ದುಬೈ: ಇಲ್ಲಿ ನಡೆಯುತ್ತಿರುವ ವಿಯಾನ್ ಜಾಗತಿಕ ಶೃಂಗ ಸಭೆಯಲ್ಲಿ ಬಿಕ್ರಮ್ ಸಿಂಗ್ ಪಾಕಿಸ್ತಾನದೊಂದಿಗೆ ಭಾರತದ ನೀತಿಯನ್ನು ಉಲ್ಲೇಖಿಸುತ್ತಾ," ನಾವು ದೀರ್ಘಕಾಲದವರೆಗೆ ಆದರ್ಶವಾದಿ ಕಾರ್ಯಸೂಚಿಯನ್ನು ಅಳವಡಿಸಿಕೊಂಡಿದ್ದೇವೆ" ಎಂದು ಅಭಿಪ್ರಾಯಪಟ್ಟರು.
"ಭಯೋತ್ಪಾದನೆಯ ಮುಖ್ಯಕೇಂದ್ರದ ಸಮಸ್ಯೆಗಳನ್ನು ಅನುಮತಿಸುವುದಿಲ್ಲ, ಈಗ ನಾವು ಪಾಕಿಸ್ತಾನ ಭಯೋತ್ಪಾಧನೆ ವಿಚಾರದಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗಿದೆ" ಎಂದು ಹೇಳಿದರು. ಇದೇ ವೇಳೆ ಅಮೆರಿಕಾಕ್ಕೆ ಪಾಕಿಸ್ತಾನದ ಮಾಜಿ ರಾಯಭಾರಿಯಾಗಿದ್ದ ಹುಸೇನ್ ಹಖಾನಿ ಮಾತನಾಡಿದೆ "ಉಪ-ಸಾಂಪ್ರದಾಯಿಕ ಯುದ್ಧ" ಯ ಕಾರ್ಯನೀತಿಯು ವಿಫಲವಾಗಿದೆ ಎಂದು ಹೇಳಿದರು.
"ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ವ್ಯಾಪಕವಾಗಿ ಬಳಸಲ್ಪಡುವ ಪದವಾಗಿದ್ದು, ಇಲ್ಲಿ ಒಂದು ದೇಶವನ್ನು ಉಗ್ರವಾದದ ಪ್ರತಿಪಾದನೆ ಎಂದು ಕರೆದರೆ,ತನ್ನ ಉಪಯೋಗಕ್ಕಾಗಿ ಅದು ಇನ್ನೊಂದು ದೇಶವನ್ನು ಹಾಗೆ ಕರೆಯುವುದಿಲ್ಲ. ಆದ್ದರಿಂದ ಈ ಹಿನ್ನಲೆಯಲ್ಲಿ ಇಲ್ಲಿ ಸ್ಥಿರತೆ ಅಗತ್ಯ ಎಂದು ತಿಳಿಸಿದರು.
#WIONGlobalSummit: Former Indian army chief General Bikram Singh and other panelists got together for a discussion on "Uprooting state-sponsored terrorism: An imperative for peace in South Asia".https://t.co/RSEMzSXv9U
— WION (@WIONews) February 20, 2019
ಪಾಕಿಸ್ತಾನದ ಭಾರತದ ಮಾಜಿ ಹೈ ಕಮಿಷನರ್ ಜಿ ಪಾರ್ಥಸಾರಥಿ ಮಾತನಾಡಿ "ಪ್ರತಿಯೊಂದು ದೇಶವೂ ಒಂದು ಸೈನ್ಯವನ್ನು ಹೊಂದಿದೆ. ಆದರೆ ಪಾಕಿಸ್ತಾನದಲ್ಲಿ ಸೈನ್ಯವು ಒಂದು ದೇಶವನ್ನು ಹೊಂದಿದೆ. ಇಂದು ಬಾಂಗ್ಲಾದೇಶದ ಅಭಿವೃದ್ಧಿಗೆ ಹೆಚ್ಚು ಗಮನ ನೀಡಿದ್ದರಿಂದಾಗಿ ಬಾಂಗ್ಲಾದೇಶವು ಉತ್ತಮ ಬೆಳವಣಿಗೆಯನ್ನು ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮಾಜಿ ಭಾರತೀಯ ಹೈ ಕಮಿಷನರ್ ಜಿ ಪಾರ್ಥಸಾರಥಿ, ಅಮೆರಿಕದ ಹಡ್ಸನ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಕನ್ವಾಲ್ ಸಿಬಲ್, ವಿಲ್ಸನ್ ಸೆಂಟರ್ನ ದಕ್ಷಿಣ ಏಷ್ಯಾ ತಜ್ಞ ಮೈಕೆಲ್ ಕುಗೆಲ್ಮನ್, ಅವರು ಉಪಸ್ಥಿತರಿದ್ದರು.