Watch: ಇಡ್ಲಿ ತಯಾರಿಸಲು ಶೌಚಾಲಯದ ನೀರು ಬಳಸುತ್ತಿದ್ದ ಭೂಪ...!

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಈಗ ಮುಂಬೈ ನ ಬೀದಿ ಮಾರಾಟಗಾರ ಇಡ್ಲಿಯನ್ನು ತಯಾರಿಸಲು ಶೌಚಾಲಯದ ನೀರನ್ನು ಬಳಸುತ್ತಿದ್ದಾನೆ. ಬೋರಿವಲಿ ರೈಲ್ವೆ ನಿಲ್ದಾಣದಲ್ಲಿನ ಶೌಚಾಲಯದ ನೀರನ್ನು ಆಹಾರ ತಯಾರಿಸಲು ಬಳಸಿದ್ದಾನೆ ಎನ್ನಲಾಗಿದೆ.

Last Updated : Jun 1, 2019, 11:46 AM IST
Watch: ಇಡ್ಲಿ ತಯಾರಿಸಲು ಶೌಚಾಲಯದ ನೀರು ಬಳಸುತ್ತಿದ್ದ ಭೂಪ...! title=
video grab

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಈಗ ಮುಂಬೈ ನ ಬೀದಿ ಮಾರಾಟಗಾರ ಇಡ್ಲಿಯನ್ನು ತಯಾರಿಸಲು ಶೌಚಾಲಯದ ನೀರನ್ನು ಬಳಸುತ್ತಿದ್ದಾನೆ. ಬೋರಿವಲಿ ರೈಲ್ವೆ ನಿಲ್ದಾಣದಲ್ಲಿನ ಶೌಚಾಲಯದ ನೀರನ್ನು ಆಹಾರ ತಯಾರಿಸಲು ಬಳಸಿದ್ದಾನೆ ಎನ್ನಲಾಗಿದೆ.

ವೈರಲ್ ಆಗಿರುವ 45 ಸೆಕೆಂಡ್ ಗಳ ವಿಡಿಯೋ ದಲ್ಲಿ ಶೌಚಾಲಯದಿಂದ ನೀರನ್ನು ತರುತ್ತಿರುವ ದೃಶ್ಯವು ಸೆರೆಯಾಗಿದೆ.ಈಗ ಈ ಸಂಗತಿ ಆಹಾರ ಮತ್ತು ಡ್ರಗ್ ಆಡಳಿತ ವಿಭಾಗದ ಗಮನಕ್ಕೆ ಬಂದಿದ್ದು, ಅವರು ಈ ವಿಚಾರವಾಗಿ ತನಿಖೆಯನ್ನು ಆರಂಭಿಸಿದ್ದಾರೆ.ಈಗ ಸಾರ್ವಜನಿಕರಿಗೂ ಕೂಡ ಅಂತಹ ಕಲುಷಿತ ನೀರನ್ನು ಬಳಸಕೂಡದು ಎಂದು ಸೂಚನೆ ನೀಡಿದೆ.

ಈಗ ಘಟನೆಯ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಂಬೈ ಎಫ್ಡಿಎ ಶಾಖೆ  ಅಧಿಕಾರಿ ಶೈಲೇಶ್ ಯಾದವ್ " ಈ ವಿಡಿಯೋ ನಮ್ಮ ಗಮನಕ್ಕೆ ಬಂದಿದ್ದು, ನಾವು ಅವನ ವಿರುದ್ಧ ಹಾಗೂ  ಈ ರೀತಿ ಬಳಸುವ ಇತರರ ವಿರುದ್ಧ ತನಿಖೆ ನಡೆಸುತ್ತೇವೆ, ಇಂತಹ ನೀರು ಬಳಕೆಗೆ ಆರೋಗ್ಯಕರವಲ್ಲ " ಎಂದು ಹೇಳಿದ್ದಾರೆ.

"ವ್ಯಕ್ತಿಯು ಸಿಕ್ಕಿಬಿದ್ದಾಗ, ಅವರ ಪರವಾನಗಿ ಪತ್ರವನ್ನು  ಪರಿಶೀಲಿಸಲಾಗುವುದು ಮತ್ತು ಯಾವುದೇ ಸ್ಯಾಂಪಲ್  ಕಂಡುಬಂದರೆ, ಅದನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಯಾಧವ್ ಹೇಳಿದರು.
 

Trending News