Watch: ನರೇಂದ್ರ ಮೋದಿಯ 2014 ರ ಅಚ್ಚೆ ದಿನ್ ಭರವಸೆಯನ್ನು ಡಬ್ ಮಾಶ್ ಮಾಡಿದ ಲಾಲೂ ಪ್ರಸಾದ್ ಯಾದವ್

ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿಯವರ 2014 ರ ಚುನಾವಣೆಯಲ್ಲಿ ನೀಡಿದ ಅಚ್ಚೆ ದಿನ್  ಭರವಸೆಯನ್ನು ಡಬ್ ಮಾಶ್ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ  ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

Last Updated : Apr 14, 2019, 12:11 PM IST
Watch: ನರೇಂದ್ರ ಮೋದಿಯ 2014 ರ ಅಚ್ಚೆ ದಿನ್ ಭರವಸೆಯನ್ನು ಡಬ್ ಮಾಶ್ ಮಾಡಿದ ಲಾಲೂ ಪ್ರಸಾದ್ ಯಾದವ್ title=

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿಯವರ 2014 ರ ಚುನಾವಣೆಯಲ್ಲಿ ನೀಡಿದ ಅಚ್ಚೆ ದಿನ್  ಭರವಸೆಯನ್ನು ಡಬ್ ಮಾಶ್ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ  ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಈ ವೀಡಿಯೋ ವೊಂದರಲ್ಲಿ ಲಾಲೂ ಪ್ರಸಾದ್ ಯಾದವ್  ತಮ್ಮ ತುಟಿಗಳನ್ನು ಸಿಂಕ್ ಮಾಡಿ ಪ್ರಧಾನಿ ಮೋದಿ ರ್ಯಾಲಿಯಲ್ಲಿ ಮಾಡಿದ ಭಾಷಣವನ್ನು ಡಬ್ ಮಾಶ್ ಮಾಡಿದ್ದಾರೆ.ಪ್ರಧಾನಿ ಮೋದಿ ಈ ಹಿಂದೆ 2014 ರಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಹಾಕುವುದಾಗಿ ಹೇಳಿದ್ದ ಭರವಸೆಯನ್ನು ಈಗ ಲಾಲೂ ಡಬ್ ಮಾಶ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.ಆದರೆ ಈಗ ಈ ವೀಡಿಯೋವನ್ನು ಯಾವಾಗ ಹಾಗೂ ಎಲ್ಲಿ ರಿಕಾರ್ಡ್  ಮಾಡಲಾಗಿದೆ ಎಂದು ತಿಳಿದುಬಂದಿಲ್ಲ ಎನ್ನಲಾಗಿದೆ.

ಸದ್ಯ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ರಾಂಚಿಯಲ್ಲಿ ಬಹುಕೋಟಿ ಮೇವು ಹಗರಣದ ವಿಚಾರವಾಗಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

Trending News