ನಿರ್ಭಯಾ ಪ್ರಕರಣ: ಆರೋಪಿಗಳಿಗೆ ಶಿಕ್ಷೆ ಯಾವಾಗ? ನಿರ್ಭಯಾ ತಾಯಿಯ ಪ್ರಶ್ನೆ.

    

Last Updated : Dec 16, 2017, 08:08 PM IST
ನಿರ್ಭಯಾ ಪ್ರಕರಣ: ಆರೋಪಿಗಳಿಗೆ ಶಿಕ್ಷೆ ಯಾವಾಗ? ನಿರ್ಭಯಾ ತಾಯಿಯ ಪ್ರಶ್ನೆ. title=

ನವದೆಹಲಿ:  ಇಂದಿಗೆ ನಿರ್ಭಯಾ ಸಾಮೂಹಿಕ ಅತ್ಯಾಚಾರಕ್ಕೆ 5 ವರ್ಷ ತುಂಬಿದರೂ ಆದರೆ ಆರೋಪಿಗಳಿಗೆ ವಿಧಿಸಿರುವ ಗಲ್ಲುಶಿಕ್ಷೆ ಇನ್ನು ಕಾರ್ಯಗತವಾಗಿಲ್ಲ ಎಂದು ನಿರ್ಭಯಾ ತಾಯಿ ಆಕ್ರೋಶವ್ಯಕ್ತಪಡಿಸಿದರು. 

ಐದು ವರ್ಷ ಕಳೆದರು ಆರೋಪಿಗಳು ಇನ್ನು ಜೀವಂತವಾಗಿದ್ದಾರೆ. ನ್ಯಾಯ ಎನ್ನುವುದು ಸರಿಯಾದ ವೇಳೆಗೆ ತನ್ನ ಕರ್ತವ್ಯವನ್ನು ಪೂರೈಸಬೇಕು ಇಲ್ಲದೆ ಹೋದರೆ ಜನರು ಅದರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದರು.

ಇನ್ನು ಮುಂದುವರೆದು ಇಂತಹ ಘಟನೆಗಳು ಜರುಗದಂತೆ ಮತ್ತು ಪ್ರತಿಯೊಬ್ಬರ ಮನಸ್ಥಿತಿಯನ್ನು ಬದಲಿಸುವಂತೆ  ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕು ಅದು ಸಾಮಾನ್ಯ ಮನುಷ್ಯರಿಗೂ ಮತ್ತು ರಾಜಕಾರಣಿಗಳಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕು ಎಂದು ಈ ಸಂಧರ್ಭದಲ್ಲಿ ಸಲಹೆ ನೀಡಿದರು.

ಅಲ್ಲದೆ ತಮ್ಮ ಮಗಳು ಜ್ಯೋತಿಕಾ ಸಿಂಗ್  ಸಾಮೂಹಿಕ ಅತ್ಯಾಚಾರದಲ್ಲಿ ಮೃತಪಟ್ಟು ಇಂದಿಗೆ ಐದು ವರ್ಷಗಳು ತುಂಬಿವೆ ಆದರೆ ಆರೋಪಿಗಳಿಗೆ ನೀಡಿರುವ ಗಲ್ಲುಶಿಕ್ಷೆ ಕಾರ್ಯರೂಪಕ್ಕೆ ಬಂದಿಲ್ಲ,ಯಾವಾಗ ಆರೋಪಿಗಳಿಗೆ ಶಿಕ್ಷೆಯನ್ನು ನೀಡುತ್ತಿರಿ? ಎಂದು ಮಾಧ್ಯಮಗಳ ಮುಂದೆ ನ್ಯಾಯಾಂಗದ ಮೇಲೆ ತಮ್ಮ ಆಕ್ರೋಶವನ್ನು ತೋಡಿಕೊಂಡರು.  

Trending News