ದಯವಿಟ್ಟು ಓದಿ.! ಯಾವ ಮಾಸ್ಕ್ ಬಳಸಬೇಕು.? ಡಬ್ಬಲ್ ಮಾಸ್ಕ್ ಎಷ್ಟು ಸೇಫ್.?

ವಿಶ್ವ ಆರೋಗ್ಯ ಸಂಸ್ಥೆ  ಮಾಸ್ಕ್ ಬಳಕೆ ಬಗ್ಗೆ ಒಂದಷ್ಟು ಗೈಡ್ ಲೈನ್ಸ್ ಜಾರಿ ಮಾಡಿದೆ. ಇದು ಅತ್ಯಂತ ಪ್ರಮುಖ ಗೈಡ್ ಲೈನ್ ಆಗಿದೆ. ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಅಗತ್ಯವಿದೆ. 

Written by - Ranjitha R K | Last Updated : Apr 21, 2021, 11:44 AM IST
  • ಮಾಸ್ಕ್ ಇದೀಗ ನಮ್ಮಅನಿವಾರ್ಯತೆಗಳಲ್ಲಿ ಒಂದಾಗಿದೆ.
  • ಮಾಸ್ಕ್ ಬಳಕೆ ಬಗ್ಗೆ WHO ಒಂದಷ್ಟು ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ
  • ಯಾವ ಮಾಸ್ಕ್ ಯಾರು ಬಳಸಬೇಕು.? ಡಬ್ಬಲ್ ಮಾಸ್ಕ್ ಎಷ್ಟು ಸೇಫ್ ಎಂಬ ಮಾಹಿತಿ ಇಲ್ಲಿದೆ
ದಯವಿಟ್ಟು ಓದಿ.! ಯಾವ ಮಾಸ್ಕ್ ಬಳಸಬೇಕು.? ಡಬ್ಬಲ್ ಮಾಸ್ಕ್ ಎಷ್ಟು ಸೇಫ್.?  title=
ಮಾಸ್ಕ್ ಬಳಕೆ ಬಗ್ಗೆ WHO ಒಂದಷ್ಟು ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ (file photo)

ನವದೆಹಲಿ: ಕರೋನಾ (Coronavirus) ಆರ್ಭಟದ ನಡುವೆ ಮಾಸ್ಕ್ ಬಳಕೆ ಕೂಡಾ ಅತ್ಯಂತ ಮಹತ್ವ ಪಡೆದುಕೊಂಡಿದೆ.  ಎಲ್ಲಾ ಸರ್ಕಾರಗಳು ಮಾಸ್ಕ್ (Mask) ಧರಿಸುವಂತೆ ಕಟ್ಟಪ್ಪಣೆ ಮಾಡಿವೆ. ಮಾಸ್ಕ್ ಧರಿಸದೇ ಹೋದರೆ ದಂಡ ಭರಿಸಬೇಕಾಗುತ್ತದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ (WHO) ಮಾಸ್ಕ್ ಬಳಕೆ ಬಗ್ಗೆ ಒಂದಷ್ಟು ಗೈಡ್ ಲೈನ್ಸ್ ಜಾರಿ ಮಾಡಿದೆ. ಇದು ಅತ್ಯಂತ ಪ್ರಮುಖ ಗೈಡ್ ಲೈನ್ (guidelines) ಆಗಿದೆ. ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಅಗತ್ಯವಿದೆ.  ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು.? ನೋಡೋಣ.

ಇವರು ಸರ್ಜಿಕಲ್ ಅಥವಾ ಮೆಡಿಕಲ್ ಮಾಸ್ಕ್ ಬಳಸಬೇಕು:
1.ಹೆಲ್ತ್ ವರ್ಕರ್ಸ್ ಮೆಡಿಕಲ್ ಅಥವಾ ಸರ್ಜಿಕಲ್ ಮಾಸ್ಕ್ (Surgical mask) ಧರಿಸಬೇಕು
2.ಕೊವಿಡ್ (COVID-19) ಲಕ್ಷಣ ಇರುವವರು ಮೆಡಿಕಲ್ ಅಥವಾ ಸರ್ಜಿಕಲ್ ಮಾಸ್ಕ್ ಧರಿಸಬೇಕು
3.ಕೊವಿಡ್ ರೋಗಿಯನ್ನು ನೋಡಿಕೊಳ್ಳುವವರು ಸರ್ಜಿಕಲ್ ಮಾಸ್ಕ್ ಧರಿಸಬಹುದು
4.ಕಂಟೈನ್ ಮೆಂಟ್ (Containment Zone) ವಲಯದಲ್ಲಿರುವವರು ಸರ್ಜಿಕಲ್ ಮಾಸ್ಕ್ ಧರಿಸಬೇಕು
5.ಹಿರಿಯ ನಾಗರಿಕರು, ಮತ್ತು ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರು ಸರ್ಜಿಕಲ್ ಮಾಸ್ಕ್ ಬಳಸಬೇಕು

ಇದನ್ನೂ ಓದಿ : Coronavirus : ದೆಹಲಿ ಬಳಿಕ ಸಂಪೂರ್ಣ ಲಾಕ್ ಡೌನ್ ನತ್ತ ಮಹಾರಾಷ್ಟ್ರ.!

ಫ್ಯಾಬ್ರಿಕ್ ಮಾಸ್ಕ್ ಯಾರು ಧರಿಸಬೇಕು..?
ಫ್ಯಾಬ್ರಿಕ್ ಮಾಸ್ಕ್ (Fabric mask) ಅಂದರೆ ಬಟ್ಟೆ ಅಥವಾ ಇನ್ನಿತರ ವಸ್ತು ಬಳಸಿ ಮಾಡಿರುವಂತಹ ಮಾಸ್ಕ್. ಇದನ್ನು ಯಾರು ಬಳಸಬೇಕು ಅನ್ನುವುದರ ಬಗ್ಗೆ WHO ಮಾಹಿತಿ ನೀಡಿದೆ. 
1.ಸೊಂಕು ಕಡಿಮೆ ಇರುವ ಕಡೆ ಫ್ಯಾಬ್ರಿಕ್ ಮಾಸ್ಕ್ ಬಳಸಬಹುದು
2.ಕೊವಿಡ್ ಲಕ್ಷಣ ಇಲ್ಲದವರು ಫ್ಯಾಬ್ರಿಕ್ ಮಾಸ್ಕ್ ಬಳಸಬಹುದು
3.ಸಾರ್ವಜನಿಕ ಸಾರಿಗೆ ಬಳಸುವವರು ಫ್ಯಾಬ್ರಿಕ್ ಮಾಸ್ಕ್ ಬಳಸಬಹುದು
4.ಕಚೇರಿಗಳಲ್ಲಿ ಕೆಲಸ ಮಾಡುವವರು
5.ಅಂಗಡಿ, ತರಕಾರಿ (Vegetable) ಮಳಿಗೆ ಇತ್ಯಾದಿ ಸ್ಥಳಗಲ್ಲಿ ಕೆಲಸ ಮಾಡುವವರು
6.ಸಂತೆ ಮಾರುಕಟ್ಟೆಗಳಿಗೆ ಹೋಗುವಾಗ ಫ್ಯಾಬ್ರಿಕ್ ಮಾಸ್ಕ್ ಬಳಸಿ

ಇದನ್ನೂ ಓದಿ : Lockdown: ಕಾರ್ಮಿಕರಿಗೆ 5 ಸಾವಿರ ಆರ್ಥಿಕ ನೆರವು ನೀಡಲಿದೆ ಈ ಸರ್ಕಾರ

ಡಬ್ಬಲ್ ಮಾಸ್ಕ್ ಸೇಫಾ..?
ಇದೀಗ ಡಬ್ಬಲ್ ಮಾಸ್ಕ್ (Double mask) ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಡಬ್ಬಲ್ ಮಾಸ್ಕ್ ಪರಿಣಾಮಕಾರಿಯಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅಮೆರಿಕದ ಸಂಶೋಧನೆ ಕೂಡಾ ಈ ವಿಚಾರವನ್ನು ಪುಷ್ಟೀಕರಿಸಿದೆ. ಡಬ್ಬಲ್ ಮಾಸ್ಕ್ ಕೊವಿಡ್ ಸೋಂಕನ್ನು (Coronavirus) ಶೇ.96.4 ರಷ್ಟು ಕಡಿಮೆ ಮಾಡುತ್ತದೆಯೆಂದು ಈ ಸಂಸ್ಥೆಯ ವರದಿ ಹೇಳಿದೆ. ಹೀಗಿರುವಾಗ ಡಬ್ಬಲ್ ಮಾಸ್ಕ್ ಬಳಕೆ ಬಗ್ಗೆಯೂ WHO ಸಲಹೆ ನೀಡಿದೆ.
1.ಜನಜಂಗುಳಿ ಪ್ರದೇಶಗಳಲ್ಲಿ ಇರುವಾಗ ಡಬ್ಬಲ್ ಮಾಸ್ಕ್ ಬಳಸಿ
2.ಜನ ನಿಬಿಡ ಸಾರಿಗೆಗಳಲ್ಲಿ ಸವಾರಿ ಮಾಡುವಾಗ ಡಬ್ಬಲ್ ಮಾಸ್ಕ್ ಇರಲಿ
3.ಡಬ್ಬಲ್ ಮಾಸ್ಕ್ ಅಂದರೆ ಸರ್ಜಿಕಲ್ ಮಾಸ್ಕ್ ಮೇಲೆ ಒಂದು ಫ್ಯಾಬ್ರಿಕ್ ಮಾಸ್ಕ್ ಬಳಸಿ
4.ಎರಡು ಫ್ಯಾಬ್ರಿಕ್ ಮಾಸ್ಕ್ ಗಳನ್ನು ಒಟ್ಟೊಟ್ಟಿಗೆ ಧರಿಸಬಹುದು. 
5.N-95 ಮಾಸ್ಕ್ (Mask) ಧರಿಸುವವರು ಡಬ್ಬಲ್ ಮಾಸ್ಕ್ ಧರಿಸುವ ಅಗತ್ಯವಿಲ್ಲ

ಇದನ್ನೂ ಓದಿ : Coronavirus: ಈವರೆಗಿನ ಎಲ್ಲಾ ದಾಖಲೆ ಮುರಿದ ಕರೋನಾ ಸುನಾಮಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News