ನವದೆಹಲಿ: ವಿಶಾಖಪಟ್ಟಣಂನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ದಿನದಂದು ಸಂಘಟಕರು ಪಿಟಿ ಉಷಾ ಅವರನ್ನು ಟೆನಿಸ್ ತಾರೆ ಸಾನಿಯಾ ಮಿರ್ಜಾ ಎಂದು ತಪ್ಪಾಗಿ ಭಾವಿಸಿದ್ದಾರೆ. ಈಗ ಮಾಜಿ ಅಥ್ಲೀಟ್ ಪಿ.ಟಿ.ಉಷಾ ಅವರ ಹೆಸರನ್ನು ಹೊಂದಿರುವ ಸಾನಿಯಾ ಮಿರ್ಜಾ ಅವರ ಪೋಸ್ಟರ್ ಈಗ ವೈರಲ್ ಆಗಿದೆ.
Epic🤦♀️ can u help me hashtag # it pic.twitter.com/ItWzCo6nvY
— Smita (@smitapop) August 29, 2019
ಈಗ ಈ ಪೋಸ್ಟರ್ ನ್ನು ಬಿಚ್ ರಸ್ತೆಯ ಬಳಿ ಇರುವ ಜಲಾಂತರ್ಗಾಮಿ ವಸ್ತುಸಂಗ್ರಹಾಲಯದ ಬಳಿ ಹಾಕಲಾಗಿದೆ. ಇದಕ್ಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ವ್ಯಂಗ್ಯವಾಡಿದ್ದಾರೆ. ಕೆಲವರು ಪೋಸ್ಟರ್ ಅನ್ನು ಟೀಕಿಸಿದರೆ, ಇನ್ನು ಕೆಲವರು ಜೋಕ್ ಮಾಡಿದ್ದಾರೆ.
Sania mirza @MirzaSania is called PT usha in Andhrapradesh
🙄🙄🙄
Such ignorance level of Ap government ?? pic.twitter.com/65SEkEb1fm— Kiran (@kirankonnects) August 29, 2019
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು 'ವೈಎಸ್ಆರ್ ಕ್ರೀಡಾ ಪ್ರೋತಾಸಹಕಲು' ಹೆಸರಿನಲ್ಲಿ ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗೆದ್ದ ಕ್ರೀಡಾಪಟುಗಳಿಗೆ ನಗದು ಪ್ರಶಸ್ತಿಗಳನ್ನು ಘೋಷಿಸಿದ್ದರು ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.