ನವದೆಹಲಿ: ಮಹಿಳೆಯರಿಗೂ ಕೂಡ ಪ್ರವೇಶದ ಅವಕಾಶ ನೀಡಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮುಂದೆ ಹಲವು ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು.ಆದ್ದರಿಂದ ಈ ವಿಚಾರವಾಗಿ ಸುಪ್ರೀಂಕೋರ್ಟ್ ಇಂದು ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ನಡೆಸಿದೆ.
ಈ ವಿಚಾರಣೆ ವೇಳೆಯಲ್ಲಿ ಈಗ ಸುಪ್ರೀಂಕೋರ್ಟ್ ಮುಂದೆ ಟ್ರಾವ೦ಕೋರ್ ದೇವಸ್ವಂ ಬೋರ್ಡ್ ತಮ್ಮ ನಿರ್ಧಾರದ ವಿಚಾರದಲ್ಲಿ ಉಲ್ಟಾ ಹೊಡೆದಿದೆ.ಟಿಡಿಬಿ ಪರವಾಗಿ ವಾದಿಸಿದ ವಕೀಲ ರಾಕೇಶ್ ದ್ವಿವೇದಿ " ಯಾವುದೇ ರೀತಿಯ ಆಚರಣೆ ಸಮಾನತೆಯ ಹಕ್ಕನ್ನು ನಿರಾಕರಿಸಿದರೆ ಅದು ವಿಧಿ 25ಯನ್ನು ಉಲ್ಲಂಘಿಸಿದ ಹಾಗೆ ಆಗುತ್ತದೆ ಆದ್ದರಿಂದ ಟಿಡಿಬಿ ಈಗ ಕೋರ್ಟ್ ನ ತೀರ್ಪುನ್ನು ಗೌರವಿಸುತ್ತದೆ ಹೊರತು ಅದನ್ನು ಮರುಪರಿಶೀಲನೆ ಒಳಪಡಿಸಲು ಕೋರುವುದಿಲ್ಲ" ಎಂದು ಅಭಿಪ್ರಾಯಪಟ್ಟರು.
ಇನ್ನೊಂದೆಡೆ ಕೇರಳಾ ಸರ್ಕಾರ ಹಲವು ದಶಕಗಳ ಕಾಲ ಮಹಿಳೆಗೆ ನಿಷೇಧ ವಿಧಿಸಿದ್ದ ದೇವಸ್ತಾನದ ನಿಯಮವನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿ ಎಲ್ಲರಿಗೂ ಮುಕ್ತ ಮಾಡಿರುವ ಸುಪ್ರೀಂ ತೀರ್ಪನ್ನು ಮತ್ತೆ ಮರುಪರಿಶೀಲನೆ ಒಳಪಡಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.ಇನ್ನು ಮುಟ್ಟಾದ ಮಹಿಳೆಯರನ್ನು ದೇವಸ್ತಾನದ ಒಳಗೆ ಬಿಡದಿರುವುದು ಹಿಂದೂ ಧರ್ಮದ ಪದ್ದತಿಯಲ್ಲಿಲ್ಲ, ಸುಪ್ರೀಂ ನ ತೀರ್ಪುನ್ನು ಜಾರಿಗೆ ತರುವುದು ತಮ್ಮ ಕರ್ತವ್ಯ ಎಂದು ಸುಪ್ರೀಂಗೆ ತಿಳಿಸಿದೆ.