳಿತ ಪ್ರದೇಶ, ರಸ್ತೆ ಮತ್ತು ನೆರೆಹೊರೆಯಲ್ಲಿ ದೇಶದ ಪ್ರತಿಯೊಂದು ರಾಜ್ಯದಲ್ಲೂ ಈ ಲಾಕ್‌ಡೌನ್ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದರು.

ಕರೋನಾ ರೋಗಿಗಳ ಸಂಖ್ಯೆ 1024
ಯಶಸ್ವಿಯಾಗಿ ಲಾಕ್‌ಡೌನ್ ಜಾರಿಗೊಳಿಸಿರುವುದರ ಹೊರತಾಗಿಯೂ ದೇಶದಲ್ಲಿ ಕೊರೊನಾವೈರಸ್ (Coronavirus)  ರೋಗಿಗಳ ಸಂಖ್ಯೆ 1024 ಕ್ಕೆ ಏರಿದೆ. ಈ ಪೈಕಿ 901 ಜನರು ಇನ್ನೂ ಕರೋನಾ ವೈರಸ್‌ಗೆ ತುತ್ತಾಗಿದ್ದಾರೆ. ಈ ಕಾಯಿಲೆಯಿಂದ ಈವರೆಗೆ 27 ಜನರು ಪ್ರಾಣ ಕಳೆದುಕೊಂಡಿದ್ದಾರೆ. 95 ಜನರು ಗುಣಮುಖರಾಗಿದ್ದಾರೆ, ಅಥವಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ದೇಶದಲ್ಲಿ ಕರೋನಾ ರೋಗಿಗಳ ಸಂಖ್ಯೆ ಶನಿವಾರ 900 ದಾಟಿದೆ. ಕರೋನಾ ರೋಗಿಗಳು ಹೆಚ್ಚು ಇರುವ ಎರಡು ರಾಜ್ಯಗಳು ಕೇರಳ ಮತ್ತು ಮಹಾರಾಷ್ಟ್ರ. ಈ ಸಮಯದಲ್ಲಿ ದೇಶದ 27 ರಾಜ್ಯಗಳು ಕರೋನಾದ ಹಿಡಿತದಲ್ಲಿವೆ. ದೇಶದಲ್ಲಿ ಸಾವಿನ ಸಂಖ್ಯೆ 27 ಕ್ಕೆ ತಲುಪಿದೆ.

Trending News