ಸ್ಮಾರ್ಟ್ ಫೋನ್ ಚಾಳಿಯಿಂದ ದೂರ ಹೋಗಬೇಕೆ? ಇಲ್ಲಿದೆ ಉಪಾಯ

ತಂತ್ರಜ್ಞಾನದ ಈ ಯುಗದಲ್ಲಿ ಸ್ಮಾರ್ಟ್ ಫೋನ್ ನಿಶ್ಚಿತವಾಗಿ ಜನರ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸುತ್ತಿದೆ. ಆದರೆ, ಹಲವರಲ್ಲಿ ಈ ಸ್ಮಾರ್ಟ್ ಫೋನ್ ಬಳಕೆ ಒಂದು ಚಾಳಿಯಾಗಿ ಪರಿಣಮಿಸಿದೆ.

Last Updated : Mar 8, 2020, 02:41 PM IST
ಸ್ಮಾರ್ಟ್ ಫೋನ್ ಚಾಳಿಯಿಂದ ದೂರ ಹೋಗಬೇಕೆ? ಇಲ್ಲಿದೆ ಉಪಾಯ title=

ತಂತ್ರಜ್ಞಾನದ ಈ ಯುಗದಲ್ಲಿ ಸ್ಮಾರ್ಟ್ ಫೋನ್ ನಿಶ್ಚಿತವಾಗಿ ಜನರ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸುತ್ತಿದೆ. ಆದರೆ, ಹಲವರಲ್ಲಿ ಈ ಸ್ಮಾರ್ಟ್ ಫೋನ್ ಬಳಕೆ ಒಂದು ಚಾಳಿಯಾಗಿ ಪರಿಣಮಿಸಿದೆ. ಆದರೆ, ಅವರ ಈ ಚಾಳಿ ಅವರ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಒಂದು ವೇಳೆ ಈ ಚಾಳಿ ನಿಮಗೂ ಕೂಡ ಅಂಟಿಕೊಂಡಿದ್ದರೆ, ನಿಮ್ಮ ಸ್ಮಾರ್ಟ್ ಫೋನ್ ನಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಇದರಿಂದ ನಿಮ್ಮ ಜೀವನದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂಬುದು ಭವಿಷ್ಯದಲ್ಲಿ ನಿಮಗೆ ತಿಳಿಯಲಿದೆ. ಕೆಲವು ವಿಶಿಷ್ಟ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಸ್ಮಾರ್ಟ್ ಫೋನ್ ನಿಂದ ದೂರ ಉಳಿಯಬಹುದು.

ಪುಸ್ತಕ ಓದುವ ಅಭ್ಯಾಸ ಪುನಃ ಬೆಳೆಸಿ
ಯಾವುದೇ ಒಂದು ಸಂದರ್ಭದಲ್ಲಿ ಮಾಡಲು ಯಾವುದೇ ಕೆಲಸ ಇಲ್ಲ ಎಂದು ನಿಮಗೆ ಅನಿಸಿದರೆ, ಸ್ಮಾರ್ಟ್ ಫೋನ್ ಮೇಲೆ ಇಂಟರ್ನೆಟ್ ಸರ್ಫಿಂಗ್ ಮಾಡುವುದನ್ನು ಬಿಟ್ಟು, ನಿಮ್ಮ ಅಭಿರುಚಿಗೆ ತಕ್ಕಂತೆ ಯಾವುದೇ ಒಂದು ಪುಸ್ತಕವನ್ನು ಓದಿ. ಇದರಿಂದ ನಿಮ್ಮ ಮತ್ತು ಸ್ಮಾರ್ಟ್ ಫೋನ್ ನಡುವಿನ ಅನುಬಂಧ ಕಡಿಮೆಯಾಗಲಿದ್ದು, ಇದು ನಿಮಗೂ ಕೂಡ ಉತ್ತಮ ಅನುಭವ ನೀಡುತ್ತದೆ.

ಬಂಧು-ಮಿತ್ರರ ಜೊತೆ ಒಡನಾಟ ಬೆಳೆಸಿ
ಇತ್ತೀಚಿನ ದಿನಗಳಲ್ಲಿ ಜನರು ಕೇವಲ ಆನ್ಲೈನ್ ನಲ್ಲಿ ಮಾತ್ರ ಸಂಭಾಷಣೆಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಆನ್ಲೈನ್ ನಲ್ಲಿ ಚಾಟಿಂಗ್ ಅನ್ನು ಬಂದ್ ಮಾಡಿ, ಖುದ್ದಾಗಿ ಜನರನ್ನು ಸಂಪರ್ಕಿಸಲು ಆರಂಭಿಸಿ. ಬಂಧು ಮಿತ್ರರ ಜೊತೆಗೆ ಒಡನಾಟ ಹೆಚ್ಚಾಗುವುದರಿಂದ ನಿಮ್ಮ ಸ್ಮಾರ್ಟ್ ಫೋನ್ ಚಾಳಿ ತೊಲಗಲಿದೆ.

ಪರಿಸರದ ಜೊತೆಗೆ ಸಂಪರ್ಕ ಬೆಳೆಸಿ
ಮನೆಯಲ್ಲಿ ಇರುವ ಸಂದರ್ಭಗಳಲ್ಲಿ ನೀವು ಮೊಬೈಲ್ ಫೋನ್ ಅನ್ನು ದೂರವಿರಿಸಿ ಹಾಗೂ ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಿರಿ ಹಾಗೂ ಅವರ ಜೊತೆಗೆ ಆತ್ಮೀಯವಾಗಿ ಮಾತನಾಡಿ. ಸ್ನೇಹಿತರ ಜೊತೆಗೂ ಕೂಡ ಕಾಲ ಕಳೆಯಲು ಪ್ರಯತ್ನಿಸಿ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಸಿಗಲಿದ್ದು, ಉತ್ತಮ ಅನುಭವ ನಿಮ್ಮದಾಗಲಿದೆ.

ಭೀತಿಯ ಭಾವನೆಯನ್ನು ನಿಯಂತ್ರಿಸಿ
ಇತ್ತೀಚಿಗೆ ಜನರು ಮೊಬೈಲ್ ಫೋನ್ ಕಾರಣದಿಂದ ಕಳೆದುಹೋಗುವ ಭೀತಿಯ ಭಾವನೆಯಿಂದ ಬಳಲುತ್ತಿದ್ದಾರೆ. ನಿಮ್ಮ ಮೇಲೆ ಈ ರೀತಿಯ ಭಾವನೆಗಳು ಹಿಡಿತ ಸಾಧಿಸಲು ಬಿಡಬೇಡಿ. ಈ ಕಾರಣದಿಂದಲೂ ಕೂಡ ಜನರು ಸ್ಮಾರ್ಟ್ ಫೋನ್ ನಿಂದ ದೂರವಿರುವುದಿಲ್ಲ ಹಾಗೂ ಪದೆ ಪದೆ ಕಾಲ್ ಮಾಡುತ್ತಾರೆ. ಆದರೆ, ಮಾನಸಿಕವಾಗಿ ಇದು ಭಾರಿ ಪರಿಣಾಮ ಬೀರುತ್ತದೆ.

ಸ್ಮಾರ್ಟ್ ಫೋನ್ ನ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ನೋಟಿಫಿಕೇಶನ್ ಬಂದ್ ಮಾಡಿ
ಸ್ಮಾರ್ಟ್ ಫೋನ್ ನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ ನೋಟಿಫಿಕೇಶನ್ ಬಂದ್ ಮಾಡಿ. ಇದರಿಂದ ಪದೆ ಪದೆ ನಿಮ್ಮ ಗಮನ ಸ್ಮಾರ್ಟ್ ಫೋನ್ ಗೆ ಬರುವ ನೋಟಿಫಿಕೇಶನ್ ಸೌಂಡ್ ಕಡೆಗೆ ಹರಿಯುವುದಿಲ್ಲ. ಅಷ್ಟೇ ಅಲ್ಲ ಯಾರಿಗಾದರು ನಿಮ್ಮ ಬಳಿ ಮಹತ್ವದ ಕೆಲಸ ಇದೆ ಎಂದಾದಲ್ಲಿ ಅವರು ನೇರವಾಗಿ ನಿಮ್ಮನ್ನು ಸಂಪರ್ಕಿಸಿ ಮಾತನಾಡಬಹುದು.

ಫೋನ್ ಪರಿಶೀಲಿಸುವ ಸಮಯ ನಿಗದಿಪಡಿಸಿ
ಸ್ಮಾರ್ಟ್ ಫೋನ್ ಚಾಳಿಯಿಂದ ದೂರವಿರಲು ನೀವು ನಿಮ್ಮ ಫೋನ್ ಪರಿಶೀಲಿಸುವ ಸಮಯವನ್ನು ಗೊತ್ತುಪಡಿಸಿ. ಅದೇ ವೇಳೆ ಎಲ್ಲ ಅಪ್ಡೇಟ್ ಗಳನ್ನು ಪರಿಶೀಲಿಸಿ. ಫೋನ್ ಅನ್ನು ಪದೆ ಪದೆ ವೀಕ್ಷಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪ್ಡೇಟ್ ಸಿಗುವುದು ಅಸಾಧ್ಯ.

Trending News