ಖಾಸಗಿ ಶಾಲಾ ಶುಲ್ಕ ಮನ್ನಾ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?

ಖಾಸಗಿ ಶಾಲೆಗಳ ಮೂರು ತಿಂಗಳ (ಏಪ್ರಿಲ್ 1 ರಿಂದ ಜೂನ್ ವರೆಗೆ) ಶುಲ್ಕವನ್ನು ಮನ್ನಾ ಮಾಡುವಂತೆ ಮತ್ತು ನಿಯಮಿತ ಶಾಲೆ ಪ್ರಾರಂಭವಾಗುವವರೆಗೆ ಶುಲ್ಕವನ್ನು ನಿಯಂತ್ರಿಸುವಂತೆ ಒತ್ತಾಯಿಸಿ 8 ರಾಜ್ಯಗಳ ಪೋಷಕರು ಒಟ್ಟಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 

Last Updated : Jul 10, 2020, 02:45 PM IST
ಖಾಸಗಿ ಶಾಲಾ ಶುಲ್ಕ  ಮನ್ನಾ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು? title=

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಎಲ್ಲರ ಆದಾಯಕ್ಕೂ ಪೆಟ್ಟು ಬಿದ್ದಿರುವುದರಿಂದ   ಅನುದಾನರಹಿತ ಖಾಸಗಿ ಶಾಲೆಗಳ ಮೂರು ತಿಂಗಳ ಶುಲ್ಕವನ್ನು ಮನ್ನಾ ಮಾಡುವಂತೆ ಮತ್ತು ನಿಯಂತ್ರಕ ಕಾರ್ಯವಿಧಾನವನ್ನು ರಚಿಸುವ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಅರ್ಜಿದಾರರಿಗೆ ಸೂಚಿಸಿದೆ.

ಈ ವರ್ಷ ಶಾಲಾ ಶುಲ್ಕ ಹೆಚ್ಸಿಸದಂತೆ ಖಾಸಗಿ ಶಾಲೆಗಳಿಗೆ ಮಾನವ ಸಂಪನ್ಮೂಲ ಸಚಿವರ ಮನವಿ

ಲಾಕ್‌ಡೌನ್ (Lockdown) ಸಮಯದಲ್ಲಿ ಖಾಸಗಿ ಶಾಲೆಗಳ ಮೂರು ತಿಂಗಳ (ಏಪ್ರಿಲ್ 1 ರಿಂದ ಜೂನ್ ವರೆಗೆ) ಶುಲ್ಕವನ್ನು ಮನ್ನಾ ಮಾಡುವಂತೆ ಮತ್ತು ನಿಯಮಿತ ಶಾಲೆ ಪ್ರಾರಂಭವಾಗುವವರೆಗೆ ಶುಲ್ಕವನ್ನು ನಿಯಂತ್ರಿಸುವಂತೆ ಒತ್ತಾಯಿಸಿ 8 ರಾಜ್ಯಗಳ ಪೋಷಕರು ಒಟ್ಟಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಈ ಅರ್ಜಿಯನ್ನು ಆಲಿಸಲು ನ್ಯಾಯಾಲಯ ನಿರಾಕರಿಸಿತು.

Alert: ಶಾಲೆಗಳಲ್ಲಿ ಮುಂಗಡ ಶುಲ್ಕ ಕೇಳಿದರೆ ದೂರು ನೀಡಿ

ಪೋಷಕರು ತಮ್ಮ ಅರ್ಜಿಯಲ್ಲಿ ಶುಲ್ಕವನ್ನು ಪಾವತಿಸದ ಕಾರಣ ಮಕ್ಕಳನ್ನು ಶಾಲೆಯಿಂದ ತೆಗೆದುಹಾಕಬಾರದು ಎಂದು ನ್ಯಾಯಾಲಯದಲ್ಲಿ ಕೋರಲಾಗಿತ್ತು. ಗಮನಾರ್ಹವಾಗಿ ಕರೋನಾ ಸಾಂಕ್ರಾಮಿಕದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ತರಲಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಹಲವು ಉದ್ಯೋಗಗಳು ಸ್ಥಗಿತಗೊಂಡಿದ್ದವು. ಇದರಿಂದಾಗಿ ಅನೇಕ ಪೋಷಕರು ಶುಲ್ಕವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದರೆ ಅನ್ಲಾಕ್ 2 ಘೋಷಿಸುವ ಮೂಲಕ ಹೊರಡಿಸಿರುವ ನಿರ್ಬಂಧಗಳಲ್ಲಿ ಕೇಂದ್ರ ಸರ್ಕಾರ ಸ್ವಲ್ಪ ವಿಶ್ರಾಂತಿ ನೀಡಿದೆ. ಆದರೆ ಕರೋನಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಕೆಲವು ರಾಜ್ಯಗಳು ಇನ್ನೂ  ಲಾಕ್‌ಡೌನ್ ಮುಂದುವರೆಸಿವೆ.
 

Trending News