ದಂತೇವಾಡ ಉಪಚುನಾವಣೆಗೆ ಮತದಾನ ಪ್ರಾರಂಭ; 1,88,000 ಮತದಾರರಿಂದ 9 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ನಕ್ಸಲೈಟ್ ಪೀಡಿತ ಪ್ರದೇಶವಾದ ಕಾರಣ, ಈ ಕ್ಷೇತ್ರದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.

Last Updated : Sep 23, 2019, 08:25 AM IST
ದಂತೇವಾಡ ಉಪಚುನಾವಣೆಗೆ ಮತದಾನ ಪ್ರಾರಂಭ; 1,88,000 ಮತದಾರರಿಂದ 9 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ title=

ನವದೆಹಲಿ: ಛತ್ತೀಸ್‌ಗಢದ ದಾಂತೇವಾಡ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಮತದಾನ ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದೆ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ಮತದಾನ ನಡೆಯಲಿದೆ. ನಕ್ಸಲೈಟ್ ಪೀಡಿತ ಪ್ರದೇಶವಾದ ಕಾರಣ, ಈ ಕ್ಷೇತ್ರದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಮತ್ತು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. 

ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಲು, ಭದ್ರತಾ ಪಡೆಯ 57 ಹೆಚ್ಚುವರಿ ಪಡೆಗಳನ್ನು ಇಲ್ಲಿಗೆ ಕಳುಹಿಸಲಾಗಿದೆ. ಡಿಆರ್‌ಜಿ, ಸಿಆರ್‌ಪಿಎಫ್ ಮತ್ತು ಎಸ್‌ಟಿಎಫ್ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.

ದಾಂತೇವಾಡದಲ್ಲಿ ಮತದಾನಕ್ಕಾಗಿ ಒಟ್ಟು 273 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 1 ಲಕ್ಷ 88 ಸಾವಿರ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಈ ಸ್ಥಾನದಿಂದ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ ಬಿಜೆಪಿಯ ಶಾಸಕ ಭೀಮಾ ಮಾಂಡವಿ ಅವರ ಪತ್ನಿ ಓಜಸ್ವಿ ಮಾಂಡವಿ ಮತ್ತು ಕಾಂಗ್ರೆಸ್ ನ ದೇವತಿ ಕರ್ಮ ಕಣದಲ್ಲಿದ್ದಾರೆ. ದೇವತಿ ಕರ್ಮ ಬಸ್ತರ್ ಟೈಗರ್ ಹೆಸರಿನ ಪ್ರಸಿದ್ಧ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಮಹೇಂದ್ರ ಕರ್ಮ ಅವರ ಪತ್ನಿ. ಈ ಇಬ್ಬರೂ ಪ್ರಬಲ ಆಭ್ಯರ್ಥಿಗಳಾದ ಕಾರಣ ಈ ಕ್ಷೇತ್ರದಲ್ಲಿ ಸ್ಪರ್ಧೆ ತುಂಬಾ ಕಠಿಣವಾಗಿದೆ.

ಶಾಸಕ ಭೀಮಾ ಮಾಂಡವಿ ಅವರ ನಿಧನದ ನಂತರ ದಂತೇವಾಡ ವಿಧಾನಸಭೆ ಸ್ಥಾನ ಖಾಲಿಯಾಗಿತ್ತು. ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಶಾಸಕರು ನಕ್ಸಲರಿಂದ ಹತ್ಯೆಗೀಡಾದರು. ಈ ಸ್ಫೋಟದಲ್ಲಿ ದಿವಂಗತ ಶಾಸಕ ಭೀಮಾ ಮಾಂಡವಿ ಅವರೊಂದಿಗೆ ಅವರ ಚಾಲಕ ಮತ್ತು ಮೂವರು ಸೈನಿಕರು ಹುತಾತ್ಮರಾಗಿದ್ದರು. ವಾಸ್ತವವಾಗಿ, ದಂತೇವಾಡ-ಸುಕ್ಮಾ ರಸ್ತೆಯ ನಕುಲ್ನರ್ ಬಳಿ ಶಾಸಕ ಭೀಮಾ ಮಾಂಡವಿ ಅವರ ವಾಹನವನ್ನು ನಕ್ಸಲರು ಗುರಿಯಾಗಿಸಿಕೊಂಡಿದ್ದರು, ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ವಾಹನವು 200 ಮೀಟರ್ ದೂರದಲ್ಲಿ ಬಿದ್ದಿತು.
 

Trending News