ನವದೆಹಲಿ: ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಸೂಕ್ತ ದಾಖಲೆಯನ್ನು ಪೊಲೀಸರು ಒದಗಿಸದಿದ್ದರೆ ಕೇಸ್ ನ್ನು ರದ್ದು ಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಇತ್ತೀಚಿಗೆ ಐವರು ಮಾನವ ಹಕ್ಕು ಹೋರಾಟಗಾರರನ್ನು ಮಾವೋವಾದಿಗಳು ಸಂಪರ್ಕವನ್ನು ಹೊಂದಿದ್ದಾರೆ ಎಂದು ಬಂಧಿಸಲಾಗಿತ್ತು. ಸೆಪ್ಟೆಂಬರ್ 19 ರಿಂದ ಈ ಹೋರಾಟಗಾರರು ಗೃಹ ಬಂಧನದಲ್ಲಿದ್ದಾರೆ.ಸೋಮವಾರದಂದು ಈ ಪ್ರಕರಣದ ವಿಚಾರವಾಗಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ವಿಚಾರಣೆ ವೇಳೆಯಲ್ಲಿ ಹೋರಾಟಗಾರ ಬಂಧನದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸಿರುವುದಕ್ಕೆ ಸರ್ಕಾರ ಅಸಮಾಧಾನಗೊಂಡಿದೆ ಎನ್ನಲಾಗಿದೆ.
ಸೋಮವಾರದ ವಿಚಾರಣೆ ವೇಳೆಯಲ್ಲಿ ಸುಪ್ರೀಂ ಕೋರ್ಟ್" ನಾವು ಪೋಲೀಸರ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ. ಒಂದು ವೇಳೆ ಯಾವುದೇ ದಾಖಲೆ ಇರದಿದ್ದರೆ ನಾವು ಕೇಸ್ ನ್ನು ರದ್ದುಗೊಳಿಸಬಹುದು. ನಮ್ಮ ಮಧ್ಯಸ್ಥಿಕೆ ಅವಶ್ಯಕತೆ ಎನಿಸಿದರೆ ಅದನ್ನು ನಾವು ಪರಿಶೀಲಿಸುತ್ತೇವೆ ಎಂದು ಕೋರ್ಟ್ ತಿಳಿಸಿದೆ.ಮಾನವ ಹಕ್ಕು ಹೋರಾಟಗಾರರ ಬಂಧನವನ್ನು ವಿರೋಧಿಸಿ ಖ್ಯಾತ್ಯ ಇತಿಹಾಸಗಾರ್ತಿ ರೋಮಿಲಾ ಥಾಪರ್ ಸುಪ್ರೀಂಗೆ ಅರ್ಜಿಯನ್ನು ಸಲ್ಲಿಸಿದ್ದರು.