Viral Video: ನಿಂಗಿದು ಬೇಕಿತ್ತಾ…! ಬೆಟ್ ಕಟ್ಟಿ ಮೊಸಳೆ ಟಚ್ ಮಾಡಲು ಹೋದ ತಾತನಿಗೆ… ವಿಡಿಯೋ ನೋಡಿ

Viral Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಹೊಲದಲ್ಲಿ ಅಪಾಯಕಾರಿ ಮೊಸಳೆಯನ್ನು ಹಿಡಿಯಲು ಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಮೊದಲೇ ಕುತಂತ್ರ ನಡೆಸಿ ಮೊಸಳೆಯ ಕಣ್ಣು ಹಾಗೂ ಬಾಯಿಯ ಮೇಲೆ ಬಟ್ಟೆಯನ್ನು ಬಿಸಾಡಿದ್ದಾನೆ.

Written by - Bhavishya Shetty | Last Updated : Mar 17, 2023, 09:51 AM IST
    • ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಹೊಲದಲ್ಲಿ ಅಪಾಯಕಾರಿ ಮೊಸಳೆಯನ್ನು ಹಿಡಿಯಲು ಯತ್ನಿಸುತ್ತಿರುವುದನ್ನು ಕಾಣಬಹುದು.
    • ಮೊದಲೇ ಕುತಂತ್ರ ನಡೆಸಿ ಮೊಸಳೆಯ ಕಣ್ಣು ಹಾಗೂ ಬಾಯಿಯ ಮೇಲೆ ಬಟ್ಟೆಯನ್ನು ಬಿಸಾಡಿದ್ದಾನೆ.
    • ಅಷ್ಟೊಂದು ಕಷ್ಟಪಟ್ಟು ಮೊಸಳೆನ್ನು ಹಿಡಿಯಬೇಕೇ? ಅಂತ ನಿಮಗನಿಸಬಹುದು.
Viral Video: ನಿಂಗಿದು ಬೇಕಿತ್ತಾ…! ಬೆಟ್ ಕಟ್ಟಿ ಮೊಸಳೆ ಟಚ್ ಮಾಡಲು ಹೋದ ತಾತನಿಗೆ… ವಿಡಿಯೋ ನೋಡಿ title=
crocodile viral video

Viral Video: ಅಪಾಯಕಾರಿ ಪ್ರಾಣಿಗಳಿಂದ ಜನರು ಹೆಚ್ಚಿನ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಪರಿಣಿತರಾದವರು ಇಂತಹ ಅಪಾಯಕಾರಿ ಪ್ರಾಣಿಗಳ ಹತ್ತಿರ ಹೋಗುತ್ತಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಜನರ ಮನ ಕಲಕಿದೆ.

ಇದನ್ನೂ ಓದಿ: ಮಧುಮೇಹದಿಂದ ದೇಹದ ಈ ಭಾಗಗಳಿಗೆ ಗರಿಷ್ಠ ಹಾನಿ!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಹೊಲದಲ್ಲಿ ಅಪಾಯಕಾರಿ ಮೊಸಳೆಯನ್ನು ಹಿಡಿಯಲು ಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಮೊದಲೇ ಕುತಂತ್ರ ನಡೆಸಿ ಮೊಸಳೆಯ ಕಣ್ಣು ಹಾಗೂ ಬಾಯಿಯ ಮೇಲೆ ಬಟ್ಟೆಯನ್ನು ಬಿಸಾಡಿದ್ದಾನೆ. ಮೊಸಳೆ ಹಿಡಿಯಲು ಯತ್ನಿಸಿದ ವ್ಯಕ್ತಿ ತುಂಬಾ ವಯಸ್ಸಾದವರು. ಅಷ್ಟೊಂದು ಕಷ್ಟಪಟ್ಟು ಮೊಸಳೆನ್ನು ಹಿಡಿಯಬೇಕೇ? ಅಂತ ನಿಮಗನಿಸಬಹುದು. ಈ ವಿಡಿಯೋ ನೋಡಿದ್ರೆ ಯಾವುದೋ ಪಂಥ ಕಟ್ಟಿ ಮೊಸಳೆಯನ್ನು ಹಿಡಿಯಲು ಹೋದಂತೆ ಕಾಣುತ್ತಿದೆ.

ವೈರಲ್ ವಿಡಿಯೋ ನೋಡಿ:

 

ಮೊದಲು ಓರ್ವ ವೃದ್ಧ ಬಿಳಿ ಬಟ್ಟೆಯನ್ನು ತೆಗೆದುಕೊಂಡು ಮೊಸಳೆಯ ಮುಖದ ಮೇಲೆ ಹಾಕುತ್ತಾರೆ. ಆ ಸಂದರ್ಭದಲ್ಲಿ ಮೊಸಳೆ ಒಮ್ಮೆ ಕೋಪಗೊಳ್ಳುತ್ತದೆ. ಆದರೆ ಸುಮ್ಮನಾಗದ ವೃದ್ಧ ಮೊಸಳೆಯ ಹಿಂಭಾಗದಿಂದ ಹೋಗಿ ಅದನ್ನು ಹಿಡಿದುಕೊಳ್ಳಲು ಪಯತ್ನಿಸುತ್ತಾನೆ. ಮತ್ತಷ್ಟು ಕೋಪಗೊಂಡ ಮೊಸಳೆ ಆತನ ಮೇಲೆಯೇ ದಾಳಿ ನಡೆಸಲು ಮುಂದಾಗುತ್ತೆ.

ಇದನ್ನೂ ಓದಿ: Budha-Guru Yuti Effect: ಇಂದಿನಿಂದ ಈ ರಾಶಿಯವರಿಗೆ ಹಣದ ಸುರಿಮಳೆ ಸುರಿಸಲಿದ್ದಾರೆ ಬುಧ-ಗುರು

ಅದೃಷ್ಟವಶಾತ್ ಮುದುಕ ತನ್ನ ಹಿಡಿತದಿಂದ ಹೊರಬಂದು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಅದೇ ಸಂದರ್ಭದಲ್ಲಿ  ವೃದ್ಧ ಕೂಡ ಮೊಸಳೆಯ ಮುಖಕ್ಕೆ ಒದ್ದಿದ್ದಾನೆ. ಆದರೆ, ಮೊಸಳೆಯಿಂದ ಅಂತರ ಕಾಯ್ದುಕೊಂಡು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News