Covid-19 ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು? ಕೇವಲ 6 ನಿಮಿಷಗಳಲ್ಲಿ ಈ ರೀತಿ ಪತ್ತೆ ಹಚ್ಚಿ

ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕಿನ ಮಧ್ಯೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿದೆ. ಆದರೆ ಕೋವಿಡ್ -19 ದೃಢಪಟ್ಟ ಬಳಿಕ ರೋಗಿಯು ಯಾವಾಗ ಆಸ್ಪತ್ರೆಗೆ ಬರುತ್ತಾರೆ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Apr 22, 2021, 12:07 PM IST
  • ಕರೋನಾದಿಂದ ದೇಶದ ಪರಿಸ್ಥಿತಿ ಗಂಭೀರವಾಗುತ್ತಿದೆ
  • 24 ಗಂಟೆಗಳಲ್ಲಿ 3 ಲಕ್ಷ 14 ಸಾವಿರ 835 ಹೊಸ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ
  • ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 2104 ಜನರು ಸಾವನ್ನಪ್ಪಿದ್ದಾರೆ
Covid-19 ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು? ಕೇವಲ 6 ನಿಮಿಷಗಳಲ್ಲಿ ಈ ರೀತಿ ಪತ್ತೆ ಹಚ್ಚಿ title=
Corona Patient

ನವದೆಹಲಿ: ಭಾರತದಲ್ಲಿ ಕೊರೊನಾವೈರಸ್‌ ಅಟ್ಟಹಾಸ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಗಂಭೀರವಾಗುತ್ತಿದೆ. ಪ್ರತಿ ದಿನ ದಾಖಲೆಯ ಮಟ್ಟದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿದೆ. ಆದರೆ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕರೋನಾ ಪಾಸಿಟಿವ್ ಬಂದ ಬಳಿಕವೂ ಸೋಂಕಿತರು ಗಾಬರಿಯಾಗುವ ಅಗತ್ಯವಿಲ್ಲ. ಜೊತೆಗೆ ರೋಗಿಯ ಸ್ಥಿತಿಯು ಸ್ಥಿರವಾಗಿದ್ದರೆ ಅವರು ಆಸ್ಪತ್ರೆಗೆ ಸೇರಿಸದಂತೆ ವೈದ್ಯರು ಶಿಫಾರಸು ಮಾಡುತ್ತಿದ್ದಾರೆ. ಏಕೆಂದರೆ ಹೆಚ್ಚಿನ ಜನರು ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ.

ಕರೋನಾ ಸೋಂಕಿತ ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು?
ಏತನ್ಮಧ್ಯೆ, ಕೇಂದ್ರ ಸರ್ಕಾರ  (Government of India) ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಟಾಟಾ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎಸ್.ಪ್ರಮೇಶ್ ಅವರ ಸಲಹೆಗಳ ಆಧಾರದ ಮೇಲೆ ಕೆಲವು ಸಲಹೆಗಳನ್ನು ನೀಡಲಾಗಿದೆ. ವೀಡಿಯೊದಲ್ಲಿ ಉತ್ತಮ ಪೌಷ್ಠಿಕಾಂಶದ ಜೊತೆಗೆ, ದ್ರವಗಳನ್ನು ತೆಗೆದುಕೊಳ್ಳುವುದು, ಯೋಗ ಪ್ರಾಣಾಯಾಮ ಮಾಡುವ ಮೂಲಕ ಕೋವಿಡ್-ಪಾಸಿಟಿವ್ (Covid Positive) ರೋಗಿಗಳು ಜ್ವರ ಮತ್ತು ಆಮ್ಲಜನಕದ ಮಟ್ಟವನ್ನು ಟ್ರ್ಯಾಕ್ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ - Oral Symptoms of Covid: ನಿಮ್ಮ ಬಾಯಿಯಲ್ಲಿ ಕಾಣುವ ಈ ಲಕ್ಷಣ ಕೋವಿಡ್ -19 ಸಂಕೇತವಾಗಿರಬಹುದು, ತಕ್ಷಣವೇ ಟೆಸ್ಟ್ ಮಾಡಿ!

ದೇಹದಲ್ಲಿ ಆಮ್ಲಜನಕದ ಮಟ್ಟ ಹೇಗಿರಬೇಕು?
ನಿಮ್ಮ ದೇಹದಲ್ಲಿನ ಆಮ್ಲಜನಕದ ಮಟ್ಟವು 94 ಕ್ಕಿಂತ ಹೆಚ್ಚಿದ್ದರೆ, ನಿಮ್ಮನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ ಎಂದು ವೀಡಿಯೊ ಸಂದೇಶದಲ್ಲಿ ತಿಳಿಸಲಾಗಿದೆ. ಇದಲ್ಲದೆ, ಆಮ್ಲಜನಕದ ಮಟ್ಟವನ್ನು ನಿಖರವಾಗಿ ಪರೀಕ್ಷಿಸಲು ಕೊರೊನಾವೈರಸ್ (Coronavirus) ರೋಗಿಯು ತನ್ನ ಕೋಣೆಯಲ್ಲಿ ಆರು ನಿಮಿಷಗಳ ಕಾಲ ನಡೆಯಬೇಕು. ನಂತರ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸಲು ಸೂಚಿಸಲಾಗಿದೆ. ಆರು ನಿಮಿಷಗಳ ಕಾಲ ವಾಕ್ ಮಾಡಿದ ನಂತರ ರೋಗಿಯ ಹಿಂದಿನ ಆಮ್ಲಜನಕದ ಮಟ್ಟವು 4 ಪ್ರತಿಶತ ಅಥವಾ ಹೆಚ್ಚಿನ ಏರಿಳಿತವಾಗಿದ್ದರೆ, ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗುತ್ತದೆ.

ಇದನ್ನೂ ಓದಿ - Coronavirus: ಮನೆಯಲ್ಲಿ ಯಾರಿಗಾದರೂ ಕರೋನಾ ಸೋಂಕು ತಗುಲಿದೆಯೇ? ಭಯಬಿಡಿ ಈ ರೀತಿ ನಿಗಾವಹಿಸಿ

ಕರೋನಾ ರೋಗಿಯು ಯಾವ ಔಷಧಿಗಳನ್ನು ತೆಗೆದುಕೊಳ್ಳಬೇಕು?
ರೋಗಿಯ ಆಮ್ಲಜನಕದ ಮಟ್ಟವು ಉತ್ತಮವಾಗಿದ್ದರೆ ಮತ್ತು ಜ್ವರವನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆಯಿಲ್ಲದಿದ್ದರೆ, ಅಂತಹ ರೋಗಿಯು ಕೇವಲ ಪ್ಯಾರೆಸಿಟಮಾಲ್ ತೆಗೆದುಕೊಂಡು ಬೇಗ ಚೇತರಿಸಿಕೊಳ್ಳಬಹುದು ಎಂದು ವೀಡಿಯೊದಲ್ಲಿ ತಿಳಿಸಲಾಗಿದೆ. ಇದಲ್ಲದೆ, ಅಂತಹ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

24 ಗಂಟೆಗಳಲ್ಲಿ ದೇಶಾದ್ಯಂತ ಸುಮಾರು 3.15 ಹೊಸ ಪ್ರಕರಣಗಳು ಮತ್ತು 2102 ಸಾವು:
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3 ಲಕ್ಷ 14 ಸಾವಿರ 835 ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದರೆ, ಈ ಅವಧಿಯಲ್ಲಿ 2104 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ, ಭಾರತದಲ್ಲಿ ಒಟ್ಟು ಕರೋನಾ ಸೋಂಕಿನ ಸಂಖ್ಯೆ 1 ಕೋಟಿ 59 ಲಕ್ಷ 30 ಸಾವಿರ 965 ಕ್ಕೆ ಏರಿದ್ದರೆ, 1 ಲಕ್ಷ 84 ಸಾವಿರ 657 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೋವಿಡ್ -19 ರ ಸಕ್ರಿಯ ರೋಗಿಗಳ ಸಂಖ್ಯೆಯೂ 22 ಲಕ್ಷ 91 ಸಾವಿರ 428 ಕ್ಕೆ ಏರಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News