ಜೈಪುರ್: ಬಿಜೆಪಿ ರಾಜಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಡಿಸಿದರು.
ಜೈಪುರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಎಲ್ಲದರ ನಡುವೆ ವಸುಂಧರೆರಾಜೆ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅಕ್ಲಾಕ್ ಮತ್ತು ಅವಾರ್ಡ್ ವಾಪ್ಸಿಯಂತಹ ಘಟನೆಗಳು ನಡೆದಾಗಲು ಉತ್ತರಪ್ರದೇಶದಲ್ಲಿ ಗೆದ್ದಿದ್ದೇವೆ.ಅದೇ ರೀತಿಯಾಗಿ ರಾಜಸ್ತಾನದಲ್ಲಿ ಎಲ್ಲದರ ನಡುವೆಯೂ ಗೆಲ್ಲುತ್ತೇವೆ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಗೋರಕ್ಷಕರು 52 ವರ್ಷದ ವ್ಯಕ್ತಿಯನ್ನು ದಾದ್ರಿಯಲ್ಲಿ ಹತ್ಯೆ ಮಾಡಿದ್ದರು.ಈ ಘಟನೆ ಕಳೆದ ವರ್ಷ ಚುನಾವಣೆ ಇನ್ನು ಕೆಲವೇ ತಿಂಗಳುಗಳ ಬಾಕಿ ಇರುವಾಗ ನಡೆದಿತ್ತು ಈ ಘಟನೆಯನ್ನು ಪ್ರಸ್ತಾಪಿಸುತ್ತಾ ಮತ್ತೆ ರಾಜಸ್ತಾನದಲ್ಲಿ ಎಲ್ಲ ವಿರೋಧದ ನಡುವೆಯೂ ಗೆಲ್ಲಲಿದೆ ಎಂದು ಅಮಿತ್ ಶಾ ತಿಳಿಸಿದರು.ರಾಜಸ್ಥಾನವು ಕೂಡ ಉತ್ತರ ಪ್ರದೇಶದ ರೀತಿಯಲ್ಲಿ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ.ಅದರಲ್ಲಿ ಪ್ರಮುಖವಾಗಿ ಹರ್ಯಾಣದ ರಾಖ್ಬಾರ್ ಖಾನ್ ರ ಹತ್ಯೆ ಪ್ರಮುಖವಾಗಿದೆ.