9 ವರ್ಷದ ಹಿಂದೆ ಚಿದಂಬರಂ ಅಡಿಯಲ್ಲಿ ಬಂಧನವಾಗಿದ್ದಾಗ ಅಮಿತ್ ಶಾ ಹೇಳಿದ್ದೇನು ಗೊತ್ತೇ ?

"ಮೇರಾ ಪಾನಿ ಉತಾರ್ತೆ ದೇಖ್ ಕಿನಾರೆ ಪಾರ್ ಘರ್ ಮತ್ ಬನಾ ಲೆನಾ

Last Updated : Aug 22, 2019, 03:03 PM IST
9 ವರ್ಷದ ಹಿಂದೆ ಚಿದಂಬರಂ ಅಡಿಯಲ್ಲಿ ಬಂಧನವಾಗಿದ್ದಾಗ ಅಮಿತ್ ಶಾ ಹೇಳಿದ್ದೇನು ಗೊತ್ತೇ ? title=

ಮುಂಬೈ : "ಮೇರಾ ಪಾನಿ ಉತಾರ್ತೆ ದೇಖ್ ಕಿನಾರೆ ಪಾರ್ ಘರ್ ಮತ್ ಬನಾ ಲೆನಾ
ಮೇ ಸಮುಂದರ್ ಹೂ, ಲಾಟ್ ಕರ್ ಆವುಂಗಾ "

'(ನನ್ನ ಉಬ್ಬರವಿಳಿತ ಕ್ಷೀಣಿಸಿದೆ ಎಂದು ಭಾವಿಸಿ ತೀರದಲ್ಲಿ ಮನೆ ನಿರ್ಮಿಸಬೇಡಿ,
ನಾನು ಸಮುದ್ರ, ನಾನು ಹಿಂತಿರುಗಿಬರುತ್ತೇನೆ)'

ಈ ಮಾತುಗಳನ್ನು ಹೇಳಿದ್ದು ಬೇರೆ ಯಾರು ಅಲ್ಲ, 2010ರಲ್ಲಿ ಶೋಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಬಂಧಿಸಲಾಗಿದ್ದ ಸದ್ಯದ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದು ಇಂಡಿಯಾ ಟಿವಿ ವರದಿ ಮಾಡಿದೆ.

ಆ ಸಮಯದಲ್ಲಿ ಅಮಿತ್ ಶಾ ಅವರು ಗುಜರಾತ್ ಗೃಹ ಸಚಿವರಾಗಿದ್ದರು. 2005 ರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ದರೋಡೆಕೋರ ಸೊಹ್ರಾಬುದ್ದೀನ್‌ನನ್ನು ಕೊಲ್ಲಲು ಅವರು ಗುಜರಾತ್ ಪೊಲೀಸರಿಗೆ ಅನುಮತಿ ನೀಡಿದ್ದರು ಎನ್ನುವ ಆರೋಪವಿತ್ತು. ಈ ಹಿನ್ನಲೆಯಲ್ಲಿ ಶಾ ರನ್ನು ಕೊಲೆ, ಸುಲಿಗೆ ಮತ್ತು ಅಪಹರಣದ ಕಾರಣ ಒಡ್ಡಿ 2010 ರಲ್ಲಿ ಸಿಬಿಐ ಬಂಧಿಸಿತ್ತು. 2012 ರವರೆಗೆ ಎರಡು ವರ್ಷಗಳ ಕಾಲ ಅವರಿಗೆ ಗುಜರಾತ್‌ಗೆ ಪ್ರವೇಶಿಸುವುದನ್ನುನಿಷೇಧಿಸಲಾಗಿತ್ತು.

ಆಗ ನಿನ್ನೆ ಐಎನ್‌ಎಕ್ಸ್ ಹಣ ವರ್ಗಾವಣೆ ಪ್ರಕರಣದಲ್ಲಿ ಬುಧವಾರ ರಾತ್ರಿ ಬಂಧಿಸಲ್ಪಟ್ಟ ಮಾಜಿ ಗೃಹ ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದರು. ಈಗ ಕಾಂಗ್ರೆಸ್ 2010 ರಲ್ಲಿ ಷಾ ಅವರ ಬಂಧನಕ್ಕಾಗಿ ಚಿದಂಬರಂ ವಿರುದ್ಧ ರಾಜಕೀಯ ಪಿತೂರಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆಗ ರಾಜಕೀಯ ವಿರೋಧಿಗಳನ್ನು ತೊಡೆದುಹಾಕಲು ಕಾಂಗ್ರೆಸ್ ಪಕ್ಷವು ಸರ್ಕಾರದ ಆಡಳಿತವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು 2010 ರಲ್ಲಿ ಬಿಜೆಪಿ ಹೇಳಿತ್ತು. ಒಂಬತ್ತು ವರ್ಷಗಳ ನಂತರ ಕಾಂಗ್ರೆಸ್ ಪಕ್ಷವು ಈಗ ಆಡಳಿತಾರೂಡ ಬಿಜೆಪಿ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡುತ್ತಿದೆ.

 

Trending News