ಇದೀಗ ನಡೆಯುತ್ತಿರುವುದು ರಾಜಕೀಯ ವೇಶ್ಯಾವಾಟಿಕೆ -ಕಾಂಗ್ರೆಸ್ ಶಾಸಕ ರೆಜಿನಾಲ್ಡೊ

  ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಶಾಸಕರನ್ನು ಶೀಘ್ರದಲ್ಲೇ ಸಂಪುಟದಿಂದ ಕೈಬಿಡಲಾಗುವುದು ಎಂಬ ವರದಿಗಳ ಮಧ್ಯೆ, ಗೋವಾ ಫಾರ್ವರ್ಡ್ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಮತ್ತು ಅವರ ಇಬ್ಬರು ಪಕ್ಷದ ಶಾಸಕರು ಕಾಂಗ್ರೆಸ್ ಶಾಸಕರಾದ ಅಲೆಕ್ಸೊ ಲಾರೆಂಕೊ ರೆಜಿನಾಲ್ಡೊ ಅವರನ್ನು ಶುಕ್ರವಾರ ಪಣಜಿಯಲ್ಲಿ ಭೇಟಿಯಾದರು.

Last Updated : Jul 12, 2019, 06:00 PM IST
ಇದೀಗ ನಡೆಯುತ್ತಿರುವುದು ರಾಜಕೀಯ ವೇಶ್ಯಾವಾಟಿಕೆ -ಕಾಂಗ್ರೆಸ್ ಶಾಸಕ ರೆಜಿನಾಲ್ಡೊ title=
Photo courtesy: PTI(File photo)

ನವದೆಹಲಿ:  ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಶಾಸಕರನ್ನು ಶೀಘ್ರದಲ್ಲೇ ಸಂಪುಟದಿಂದ ಕೈಬಿಡಲಾಗುವುದು ಎಂಬ ವರದಿಗಳ ಮಧ್ಯೆ, ಗೋವಾ ಫಾರ್ವರ್ಡ್ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಮತ್ತು ಅವರ ಇಬ್ಬರು ಪಕ್ಷದ ಶಾಸಕರು ಕಾಂಗ್ರೆಸ್ ಶಾಸಕರಾದ ಅಲೆಕ್ಸೊ ಲಾರೆಂಕೊ ರೆಜಿನಾಲ್ಡೊ ಅವರನ್ನು ಶುಕ್ರವಾರ ಪಣಜಿಯಲ್ಲಿ ಭೇಟಿಯಾದರು.

ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಅವರ ಮನೆಯ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ರೆಜಿನಾಲ್ಡೊ 'ಇದೀಗ ನಡೆಯುತ್ತಿರುವುದು ರಾಜಕೀಯ ವೇಶ್ಯಾವಾಟಿಕೆ' ಎಂದು ಹೇಳಿದ್ದಾರೆ. "ರಾಜಕೀಯದಲ್ಲಿ ಯಾವುದೇ ದುಃಖ ಅಥವಾ ಸಂತೋಷವಿಲ್ಲ. ಈ ಬಾರಿ ಏನಾಗಿದೆ, ನೀವು ಅದನ್ನು ದುಃಖ ಅಥವಾ ಸಂತೋಷ ಎಂದು ಕರೆಯಲು ಸಾಧ್ಯವಿಲ್ಲ. ಅದು ಏನೇ ಇರಲಿ ಇದು ರಾಜಕೀಯ ವೇಶ್ಯಾವಾಟಿಕೆ ಮಾತ್ರ, 'ಎಂದು ರೆಜಿನಾಲ್ಡೋ ಹೇಳಿದರು.

ಆದರೆ ಕ್ಯಾಬಿನೆಟ್ ಪುನರಚನೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಶುಕ್ರವಾರ ಯಾವುದೇ ಸಚಿವರನ್ನು ಸಂಪುಟದಿಂದ ಕೈಬಿಡಲಾಗಿಲ್ಲ ಎಂದು ಹೇಳಿದ್ದಾರೆ. ಕ್ಯಾಬಿನೆಟ್ ಪುನರ್ ರಚನೆ ನಡೆದಿಲ್ಲ ಮತ್ತು ಇನ್ನೂ ಯಾವುದೇ ಸಚಿವರನ್ನು ಕೈಬಿಡಲಾಗಿಲ್ಲ" ಎಂದು ಮುಖ್ಯಮಂತ್ರಿ ಎಎನ್‌ಐಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ. ಅಂತಹ ಯಾವುದೇ ಬೆಳವಣಿಗೆ ನಡೆದರೆ ಅದನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದರು.

ಈ ಹಿಂದೆ ಕ್ಯಾಬಿನೆಟ್ ಪುನರ್ರಚನೆಯ ಸಾಧ್ಯತೆಯ ಬಗ್ಗೆ, ಗೋವಾ ಉಪಸಭಾಪತಿ ಮೈಕೆಲ್ ಲೋಬೊ "ಅಗತ್ಯವಿರುವ ತಿದ್ದುಪಡಿಯನ್ನು ಮುಖ್ಯಮಂತ್ರಿ ಮಾಡುತ್ತಾರೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ ನಂತರ, ಕೆಲವು ಮಂತ್ರಿಗಳ ಕಾರ್ಯಗಳ ಬಗ್ಗೆ ಅಸಮಾಧಾನವಿದೆ ಎಂದು ಮುಖ್ಯಮಂತ್ರಿ ಹೇಳಿದರು. ಮಂತ್ರಿಗಳು ಜನರನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ ಅವರು ಸರ್ಕಾರದಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದರು.

ಗೋವಾದಲ್ಲಿ ಗುರುವಾರದಂದು 10 ಕಾಂಗ್ರೆಸ್ ಬಂಡಾಯ ಶಾಸಕರು ಕಾರ್ಯಕಾರಿ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಸಮ್ಮುಖದಲ್ಲಿ ಪಕ್ಷವನ್ನು ಸೇರಿಕೊಂಡಿದ್ದರು. ಇದರಿಂದ ಈಗ ಸದನದಲ್ಲಿ ಕಾಂಗ್ರೆಸ್ ಬಲ ಕೇವಲ ಐದಕ್ಕೆ ಇಳಿದಿದೆ.

Trending News