ನಾವು ಬಿಜೆಪಿ ಸಂಪರ್ಕದಲ್ಲಿಲ್ಲ: ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಭೈರತಿ ಬಸವರಾಜ್

ಬೆಂಗಳೂರಿಗೆ ತೆರಳುವ ಮುನ್ನ ಮುಂಬೈನ ರಿನೈಸೆನ್ಸ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಬೆಲ್ ಶಾಸಕರು.

Last Updated : Jul 11, 2019, 02:35 PM IST
ನಾವು ಬಿಜೆಪಿ ಸಂಪರ್ಕದಲ್ಲಿಲ್ಲ: ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಭೈರತಿ ಬಸವರಾಜ್ title=
File Image

ಮುಂಬೈ: ನಮ್ಮ ರಾಜೀನಾಮೆ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ನಾವು ಬಿಜೆಪಿ ಸಂಪರ್ಕದಲ್ಲಿಲ್ಲ ಎಂದು ಬೆಂಗಳೂರಿಗೆ ಹೊರಡುವ ಮುನ್ನ ಅತೃಪ್ತ ಶಾಸಕ ಭೈರತಿ ಬಸವರಾಜ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿಗೆ ತೆರಳುವ ಮುನ್ನ ಮುಂಬೈನ ರಿನೈಸೆನ್ಸ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಬೆಲ್ ಶಾಸಕ ಭೈರತಿ ಬಸವರಾಜ್, ಇಲ್ಲಿನ ಬಿಜೆಪಿ ಸರ್ಕಾರ ನಮ್ಮ ಜೊತೆ ಇದೇ ಎಂಬ ಆರೋಪಗಳು ಕೇಳಿ ಬಂದಿವೆ. ಇದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ. ನಾವು ಇಲ್ಲಿನ ಸರ್ಕಾರವನ್ನು ನಮಗೆ ರಕ್ಷಣೆ ಕೋರಿ ಮನವಿ ಮಾಡಿದ್ದೆವು. ಸರ್ಕಾರ ನಮಗೆ ರಕ್ಷಣೆ ಮಾತ್ರ ನೀಡಿದೆ. ನಾವು ಯಾವುದೇ ಬಿಜೆಪಿ ನಾಯಕರ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದರು.

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ನಾವು ಸಭಾಪತಿಯವರನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳುತ್ತಿದ್ದೇವೆ. ನಮ್ಮ ರಾಜೀನಾಮೆ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ನಮ್ಮ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆ. ನಾವಿನ್ನೂ ಕಾಂಗ್ರೆಸ್ ನಲ್ಲೇ ಇದ್ದೇವೆ ಎಂಬುದನ್ನು ಭೈರತಿ ಬಸವರಾಜ್ ಅವರು ಪುನರುಚ್ಚರಿಸಿದ್ದಾರೆ.
 

Trending News