ಸಮೃದ್ಧ, ಶಕ್ತಿಶಾಲಿ ಭಾರತಕ್ಕಾಗಿ ತಪ್ಪದೇ ಮತದಾನ ಮಾಡಿ: ಯೋಗಿ ಆದಿತ್ಯನಾಥ್

ಶಕ್ತಿಶಾಲಿ ಹಾಗೂ ಸಮೃದ್ಧ ಭಾರತಕ್ಕಾಗಿ ತಪ್ಪದೇ ಮತದಾನ ಮಾಡಿ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜನತೆಗೆ ಕರೆ ನೀಡಿದ್ದಾರೆ.

Last Updated : Apr 29, 2019, 11:19 AM IST
ಸಮೃದ್ಧ, ಶಕ್ತಿಶಾಲಿ ಭಾರತಕ್ಕಾಗಿ ತಪ್ಪದೇ ಮತದಾನ ಮಾಡಿ: ಯೋಗಿ ಆದಿತ್ಯನಾಥ್ title=

ಲಕ್ನೋ: ಶಕ್ತಿಶಾಲಿ ಹಾಗೂ ಸಮೃದ್ಧ ಭಾರತಕ್ಕಾಗಿ ತಪ್ಪದೇ ಮತದಾನ ಮಾಡಿ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜನತೆಗೆ ಕರೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ಜಾರಿಯಲ್ಲಿದ್ದು, ಉತ್ತರಪ್ರದೇಶದಲ್ಲಿ 13 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಸಮೃದ್ಧ ಮತ್ತು ಶಕ್ತಿಶಾಲಿ ಭಾರತಕ್ಕಾಗಿ, ಉತ್ತಮವಾದ ಸರ್ಕಾರಕ್ಕಾಗಿ, ನಿಮ್ಮ ಕನಸುಗಳನ್ನು ಪೂರೈಸಿಕೊಳ್ಳಲು ನಿಮ್ಮ ಮನೆಯಿಂದ ಹೊರಬಂದು ಮತಗಟ್ಟೆಗಳಿಗೆ ತೆರಳಿ ತಪ್ಪದೇ ಮತದಾನ ಮಾಡಿ. ಮೊದಲು ಮತದಾನ, ನಂತರ ಜಲಪಾನ!" ಎಂದಿದ್ದಾರೆ. 

ಮುಂದುವರೆದು, "ಬಿಸಿಲಿನ ಝಳ ಹೆಚ್ಚಾಗಿದೆ, ನಿಮ್ಮ ಆರೋಗ್ಯದ ಬಗ್ಗೆಯೂ ಗಮನಕೊಡಿ. ಆದರೆ ತಪ್ಪದೆ ಮತ ಹಾಕಿ. ಒಂದೊಂದು ಮತ ಸೇರಿ ಸರ್ಕಾರ ರಚನೆಯಾಗುತ್ತದೆ" ಎಂದು ಯೋಗಿ ಹೇಳಿದ್ದಾರೆ.

ಉತ್ತರಪ್ರದೇಶದ ಶಹಜಹಾಪುರ್ (ಎಸ್ಸಿ), ಖೇರಿ, ಹಾರ್ದೊಯ್ (ಎಸ್ಸಿ), ಮಿಸರಿಖ್ (ಎಸ್ಸಿ), ಉನ್ನಾವ್ (ಎಸ್ಸಿ), ಫರು ಖಾಬಾದ್, ಇಟಾವಾ (ಎಸ್ಸಿ), ಕನೌಜ್, ಅಕ್ಬರ್ಪುರ್ ಜಲೋನ್ (ಎಸ್ಸಿ), ಝಾನ್ಸಿ ಮತ್ತು ಹಮೀರ್ಪುರ ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 2.38 ಕೋಟಿ ಮತದಾರರು 27,513 ಮತಗಟ್ಟೆಗಳಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.
 

Trending News