ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಪಶ್ಚಿಮ ಬಂಗಾಳ ಮತ್ತೊಂದು ಕಾಶ್ಮೀರವಾಗಲಿದೆ: ಬಿಜೆಪಿ ಸಂಸದ

ಮಮತಾ ಬ್ಯಾನರ್ಜಿಯ ಸಹಚರರು ಹಾಗೂ ತೃಣಮೂಲ ಕಾಂಗ್ರೆಸ್​​ನ ನಾಯಕರು ಹೊರಗಿನ ಗೂಂಡಾಗಳಿಗೆ ಆಶ್ರಯ ನೀಡುತ್ತಿದ್ದಾರೆ. ಇದನ್ನೆಲ್ಲ ತಿಳಿದಿದ್ದರೂ ಪೊಲೀಸರು ದೀದಿಯ ಸೇನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಜುನ್ ಸಿಂಗ್ ಆರೋಪಿಸಿದ್ದಾರೆ. 

Last Updated : Jul 29, 2019, 11:38 AM IST
ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಪಶ್ಚಿಮ ಬಂಗಾಳ ಮತ್ತೊಂದು ಕಾಶ್ಮೀರವಾಗಲಿದೆ: ಬಿಜೆಪಿ ಸಂಸದ title=

ಹೌರ : ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ಪಶ್ಚಿಮ ಬಂಗಾಳ ಮತ್ತೊಂದು ಕಾಶ್ಮೀರವಾಗಲಿದೆ ಎಂದು ಬಾರಕ್​ಪುರ್​ ಕ್ಷೇತ್ರದ ಬಿಜೆಪಿ ಸಂಸದ ಅರ್ಜುನ್​ ಸಿಂಗ್​ ಟೀಕಿಸಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದೀದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಿಂಗ್, ಮಮತಾ ಬ್ಯಾನರ್ಜಿ ಅವರಿಗೆ ಅಧಿಕಾರದ ಆಸೆ ಹೆಚ್ಚಾಗಿದ್ದು, ಅಧಿಕಾರಕ್ಕಾಗಿ ಏನನ್ನಾದರೂ ಮಾಡಲು ಸಿದ್ಧರಿದ್ದಾರೆ. ಹೀಗಾಗಿ ಈಗ ಪಶ್ಚಿಮ ಬಂಗಾಳವನ್ನು ಕಾಶ್ಮೀರವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಮತಾ ಬ್ಯಾನರ್ಜಿಯ ಸಹಚರರು ಹಾಗೂ ತೃಣಮೂಲ ಕಾಂಗ್ರೆಸ್​​ನ ನಾಯಕರು ಹೊರಗಿನ ಗೂಂಡಾಗಳಿಗೆ ಆಶ್ರಯ ನೀಡುತ್ತಿದ್ದಾರೆ. ಇದನ್ನೆಲ್ಲ ತಿಳಿದಿದ್ದರೂ ಪೊಲೀಸರು ದೀದಿಯ ಸೇನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಜುನ್ ಸಿಂಗ್ ಆರೋಪಿಸಿದ್ದಾರೆ. 

ಅಷ್ಟೇ ಅಲ್ಲದೆ, ತೃಣಮೂಲ ಕಾಂಗ್ರೆಸ್​ನ 107 ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ಭತ್ಪರದಲ್ಲಿ ಚುನಾವಣೆಗೆ ನಿಂತು ಗೆದ್ದು ತೋರಿಸಲಿ, ಅವರ ಬೆದರಿಕೆಗೆ ಅಲ್ಲಿನ ಜನ ಬಗ್ಗುವುದಿಲ್ಲ. ಅವರಿಗೆ ಬೇಕಿರುವುದು ಬಿಜೆಪಿ ಮತ್ತು ಅರ್ಜುನ್​ ಸಿಂಗ್​ ಎಂದು ಸವಾಲೆಸೆದರಲ್ಲದೆ 2021ರ ಚುನಾವಣೆಯಲ್ಲಿ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

Trending News