ನವದೆಹಲಿ: ಕುಡಿದ ಮತ್ತಿನಲ್ಲಿ ಟ್ರಾಫಿಕ್ ಪೊಲೀಸರೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಅವರನ್ನು ನಿಂದಿಸಿ, ರಸ್ತೆ ಮಧ್ಯದಲ್ಲಿಯೇ ಯುವತಿಯೊಬ್ಬಳು ರಂಪಾಟ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ದೆಹಲಿಯ ಮಯಾಪುರಿ ಪ್ರದೇಶದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣ ಟ್ರಾಫಿಕ್ ಪೊಲೀಸರು ಸ್ಕೂಟಿಯನ್ನು ತಡೆದಿದ್ದಾರೆ. ಕೂಡಲೇ ಹಿಂದಿನ ಆಸನದಲ್ಲಿ ಕುಳಿತಿದ್ದ ಯುವತಿ ಕೆಳಗಿಳಿದು ಸಂಚಾರಿ ಪೊಲೀಸ್ ಜೊತೆ ಜಗಳವಾಡಿದ್ದಲ್ಲದೆ, ಅವರ ಮೇಲೆ ಹಲ್ಲೆ ಸಹ ನಡೆಸಿರುವ ದೃಶ್ಯ ವೀಡಿಯೋದಲ್ಲಿ ಸ್ಪಷ್ಟವಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
#WATCH A woman and a man misbehaved&manhandled a traffic police cop on being stopped for not wearing helmet, in Delhi's Mayapuri, last evening.According to the police, the two were heavily drunk. Case has been registered against them on complaint of the traffic police personnel. pic.twitter.com/JSuQfFuDc4
— ANI (@ANI) July 17, 2019
ಸದ್ಯ ಪೊಲೀಸರು ಸ್ಕೂಟರ್ ಸವಾರ ಅನಿಲ್ ಪಾಂಡೆ ಮತ್ತು ಯುವತಿ ಮಾಧುರಿ ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳಿಬ್ಬರೂ ಕುಡಿದಿದ್ದರು ಎನ್ನಲಾಗಿದೆ.