ಭಾರತದ ಆಕಳ ಹಾಲು ಹಳದಿಯಾಗಿರುವುದೇಕೆ? ; ಪ.ಬಂಗಾಳ ಬಿಜೆಪಿ ಮುಖ್ಯಸ್ಥರ ಬಳಿ ಇದೆ ಉತ್ತರ

ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಸೋಮವಾರ 'ಗೋಮಾಂಸ ತಿನ್ನುವ ಬುದ್ಧಿಜೀವಿಗಳು ನಾಯಿ ಮಾಂಸವನ್ನೂ ತಿನ್ನಬೇಕು' ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.

Last Updated : Nov 5, 2019, 04:04 PM IST
ಭಾರತದ ಆಕಳ ಹಾಲು ಹಳದಿಯಾಗಿರುವುದೇಕೆ? ; ಪ.ಬಂಗಾಳ ಬಿಜೆಪಿ ಮುಖ್ಯಸ್ಥರ ಬಳಿ ಇದೆ ಉತ್ತರ  title=
Photo courtesy: ANI

ನವದೆಹಲಿ: ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಸೋಮವಾರ 'ಗೋಮಾಂಸ ತಿನ್ನುವ ಬುದ್ಧಿಜೀವಿಗಳು ನಾಯಿ ಮಾಂಸವನ್ನೂ ತಿನ್ನಬೇಕು' ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.

“ಕೆಲವೇ ಬುದ್ಧಿಜೀವಿಗಳು ರಸ್ತೆಗಳಲ್ಲಿ ಗೋಮಾಂಸ ತಿನ್ನುತ್ತಾರೆ. ನಾಯಿ ಮಾಂಸವನ್ನೂ ತಿನ್ನಲು ಹೇಳುತ್ತೇನೆ. ಅವರು ಯಾವ ಪ್ರಾಣಿಯನ್ನು ತಿನ್ನುತ್ತಾರೋ ಅವರ ಆರೋಗ್ಯವು ಉತ್ತಮವಾಗಿರುತ್ತದೆ, ಆದರೆ ರಸ್ತೆಗಳಲ್ಲಿ ಏಕೆ? ನಿಮ್ಮ ಮನೆಯಲ್ಲಿ ತಿನ್ನಿರಿ, 'ಎಂದು ಘೋಷ್ ಹೇಳಿದ್ದಾರೆ.

'ಹಸು ನಮ್ಮ ತಾಯಿ ಮತ್ತು ಗೋಮಾಂಸ ತಿನ್ನುವುದು ಭಾರತದಲ್ಲಿ ಅಪರಾಧವಾಗಿದೆ. 'ನಾವು ಹಸುವಿನ ಹಾಲನ್ನು ಸೇವಿಸುವ ಮೂಲಕ ಜೀವಂತವಾಗಿರುತ್ತೇವೆ. ಆದ್ದರಿಂದ, ಯಾರಾದರೂ ನನ್ನ ತಾಯಿಯೊಂದಿಗೆ ಕೆಟ್ಟದಾಗಿ ವರ್ತಿಸಿದರೆ, ಗೋವನ್ನು ಕಾಣುವವರನ್ನು ಅದೇ ರೀತಿಯಾಗಿ ಕಾಣುತ್ತೇನೆ ಎಂದರು.

ಇನ್ನು ಮುಂದುವರೆದು 'ಭಾರತೀಯ ಹಸುವಿನ ಹಾಲಿನಲ್ಲಿ ಚಿನ್ನವನ್ನು ಬೆರೆಸಿದ್ದರಿಂದಾಗಿ ಅದರ ಬಣ್ಣವು ಹಳದಿಯಾಗಿದೆ ಎಂದು ಹೇಳಿದರು. 

Trending News