ಚಿನ್ನ ಖರೀದಿಸಬೇಕೇ? ಮೊದಲು ಈ ವರದಿ ಓದಿ

ಇರಾನ್ ಮತ್ತು ಯುಎಸ್ ನಡುವಿನ ಮಿಲಿಟರಿ ಉದ್ವಿಗ್ನತೆಯಿಂದಾಗಿ ಚಿನ್ನ ಮತ್ತು ಬೆಳ್ಳಿಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಹೆಚ್ಚಳ ಉಂಟಾಗಿದೆ. ವಿದೇಶಿ ಮಾರುಕಟ್ಟೆಯಿಂದ ಸಿಕ್ಕ ಈ ಸಂಕೇತಗಳಿಂದಾಗಿ ಶುಕ್ರವಾರ ಭಾರತೀಯ ಸರಕು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.

Last Updated : Jan 3, 2020, 05:07 PM IST
ಚಿನ್ನ ಖರೀದಿಸಬೇಕೇ? ಮೊದಲು ಈ ವರದಿ ಓದಿ title=

ನವದೆಹಲಿ: ಇರಾನ್ ಮತ್ತು ಯುಎಸ್ ನಡುವಿನ ಮಿಲಿಟರಿ ಉದ್ವಿಗ್ನತೆಯಿಂದಾಗಿ ಚಿನ್ನ ಮತ್ತು ಬೆಳ್ಳಿಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಹೆಚ್ಚಳ ಉಂಟಾಗಿದೆ. ವಿದೇಶಿ ಮಾರುಕಟ್ಟೆಯಿಂದ ಸಿಕ್ಕ ಈ ಸಂಕೇತಗಳಿಂದಾಗಿ ಶುಕ್ರವಾರ ಭಾರತೀಯ ಸರಕು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಇದೇ ವೇಳೆ ವಿದೇಶಿ ಮಾರುಕಟ್ಟೆಯಲ್ಲಿಯೂ ಸಹ ಚಿನ್ನದ ಬೆಲೆ 4 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಇದರಿಂದ ಡಾಲರ್‌ನ ದೌರ್ಬಲ್ಯ ಮತ್ತು ಚೀನಾದಲ್ಲಿ ಹೊಸ ವರ್ಷ ಪ್ರಾರಂಭವಾಗುವ ಮೊದಲು ಮಾಡಿದ ಖರೀದಿಗಳಿಗೆ ಬುಲಿಯನ್ ಮಾರುಕಟ್ಟೆಗೆ ಭಾರೀ ಬೆಂಬಲ ಸಿಕ್ಕಂತಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಏಂಜಲ್ ಬ್ರೋಕಿಂಗ್‌ನ ಉಪಾಧ್ಯಕ್ಷ (ಇಂಧನ ಮತ್ತು ಕರೆನ್ಸಿ ಸಂಶೋಧನೆ) ಅನುಜ್ ಗುಪ್ತಾ, ಚಿನ್ನದಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ಒಂದೇ ವರ್ಷದಲ್ಲಿ ಅಪಾರ ಆದಾಯ ಹರಿದುಬಂದಿದೆ ಎಂದಿದ್ದಾರೆ. ಭಾರತದಲ್ಲಿ ಈ ಆದಾಯ ಶೇಕಡಾ 23.77 ರಷ್ಟಿದ್ದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದು ಶೇ 18.28 ರಷ್ಟಿದ್ದು,  ಹೂಡಿಕೆದಾರರು ಹಳದಿ ಲೋಹದಲ್ಲಿ ಹೂಡಿಕೆ ಮೇಲೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಮಾರುಕಟ್ಟೆಯ ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿ ಬೆಳಿಗ್ಗೆ 11.56 ಕ್ಕೆ,  ಪ್ರತಿ10 ಗ್ರಾಂ ಚಿನ್ನದ ಬೆಲೆ ರೂ. 39,865ಕ್ಕೆ ತಲುಪಿದ್ದು, ಈ ಹಿಂದಿನ ಬೆಲೆಗೆ ಹೋಲಿಸಿದರೆ ಅದು ರೂ. 588 ಅಥವಾ ಶೇ.1.50 ರಷ್ಟು ಹೆಚ್ಚಾಗಿದೆ. ಎಂಸಿಎಕ್ಸ್ ನಲ್ಲಿ ಪ್ರತಿ 10 ಗ್ರಾಂ ಚಿನ್ನ  39,920 ರೂ.ಕ್ಕೆ ಮಾರಾಟವಾಗುತ್ತಿದ್ದು, ಇದು ಇದುವರೆಗಿನ ದಾಖಲೆಯ ಮಟ್ಟವಾಗಿದೆ. ಇದಕ್ಕೂ ಮೊದಲು 2019 ರ ಸೆಪ್ಟೆಂಬರ್ 4 ರಂದು  ಪ್ರತಿ  10 ಗ್ರಾಂ ಚಿನ್ನದ ಬೆಲೆ ರೂ.39,885ಕ್ಕೆ ಏರಿಕೆಯಾಗಿತ್ತು.

ಎಂಸಿಎಕ್ಸ್‌ನಲ್ಲಿ ಪ್ರತಿ10 ಗ್ರಾಂ ಚಿನ್ನದ ಬೆಲೆ ಶೀಘ್ರವೇ 40,000 ರೂ.ಗಳ ಗಡಿ ದಾಟಲಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಎಂಸಿಎಕ್ಸ್‌ನಲ್ಲಿ  ಪ್ರತಿ ಕೆಜಿಗೆ 47,715 ರೂ.ಗಳಷ್ಟಿದ್ದ ಬೆಳ್ಳಿಯ ಬೆಲೆಯೂ ಕೂಡ ರೂ.693 ಅಥವಾ ಶೇ.1.47 ರಷ್ಟು ಹೆಚ್ಚಾಗಿ, ರೂ.47,844ಕ್ಕೆ ಬಂದು ತಲುಪಿದೆ.

Trending News